ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಆಶ್ವಯುಜ.] ಪರಿಷತ್ಯಾ ರ್ಯ ವಿವರ. | ಕರ್ಣಾಟಕ ಸಾಹಿತ್ಯ ಸದಸ್ಯರು ಭಾವಿಸಿ ಮತ್ತೊಂದು ವಾರ್ಷಿಕಸಭೆಯಲ್ಲಿ ಆವಶ್ಯಕವಾಗಿದ್ದಲ್ಲಿ ಈ ಸಲಹೆ ಯನ್ನು ತರಬಹುದೆಂದು ಅಭಿಪ್ರಾಯಪಡಲು ಪಂಡಿತರವರು ತಮ್ಮ ಸೂಚನೆ ಯನ್ನು ವಾಪಸು ತೆಗೆದುಕೊಂಡರು. V. ಮ ರಾ| ಎಚ್, ಚೆನ್ನಕೇಶವಯ್ಯಂಗಾರ್ಯರವರು ಮೂರನೆಯ ನಿಬಂಧನೆಯಲ್ಲಿ ಪರಿಷತ್ತಿನ ಉದ್ದೇಶಗಳಲ್ಲಿ ಸೇರಿಸತಕ್ಕ ಮತ್ತೊಂದುವಿಷಯವಾಗಿ ಕನ್ನಡದಲ್ಲಿ ಅದಕ್ಕೆ ಸಂಬಂಧಪಟ್ಟ ಕಾವ್ಯ, ವ್ಯಾಕರಣ, ಛಂದಸ್ಸು, ಅಲಂಕಾರ, ಚರಿತ್ರೆ, ಆಧುನಿಕ ಶಾಸ್ತ್ರವಿಷಯಗಳು, ಪ್ರಬಂಧರಚನೆ, ನಕ್ಷತ್ವ, ಇವೇ ಮೊದ ಲಾದುವುಗಳಲ್ಲಿ ಕ್ರಮಿಕ ಪರೀಕ್ಷೆಗಳನ್ನು ಏರ್ಪಡಿಸಿ ಅವುಗಳಲ್ಲಿ ತೇರ್ಗಡೆ ಹೊಂದಿದ ವರಿಗೆ ಯೋಗ್ಯತಾಪತ್ರವನ್ನಾಗಲಿ ಬಿರುದನ್ನಾಗಲಿ ಕೊಡತಕ್ಕುದು ಎಂಬ ಸೂಚನೆಯನ್ನು ಸಭೆಯಮುಂದೆ ಇಟ್ಟರು. ಮ। ರಾ। ಆರ್, ಬಿ, ಪೋಟದಾರರವರು ಮೇಲೆಕಂಡ ಸೂಚನೆಯನ್ನು ಅನುಮೋದಿಸಿದರು. 'ದ್ರವ್ಯಾನುಕೂಲತೆ ನೋಡಿಕೊಂಡು' ಎಂಬ ಮಾತುಗಳನ್ನು ಸೇರಿಸುವುದು ಆವಶ್ಯಕವೆಂದು ಬಹುಮಂದಿ ಅಭಿಪ್ರಾಯ ಪಟ್ಟರು. ಮೈಸೂರು ಸಂಸ್ಥಾನದಲ್ಲಿ ಪಂಡಿತಪರೀಕ್ಷೆಯು ನಡೆಯುತ್ತಿರುವುದರಿಂದ ಈ ಬಗೆಯ ಪರೀಕ್ಷೆ ಗಳನ್ನು ಏರ್ಪಡಿಸುವುದು ಅನಾವಶ್ಯಕವೆಂದು ಮ ರಾ ಆರ್. ರಘುನಾಥರಾಯ ರವರು ವಾದಿಸಿದರು. ಈ ಪರೀಕ್ಷೆಗಳನ್ನು ನಡೆಯಿಸುವುದಕ್ಕೆ ಪರಿಷತ್ತಿಗೆ ಸದ್ಯದಲ್ಲಿ ಉಪಪತ್ತಿ ಕಡಮೆಯಾಗಿರುವುದೆಂದು ಬಹುಮಂದಿ ಅಭಿಪ್ರಾಯಪಟ್ಟರು. ಕೊನೆಗೆ ಗ್ರಂಥಕರ್ತೃಗಳಿಗೂ ನಾಟಕಮುಂತಾದುವನ್ನು ಬರೆದವರಿಗೂ ಗ್ರಂಥಗಳು ಶ್ಲಾಘ ನೀಯವಾಗಿರುವ ಪಕ್ಷಕ್ಕೆ ಯೋಗ್ಯತಾಪತ್ರಿಕೆಗಳನ್ನೂ ಬಹುಮಾನ ಪದಕಗಳನ್ನೂ ಸಮ್ಮೇಳನದ ಕಾಲದಲ್ಲಿ ಕೊಡುವುದು ಉಚಿತವೆಂದು ನಿರ್ಧರವಾಯಿತು. _VI, ಮ। ರಾ1 ವಿ. ಬಿ. ಆಲೂರವರು ಮುಂದೆ ಕಾಣಿಸುವ ಸೂಚನೆ ಗಳನ್ನು ಸಭೆಯಮುಂದೆ ಇಟ್ಟ ರು. () ಕರ್ಣಾಟಕ ಸಾಹಿತ್ಯ ಸಮ್ಮೇಳನವು ಪ್ರತಿವರ್ಷವೂ ತಪ್ಪದೆ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವುದಕ್ಕೆ ಏರ್ಪಾಡುಗಳನ್ನು ಮಾಡುವುದಕ್ಕೂ ಅದರ ಕಾರ್ಯ ಕ್ರಮವನ್ನು ನಿರ್ಧರಿಸುವುದಕ್ಕೂ ಐದುಮಂದಿಯ ಉಪಸಭೆಯೊಂದನ್ನು ನಿಯಮಿಸ ಬೇಕು. ಮೇಲಣ ಸೂಚನೆಯನ್ನು ಮ| ರಾ|| ಬೆಂಗಳೂರಿನ ಟ. ಅಪೂರಾಯರವರು ಅನುಮೋದಿಸಿದರು, ಕಾರ್ಯನಿರ್ವಾಹಕ ಮಂಡಲಿಯವರು ಆಹ್ವಾನವನ್ನ೦ಗೀ ಕರಿಸಿದನಂತರದಲ್ಲಿ ಕಾರ್ಯಕ್ರಮವನ್ನು ರ್ನಿಧರಿಸುವುದಕ್ಕೆ ಈ ಉಪಸಭೆಯು ಏರ್ಪಾಡಾಗುವುದು ಉಚಿತವೆಂದು ಮ। ರಾ|| ಆರ್. ರಘುನಾಥರಾಯರವರು ವಾದಿಸಿದರು, ಆಯಾವರ್ಷದ ಕಾರ್ಯನಿರ್ವಾಹಕ ಸಭೆಯೇ ಇಂತಹ ಉಪಸಭೆ ಯನ್ನು ನಿಯಮಿಸತಕ್ಕುದೆಂದು ಕೊನೆಗೆ ನಿರ್ಧರಿಸಲ್ಪಟ್ಟಿತು. ೫೭