ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕೆ. ಪರಿಷತ್ಕಾರ್ಯವಿವರ. ೯ ಅಕ್ಟೋಬರ್ ೧೯೧೮. (b) ಕರ್ಣಾಟಕ ಸಾಹಿತ್ಯ ಪರಿಷತ್ರಿಕೆಯ ಸಂಪಾದಕ ಮಂಡಲಿಯ ವರ್ಗ ದಲ್ಲಿ ಮದರಾಸಿನವರೊಬ್ಬರು ಮುಂಬಯಿಯವರೊಬ್ಬರು ಇರಬೇಕು. ಎಂಬ ಸೂಚನೆಯು ಸಭೆಯವರಿಂದ ಅಂಗೀಕೃತವಾಯಿತು. (c) ಕಾರ್ಯನಿರ್ವಾಹಕ ಮಂಡಲಿಯಲ್ಲಿರುವ ಮುಂಬಯಿ, ಮದರಾಸು ಇಲಾಖೆಯ ಸದಸ್ಯರುಗಳು ಕಾರ್ಯನಿರ್ವಾಹಕ ಸಭೆಯಲ್ಲಿ ಹಾಜರಿಲ್ಲದಾಗ ಅವರ ಪರವಾಗಿ ಅವರ ಸೂಚನೆಗಳನ್ನು ಸೆಕ್ರೆಟರಿಗಳು ಸಭೆಯಮುಂದೆ ಇಡಬೇಕು. ಮತ್ತು ಕಾರ್ಯನಿರ್ವಾಹಕ ಮಂಡಲಿಯಲ್ಲಿರುವ ಮೈಸೂರು ಪ್ರಾಂತದ ಹೊರಗಿನ ಸದಸ್ಯರುಗಳಲ್ಲಿ ಕಾಲುಭಾಗದಷ್ಟು ಜನರು ಯಾವವಿಷಯದಮೇಲೆ ಲಿಖಿತಮೂಲಕ ವಾಗಿ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕೆಂದು ತೀರ್ಮಾನಿಸುವರೋ ಅಂತಹ ವಿಷಯದಲ್ಲಿ ಸೆಕ್ರೆಟರಿಗಳು ಗೈರುಹಾಜರಾಗಿದ್ದ ಸದಸ್ಯರುಗಳ ಅಭಿಪ್ರಾಯವನ್ನು ಲಿಖಿತಮೂಲಕವಾಗಿ ತರಿಸಿಕೊಳ್ಳತಕ್ಕುದು. ಎಂಬ ಸಲಹೆಯನ್ನು ಮ|| ರಾ|| ಬೆಂಗಳೂರಿನ ಟಿ, ಅತ್ತೂರಾಯರವರು ಅನು ಮೋದಿಸಿದರು, ಕೆಲವು ಕಾಲದವರೆಗೆ ಈ ವಿಷಯದ ಚರ್ಚೆಯು ನಡೆಯಿತು. ಅನಂತರದಲ್ಲಿ ಮ! ರಾ|| ಬೆಂಗಳೂರಿನ ಬಿ. ವೆಂಕಟನಾರಣಪ್ಪನವರು ತಾವು ಇಂಗ್ಲೀಷಿ ನಲ್ಲಿ ಕೊಟ್ಟಿರುವ ಸಲಹೆಯನ್ನು ಮೇಲಿನ ಸಲಹೆಗೆ ಬದಲಾಗಿ ಅಂಗೀಕರಿಸುವುದು ಉಚಿತವೆಂದು ವಾದಿಸಿದರು. ಅವಾವುದೆಂದರೆ :-ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರು ಕಾರ್ಯನಿರ್ವಾಹಕ ಸಭೆಗೆ ಬರಲು ಅನುಕೂಲವಿಲ್ಲದಿದ್ದಾಗ ಮತ್ತೊಬ್ಬ ಕಾರ್ಯನಿರ್ವಾಹಕ ಸದಸ್ಯರಿಗೆ ತಮ್ಮ ಮತ ಪ್ರದರ್ಶನಾಧಿಕಾರವನ್ನು ಕೊಟ್ಟು ಅವರ ಮೂಲಕವಾಗಿ ತಮ್ಮ ಮತವನ್ನು ಸಭೆಯಲ್ಲಿ ಸೂಚಿಸುವ ಹಕ್ಕನ್ನು ಪಡೆದಿರ ತಕ್ಕುದು ಹೀಗೆಯೇ ಪರಿಷತ್ತಿನ ಸದಸ್ಯರು ಪರಿಷತ್ತಿನ ಸಭೆಗೆ ಬರಲು ಅನುಕೂಲ ವಿಲ್ಲದಿದ್ದಾಗ ಪರಿಷತ್ತಿನ ಮತ್ತೊಬ್ಬ ಸದಸ್ಯರಿಗೆ ತಮ್ಮ ಮತಪ್ರದರ್ಶನಾಧಿಕಾರವನ್ನು ವಹಿಸಬಹುದು, ಆದರೆ ಹೀಗೆ ಮಾಡಬೇಕೆಂದು ಇರುವವರು ಕಾರ್ಯದರ್ಶಿ ಗಳಿಗೆ ತಮ್ಮ ಅಭಿಪ್ರಾಯವನ್ನು ಸಭೆಯು ನಡೆಯುವುದಕ್ಕೆ ಕನಿಷ್ಟ ಪಕ್ಷ ಎರಡು ದಿನ ಮುಂಚಿತವಾಗಿಯೇ ತಲಪುವಂತೆ ಬರಹಮೂಲಕವಾಗಿ ಪ್ರತಿನಿಧಿಯ ಹೊಸ ರನ್ನು ತಿಳಿಸಬೇಕು. ಈ ವಿಷಯದಲ್ಲಿ ಚರ್ಚೆಯು ನಡೆದಮೇಲೆ ಸರ್ವರಿಂದಲೂ ಮ|| ರಾ| ವೆಂಕಟ ನಾರಣಪ್ಪನವರ ಸಲಹೆಯು ಅಂಗೀಕರಿಸಲ್ಪಟ್ಟಿತು. (d) (1) ಪ್ರತಿವರ್ಷ, ಗ್ರಂಥಕರ್ತಗಳಿಂದ ಪರಿಷತ್ತಿಗೆ ಕಳುಹಿಸಲ್ಪಟ್ಟ ಪುಸ್ತಕಗಳನ್ನು ಪರೀಕ್ಷಿಸಿ ಅವುಗಳಿಗೆ ಬಕ್ಷೀಸು ಕೊಡುವುದಕ್ಕಾಗಿ ಒಂದು ಪರೀಕ್ಷಾ ಕಮಿಟಿಯನ್ನು ಏರ್ಪಡಿಸಬೇಕು. ಅದರಲ್ಲಿ ಮದರಾಸಿನವರಿಬ್ಬರು, ಮುಂಬಯಿ ಯವರಿಬ್ಬರು, ಮೈಸೂರಿನವರು ಮೂವರು ಹೀಗೆ ಏಳುಜನರಿರಬೇಕು. ೧೫೮