ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ | ಉಪಸ೦ಹಾ ರಭಾಷಣ. ಅಕ್ಟೋಬರ್ ೧೯೧೮. ದೊನ್ನೆ ಯಂ ಹರಹಿ ಬಾಳೆಲೆಯ ಹಾಳೆಯ ಹಾಕಿ। ಬಿನ್ನಣದೆ ಮಾಡಿದಾ ಚಾಕದೆಡೆಗಳ ಮುಂದೆ | ಜನ್ನಿ ನಾ ರವ ಮೇಲಕೆತ್ತಿ ಕಿಜು ಸುತ್ತುವರಿ ತೆಗೆದು ಸಡಿಲಿಸಿ ಧೋತ್ರಮ೦! ಚೆನ್ನಾಗಿಯಾಪೋಶನವನೆತ್ತಿ ಕುಳ್ಳಿರ್ದ್ದು! ಭಿನ್ನ ರುಚಿಮಾಡಿ ಹರಿಸದೆ ಗಡ್ಡ ಮೀಸೆಗಳು! ಮಂ ನೀವಿಕೊಳ್ಳುತ್ತೆ ಭೋಜನವನಿ೦ತು ಮಾಡುತ್ತಿರ್ದ್ದರಾ ಸಾರ್ವರು | ಓಗರವ ತಾ ತೊಗೆಯನಿಕ್ಕು ಹಸನಾಯು ಮೇ 1 ಲೋಗರವ ಬಡಿಸು ದೊನ್ನೆ ಗಳು ಹಿಡಿವ೦ತೆ ಯುಂ। ಬಾಗಿ ಹೆರೆದುಪ್ಪವೆಜತೆಯಾ ಪಳಿ ನನಟ್ಟು ಕಲಸುವೋಗರವ ತೋಜಾ || ಬೇಗದಿಂದೆಡೆಮಾಡಿದಿಡ್ಡಲಿಗೆದೋಸೆಗಳ | ಮೇಗೆ ಸಕ್ಕರೆ ಬಟ್ಟವಾಲ ಹೊಯ್ಕೆ ನುತಮಾ | ರೋಗಣೆಯನಾ ಪೊಟ್ಟೆ ಯೊಡೆವ ಮರ್ಯಾದೆ ಯೋಳಗುಂಡು ತೇಗುತ್ತಿರ್ದ್ದರು | ಪಾಯಸದ ಸರಿಗಳ೦ ನೋಡಿ ಪ೦ಡಿತರೆ ಸವಿ ! ಯಾಯಿತೇ ಆಯು ಪಾಧ್ಯಾ ಯರೇ ಕರಜಿಗೆಯ | ಕಾಯ ದೋಸೆಗಳ ಹಸನಂ ಪುರೋಹಿತರೆ ಚೆನ್ನಾಗಿ ಸವಿಸವಿದು ನೋಡಿ|| ಈ ಯಜ್ಞ ಯರಿಗೆಯ ಮೃದುತ ರಕೆ ಸರಿಯುಂಟೆ | ಜೋಯಿಸರೆ ಕೇಳಿ ಸಕ್ಕರೆಬುರುಡೆಗಳ ನನ್ನು | ಬಾಯ ಬಜನ೦ ಬಿಡಿಸುತಿವೆ ದೀಕ್ಷಿತರೆ ಎಂದು ಕೊಂಡಾಡುತಿರ್ದ್ದರಾಗ | [« ಸಮಕ್ಷ್ಯ, ಕೌನ" - ಭೋಜನವರ್ಣನೆ.] ಸ್ವಯಂಸೇವಕರ ಆದರಪುರಸ್ಸರವಾದ ಉಪಚಾರವು ಚಿರಸ್ಮರಣೀಯವಾಗಿದೆ. ಈ ಮೇರೆಗೆ ಅಧ್ಯಕ್ಷರು ಭೋಜನಪದಾರ್ಥಗಳ ವರ್ಣನೆಯನ್ನು ಬಹು ಸ್ವಾರಸ್ಯವಾಗಿ ಮಾಡಿದನಂತರ ಸಭಾಸದರ ಕರಾಸ್ಸಾಲನವು ಮಂದಿರದಲ್ಲೆಲ್ಲ ಮೊಳಗುತ್ತಿರಲು ಗಂಭೀರವಾದ ತಮ್ಮ ಭಾಷಣವನ್ನು ಮುಗಿಸಿದರು. ಅನಂತರ ಅಧ್ಯಕ್ಷರ ಗುಣಾತಿಶಯಗಳನ್ನು ಕೊಂಡಾಡಿ ಅನೇಕಜನ ಪ್ರತಿನಿಧಿಗಳು ಅವರನ್ನು ವಂದಿಸಿದ ಮೇಲೆ ಅವರಿಗೆ ಪುಷ್ಪಹಾರವನ್ನೂ ತುರಾಯಿಯನ್ನೂ ಸಮರ್ಪಿಸಿದರು. ಕಡೆಯಲ್ಲಿ ಕನ್ನಡಮಾತೆಗೂ ಕರ್ಣಾಟಕ ಸಿಂಹಾಸನಾಧಿಪತಿಗಳಾದ ಮಹೀ ಶೂರ ಶ್ರೀಮನ್ಮಹಾರಾಜರವರಿಗೂ ಜಯವಾಗಲೆಂಬ ಶಬ್ದವು ಸಭಾಮಂದಿರ ದಲ್ಲೆಲ್ಲಾ ತುಂಬಿ ತುಳುಕುತ್ತಿದ್ದಿತು. ಇಲ್ಲಿಗೆ ಕರ್ಣಾಟಕ ಸಾಹಿತ್ಯ ಸಮ್ಮೇಳನದ ೪ ನೆಯ ಅಧಿವೇಶನವು ಮುಗಿಯಿತು. ೧೫೨