ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂll ಆಶ್ವಯುಜ ಮಾತೃಭಾಷಾಭಕ್ತಿ, ಸ! ಕರ್ಣಾಟಕ ಸಾಹಿತ್ಯ ಕರ್ಣಾಟಕಭಾಷಾಮಾತೆಯನ್ನು ಅಡಿಗಡಿಗೆ ನಂದಿಸುವವನೇ ಪುಣ್ಯ ಪುರುಷನು. ಆ ತಾಯಿಯನ್ನು ಕೊಂಡಾಡುವವನೇ ಭಾಗ್ಯವಂತನು ಅ೦ತಹ ಪುಣ್ಯ ಪುರುಷನ ಪಾದಧೂಳಿಯಿಂದ ಈ ಜಗತ್ತೇ ಪವಿತ್ರವಾಗಬಹುದು, ಕನ್ನಡ ಭಾಷೆಯೇ ಜೀವನ; ಕನ್ನಡಭಾಷೆಯೇ ಸುಲಭಸಾಧನ. ದೇವರೇ! ಜನ್ಮಜನ್ಮಾಂತರ ದಲ್ಲಿಯಾದರೂ ಕನ್ನಡಭಾಷೆಯಲ್ಲಿಯೇ ನನಗೆ ಪ್ರೇಮಪಿರಲಿ, ನನ್ನನ್ನು ಹುಟ್ಟಿಸು ವುದಾದರೆ, ಕನ್ನಡನಾಡಿಯಲ್ಲಿಯೇ ಹುಟ್ಟಿಸು, ಇತರ ದೇಶದಲ್ಲಿ ರಾಜನನ್ನಾಗಿ ಹುಟ್ಟಿ ಸುವುದಕ್ಕಿಂತ ಕರ್ಣಾಟಕದಲ್ಲಿ ಪಕ್ಷಿಯಾಗಿ ಹುಟ್ಟಿಸುವದೇ ನನಗೆ ಶ್ರೇಯಸ್ಕರವು. ವೃಕ್ಷಜನ್ಮದ ಪ್ರಾರಬ್ಬವಿದ್ದರೆ ಕರ್ಣಾಟಕದಲ್ಲಿ ವೃಕ್ಷವನ್ನಾಗಿ ಹುಟ್ಟಿಸು, ಏಕೆಂದರೆ ಜೀವಕ್ಕಿಂತಲೂ ಅತಿಶಯಪ್ರಿಯವಾದ, ವಾರಾಗಾರಾದಿಗಳಿಗಿಂತಲೂ ಪ್ರಿಯತಮ ನಾವ, ಅತ್ಯಂತ ಪವಿತ್ರವಾದ, ಕರ್ಣಾಟಕ ಭಾಷೋತ್ತೇಜಕಸಭಾಮಂದಿರದ ಆಧಾರ ಸ್ತಂಭವಾಗಿ ಆ ಕರ್ಣಾಟಕಮಾತೆಯ ಸೇವೆಯಾದರೂ ನಿರಂತರ ದೊರಕಬಹುದು. ಈ ಕನ್ನಡಭಾಷೆಯನ್ನು ಉನ್ನತಸ್ಥಿತಿಗೆ ತಂದರೆ ಮಹಾಯಾತ್ರಾಫಲವು; ಕಿ೦ಬಹುನಾ! ಸಕಲತೀರ್ಥಕ್ಷೇತ್ರಯಾತ್ರಾಫಲಗಳಾದರೂ ದೊರಕುವುವು. ಇಂತಹ ಮಾತೆಯ ಸೇವೆಯು ಎಂದು ಘಟಿಸುವುದೋ ಅಂದೇ ಸುದಿನ. ಆ ಹೊತ್ತೇ ನಾನು ಧನ್ಯ ನಾದೇನು, ಕೃತಾರ್ಥನಾದೇನು. ಇಂತಹ ಕನ್ನಡತಾಯಿಯ ಸೇವೆಯನ್ನು ನನ್ನ ಕಡೆ ಯಿಂದ ಮೇಲಿಂದಮೇಲೆ ಮಾಡಿಸಲೆಂದು ರಮಾಧವನನ್ನು ಪ್ರಾರ್ಥಿಸುವೆನು. ಇತಿ ಮಾತೃಭಾಷಾಭಕ್ತನಾದ 2 ರ್ಮಾಚಾರ್ಯ ಗಲಗಲಿ. ೧೬?