ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸc - ಆಶ್ವಯುಜ.] ಪರಿಷತ್ಕಾರ್ಯವಿವರ. [ಕರ್ಣಾಟಕ ಸಾಹಿತ್ಯ '..... ..... .. ... - -.. - ವೆಂದು ಸಭಾಧ್ಯಕ್ಷರು ಸೂಚಿಸಲು ಅವರ ಅಭಿಪ್ರಾಯವನ್ನು ಸಭೆಯವರು ಅನು ಮೋದಿಸಿ ಅಂಗೀಕರಿಸಿದರು. IV, ಆಸ್ಥಾನ ಮಹಾವಿರ್ದ್ವಾ ಸರಳ ಕವಿಸೂರಿ ಕೆ. ರಾಜಗೋಪಾಲ ಚಕ್ರವರ್ತಿಗಳವರು ಮುಂದೆ ವಿವರಿಸಿರುವ ಸೂಚನೆಗಳನ್ನು ಕಾಲೋಚಿತವಾದ ಭಾಷಣೆಯೊಡನೆ ಸಭೆಯ ಮುಂದಿಡುವವರಾದರು. ಯಾವುವೆಂದರೆ :- (a) IV ನೆಯ ನಿಬಂಧನೆಯಲ್ಲಿ ಆಶ್ರಯದಾತರು ಸಹಾಯಕರು ಎಂಬ ಪದಗಳನ್ನು ಬಿಟ್ಟು ಆಜೀವ ಸದಸ್ಯರೆಂದು ಇರತಕ್ಕುದು, ೩ ನೆಯ ಪ್ಯಾರಾದಲ್ಲಿ ೨೫೦ ರೂಪಾಯಿಗಳಿಗೆ ಕಡಮೆಯಿಲ್ಲದೆ ಧನಸಹಾಯ ಮಾಡುವವರನ್ನು ಆಜೀವ ಸದಸ್ಯರೆಂದು ಬದಲಾಯಿಸಿ ನೂರು ರೂಪಾಯಿಗಳಿಗೆ ಕಡಮೆಯಿಲ್ಲದಂತೆ ಧನ ಸಹಾಯಮಾಡುವವರನ್ನು ಸಹಾಯಕರೆಂದೂ ಐವತ್ತು ರೂಪಾಯಿಗಳಿಗೆ ಕಡಮೆ ಯಿಲ್ಲದೆ ಧನಸಹಾಯ ಮಾಡುವವರನ್ನು ಆಜೀವಸದಸ್ಯರೆಂದೂ ಎಂಬ ಮಾತು ಗಳನ್ನು ಬಿಡತಕ್ಕುದು. ಷರಾ -ಆಜೀವಸದಸ್ಯರೆಂಬ ವರ್ಗದ ಹೆಸರನ್ನು ಪಡೆದಿರುವವರು ಪ್ರಥಮ ವರ್ಗದ ಸದಸ್ಯರುಗಳಿಗಿಂತಲೂ ಉನ್ನತಸದವಿಯನ್ನು ಹೊಂದಿರಬೇಕು. ಆಜೀವ ಸದಸ್ಯರು ಕೊಡುವ ಒಟ್ಟು ಮೊಬಲಗಿನ ವೃದಂಶವು ಪ್ರಥಮವರ್ಗದ ಸದಸ್ಯರ ವಾರ್ಷಿಕ ಚಂದಾ ಮೊಬಲಗಿಗೆ ಕಡಮೆಯಾಗಿರುವುದು ನ್ಯಾಯವಲ್ಲ. ಪಂಡಿತರವರ ಮೇಲಿನ ಸೂಚನೆಯನ್ನು ಮ! ರಾ! ಆರ್. ರಘುನಾಥ ರಾಯರು ಅನುಮೋದಿಸಿದರು. ಕೆಲವು ಕಾಲದವರೆಗೆ ಈ ವಿಷಯದ ಚರ್ಚೆಯು ನಡೆಯಿತು. ಕೊನೆಗೆ ಸಭೆಯವರಿಂದ ಈ ಸೂಚನೆಯು ಅಂಗೀಕೃತವಾಗಲಿಲ್ಲ. ವರಮಾನವನ್ನು ಹೆಚ್ಚಿಸಬೇಕೆಂಬುದೇ ಮೇಲಿನ ಸೂಚನೆಯ ಮುಖ್ಯಾಂಶ ವಾಗಿರುವುದರಿಂದ ಸದಸ್ಯರುಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸದಸ್ಯರುಗಳೆಲ್ಲರೂ ಪ್ರಯತ್ನ ಪಡಬೇಕೆಂದೂ ಪರಿಷತ್ತಿನ ವಾರ್ಷಿಕ ಸಭೆಗಳಲ್ಲಿ ಹೆಚ್ಚು ಸದಸ್ಯರುಗಳನ್ನು ಸೇರಿಸುವುದಕ್ಕೆ ಆವಶ್ಯಕವಾಗಿರುವ ಸರ್ವ ಪ್ರಯತ್ನಗಳನ್ನು ಸರ್ವರೂ ಮಾಡಬೇ ಕೆಂದೂ ನಿರ್ಧರವಾಯಿತು. (b) ಕನ್ನಡಭಾಷೆಯ ಏಳಿಗೆಯನ್ನು ಕಾಪಾಡುವುದಕ್ಕಾಗಿ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸದಸ್ಯರುಗಳಲ್ಲಿ ಮೈಸೂರು ಸರ್ಕಾರದ ಪ್ರಜಾಪ್ರತಿನಿಧಿಸಭೆ (Mysore Representative Assembly) ಗೆ ಒಬ್ಬ ಸದಸ್ಯರನ್ನೂ ಮೈಸೂರು ಸಂಪದಭ್ಯುದಯ ಸಮಾಜದ ವಿದ್ಯಾಭ್ಯಾಸದ ಕಾಖೆಗೆ (The Education Committee of the Mysore Economic Conference) ಒಬ್ಬರನ್ನೂ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭೆಗೆ (Mysore University Senate) ಒಬ್ಬರನ್ನೂ ಚುನಾಯಿಸಿ ಕಳುಹಿಸು ೧೨೨| ס