ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ-ಮಹಾರಾಷ್ಟ್ರ ಸೊರಟೂರು ಕುಲಕಣರ್ಿಯವರು ಧಾರವಾಡದ “ ಕರ್ಣಾಟಕ ವ್ಯy " ಕೈ (೧೬-೬-೧೯(೧೮) ಈ ಲೇಖನವನ್ನು ಬರೆದಿರುವರು. ಇಂಗ್ಲಿಷ್‌, ಮಹಾರಾಷ್ಟ್ರ ಭಾಷೆಗಳ ಅತಿಶಯಸಂಪರ್ಕದಿಂದ ಕನ್ನಡವು ಹೀನಸ್ಥಿತಿಗೆ ಬರುವವೆಂಬ ಅಭಿಪ್ರಾಯವು ಇದರಲ್ಲಿ ಅಡಗಿದೆ. - ನನ್ನ ಕನ್ನಡ ವಾಯವನ್ನು ಸುಧಾರಿಸಿಕೊಂಡು ಮಹಾರಾಷ್ಟರೇ ಮೊದಲಾದ ಮುಂದೆ ಹೆಜ್ಜೆಯನ್ನಿಟ್ಟ ಜನಗಳ ಸಮಾನಯೋಗ್ಯತೆಯನ್ನು ಪಡೆಯಲಿಕ್ಕೂ, ಈ ವರೆಗೂ ಕನಸಿನಲ್ಲಿ ಕೂಡ ನೆನೆಸದಿದ್ದ ಶ್ರೀ ಪುಲಿಕೇಶಿ, ನೃಪತುಂಗ, ವಿದ್ಯಾರಣ್ಯರೇ ಮೊದ ಲಾದ, ನಮ್ಮ ಕನ್ನಡದ ಏಳ್ಮೆಯನ್ನು ಒಂದುಕಾಲದಲ್ಲಿ ಆಕಾಶಕ್ಕೆ ಮುಟ್ಟಿಸಿದ್ದ ಮಹಾ ಪುರುಷರ ಚರಿತ್ರೆಯನ್ನು ಓದಿರೆಂದು ಉಪದೇಶಿಸಿದುದಕ್ಕೂ, ಮತ್ತು ಲೇಖಕರ ಅನು ಪಮಲೇಖನಚಾತುರ್ಯದಿಂದ ನಮ್ಮ ಕನ್ನಡಪತ್ರಗಳನ್ನು ಹಣಕೆ ಸಹ ನೋಡದಂತೆ ಮಾಡುವ ಕೇಸರಿಯೇ ಮೊದಲಾದ ಸುಪ್ರಸಿದ್ಧ ಮಹಾರಾಷ್ಟ್ರವರ್ತಮಾನಪತ್ರಗಳನ್ನೂ ಇಂಗ್ಲಿಷ್ ವರ್ತಮಾನಪತ್ರಗಳನ್ನೂ ಸದ್ಯಕ್ಕೆ ಎಂದರೆ ನಮ್ಮ ಕನ್ನಡ ನಾಜ್ಯವು ಪರಿ ಪೂರ್ಣತೆಯನ್ನು ಹೊಂದುವವರೆಗೆ ನಮ್ಮ ಕನ್ನಡವಾಚನಾಲಯಗಳಲ್ಲಿ ತರಿಸಿದರೆ, ಅಪಕ್ವ ಮನಸ್ಸಿನ ನಮ್ಮ ಕನ್ನಡಿಗರು " ಅರಸನನ್ನು ಕಂಡು ಪುರುಷನನ್ನು ಮರೆತರು " ಎಂಬ ಗಾದೆಯಂತೆ ಕೇವಲ ಮಹಾರಾಷ್ಟ್ರ ಮುಂತಾದ ಪತ್ರಗಳ ವಾಕ್ಚಾತುರ್ಯಕ್ಕೆ ಬೆರಗಾಗಿ ಅವುಗಳನ್ನೇ ಓದುವ ಭ್ರಮಯುಕ್ತವಾದ ಸಂಭ್ರಮದಿಂದ ನಮ್ಮ ಐತಿ ಹಾಸಿಕಗ್ರಂಥಗಳನ್ನೂ ಮತ್ತು ತಕ್ಕಮಟ್ಟಿಗೆ ಕೇಸರಿಯ ಸಮಾನವಾಗಬಹು ದಾದ ಯೋಗ್ಯತೆ ಇದ್ದರೂ ಕೇವಲ ನಮ್ಮ ಮೂರ್ಖತನದಿಂದ ಉತ್ತೇಜನವಿಲ್ಲದೆ ಸಾಯುತ್ತ ಬೀಳುತ್ತ ಹೊರಡುತ್ತಿರುವ ನಮ್ಮ ಕನ್ನಡವರ್ತಮಾನಪತ್ರಗಳನ್ನೂ ಸ್ವಾಭಾವಿಕವಾಗಿಯೇ ಓದದೆ ಕನ್ನಡವಾಲ್ಮಯವನ್ನು ಪೂರ ಕೊಂದುಬಿಟ್ಟಾರೆಂಬ ಭೀತಿಯಿಂದ ಸದ್ಯಕ್ಕೆ ನಮ್ಮ ಕನ್ನಡವಾಚನಾಲಯಗಳಲ್ಲಿ ಕನ್ನಡೇತರಪತ್ರಗಳನ್ನು ತರಿಸಬಾರದೆಂದೂ, ಮತ್ತೂ ಕನ್ನಡೇತರಪತ್ರಗಳಿಗೆ ಸ್ವತಃ ವರ್ಗಣೀದಾರರಾಗಿಯೂ ಇಲ್ಲವೆ ಬೇರೆ ಸಿಕ್ಕ ಕಡೆಯಲ್ಲಿಯಾದರೂ ಓದಿ ಅವುಗಳ ಸಾರಾಂಶವನ್ನು ನಮ್ಮ ಕನ್ನಡಪತ್ರಗಳಲ್ಲಿ ತಂದು ಕನ್ನಡವಾಯವನ್ನು ಬಳೆಯಿಸಲುದ್ಯುಕ್ತರಾಗಿರೆಂದೂ ತಿಳಿಸುವ ಉಪದೇಶಕ್ಕೆ ನನಗೊಡಿರಿ. ಕನ್ನಡ ಬಾಂಧವರೇ ! ಕೇವಲ ಅನುಕರಣಮಾಡುವುದರಲ್ಲಿಯೇ ಇಷ್ಟು ದಿವಸಗಳನ್ನು ಕಳೆದ ನಮ್ಮ ಉಳಿದ ಆಯುಷ್ಯದಲ್ಲಿಯಾದರೂ ನಾವು ಯಾರು, بنا ೧೬೦