ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ಕಾಳಯುಕ್ತ ಸಂ ಆಶ್ವಯುಜ.ಕನ್ನಡ ನುಡಿ. | ಕರಟಕ ಸಾಹಿತ್ಯ .. ... .. .. .. .. ..---- -- - -- - ನಮ್ಮ ಭಾಷೆ ಯಾವುದು, ನಾವು ಮಾಡತಕ್ಕ ಕರ್ತವ್ಯವೇನು ? ಕರ್ತವ್ಯಪರಾಜುಖ ರಾದರೆ ನಮಗೆ ಎಂತಹ ದೋಷ ಬರುತ್ತದೆಂಬುದನ್ನು ವಿಚಾರಿಸುವಿರಾ ? ಹಿಂದೆ ಆಗಿಹೋದ ನಮ್ಮ ಶೂರ ಅರಸರ ಚರಿತ್ರಗಳೇ ಮೊದಲಾದ ನಮ್ಮ ಕನ್ನಡಗ್ರಂಥ ಗಳನ್ನು ಓದುವಿರಾ ? ಸಣ್ಣ ಪುಟ್ಟ ಮಹಾರಾಷ್ಟ್ರಬಂಧುಗಳು ಅಸೂಯೆಯಿಂದ ನಮ್ಮನ್ನು ಬೈದರೂ ಗಣನೆಗೆ ತಾರದೆ, ಅವರೊಡನೆ ವಾದಿಸುತ್ತ ಕೂಡುವುದರಲ್ಲಿ ವ್ಯರ್ಥವಾಗಿ ಕಾಲವನ್ನು ಕಳೆಯದೆ, ಅರ್ಧ ಬಿದ್ದು ಹೋಗಿರುವ ನಮ್ಮ ಕನ್ನಡ ದೇವಿಯ ಮಂದಿರದ ಕಂಪಿಗಳನ್ನು ಎತ್ತಿ ಹಿಡಿಯುವಿರಾ ? ನಮ್ಮ ಭಾವಿಕನ್ನಡದ ಏಳೆಗೆ ಮನಸ್ಸು ಕೊಟ್ಟು ಸಹಾಯಮಾಡುವಿರಾ ? ಹಾಗೆ ಮಾಡುವುದೇ ನಮ್ಮ ಪವಿತ್ರವಾದ ಕರ್ತವ್ಯವಾದುದರಿಂದ ಸಹಾಯಮಾಡಲೇಬೇಕೆಂದು ತಮ್ಮೆಲ್ಲರನ್ನೂ ಅತಿವಿನಯದಿಂದ ಪ್ರಾರ್ಥಿಸುತ್ತೇನೆ. ಕನ್ನಡನುಡಿ. ವ! ಮ, ಫ. ಗಣಾಚಾರ್ಯ, ಗೆಕಾಕಫಾಲ್ಸ್-ಇವರು ಬೆಳಗಾವಿಯ “ ವಿಭಾಕರ " ಪತ್ರಿಕೆಯಲ್ಲಿ (೮-೬-೧೮೧೮) ಈ ಲೇಖನವನ್ನು ಬರೆದಿರುವ, ಭಾಷಾಭಿಮಾನಿಗಳು ಮನಸ್ಸಿಗೆ ತಕ್ಕೆ ಕೆಲವು ಒಳ್ಳೆಯ ವಿಷಯಗಳು ಇದರಲ್ಲಿ ಅಡಗಿವೆ. ಕೂಡಿದ ಕುಂದುಗಳೊಡಲಿ : ಮೂಡಲಿ ಬಗೆ ಬಗೆಯ ತಿದ್ದುಪಡಿಗಳ್‌ ನುಡಿಯೊಳಕೆ ! ನಾಡಿಗೆ ನಾನೇ ಹೊಳೆಯಲಿ ! ನೋಡಲಿ ನುಡಿ ಮಾತೆ ಮೆಚ್ಚಿ ಕುಲುಕುಲು ನಗೆಯಿ೦ ಕನ್ನಡನುಡಿಯಲ್ಲಿ ಹಲವುಒಗೆಯು ಕೊರತೆಗಳುಂಟು, ಅವುಗಳನ್ನು ಹೊರ ಲಾಡಿಸಲು ಹಲವುಜನರು ಹಲವುಕಡೆಯಲ್ಲಿ ಹಲವುಬಗೆಯಿಂದ ಹೆಣಗುತ್ತಿರ. ವರು, ಆದರೆ ಕೆಲವು ಕಸರು ಹೊರಗಿನಿಂದ ಹಾರಿದಿಂದು ಕನ್ನಡನುಡಿಯಲ್ಲಿ ಕೂಡಿಕೊಳ್ಳುತ್ತಿರುವುದು, ಕಣ್ಣಿಗೆ ಕಂಡ ಕಸರನ್ನು ಆರಿಸುವುದು, ಎಲ್ಲ ಕನ್ನಡಿಗರ ಕೆಲಸ, ಅಕ್ಕಿಯೊಳಗಿನ ಹರಳುಗಳನ್ನು, ತಲೆಗೆ ಒಂದೊಂದರಂತೆ ಆರಿಸಿದರೆ, ಉಣ್ಣುವಾಗ ಎಲ್ಲರಿಗೂ ನೆಟ್ಟಗೆ ! ೧೬೧