ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಷತ್ವತಿ ಕೆ. ಕನ್ನಡನುಡಿ. ಅಕ್ಟೋಬರ್ ೧೯೧೮. ಪರಭಾಷೆಯೊಳಗಿನ ವಿಚಾರರಸವೈಚಿತ್ರ್ಯಗಳಿಂದ ಕನ್ನಡನುಡಿಯನ್ನು ಪುಷ್ಟಿ ಕರಿಸುವುದು, ಶ್ಲಾಘನೀಯವಾದ ಮಾತು ! ಆದರೆ ಬಂಗಾಲ, ಮಹಾರಾಷ್ಟ್ರ ಮೊದಲಾದ ಭಾಷೆಯೊಳಗಿನ ಗ್ರಂಥಗಳನ್ನು ಕನ್ನಡಕ್ಕೆ ಪರಿವರ್ತಿಸುವಾಗ, ಭಾಷಾ ಪದ್ದತಿಗೆ ವಿರುದ್ಧವಾದ ಪ್ರಯೋಗಗಳು ಬಂದಿರುತ್ತವೆ. ಆದುದರಿಂದ ನಮ್ಮ ಕನ್ನಡ ನುಡಿಯು, ಒ೦ಗಾಲ, ಗುಜರಾಥಿ, ಆಂಗ್ಲ ಮೊದಲಾದ ಉಡುಪುಗಳನ್ನು ಒಮ್ಮೆಯೇ ಧರಿಸಿ, ನಟಿಸುವ ಸೀರೆಯಂತೆ ವಿಕಾರವಿಲಸಿತವಾದರೂ, ನೋಡುವವರಲ್ಲಿ ಒಂದು ಬಗೆಯ ಅಸಹ್ಯವನ್ನು ಉಂಟುಮಾಡುತ್ತಿರುವುದು. ' ಹಿಂದುಜನರು ಹಿಂದುವೇಷ ದಿಂದಲೇ ಒಪ್ಪುತ್ತಿರಬೇಕು.ಎಂದು ಸ್ವಾಮಿವಿವೇಕಾನಂದರು ಹೇಳಿರುವರು. ಅದರಂತೆ ನಮ್ಮ ಕನ್ನಡನುಡಿ ಕನ್ನಡದ ಕೈಲಿಯಿಂದಲೇ ಮೆರೆಯುತ್ತಿರಬೇಕು. ಕೆಲವರು ಆಂಗ್ಲ ಮೊದಲಾದ ಭಾಷೆಯಿಂದ ಪ್ರೌಢಶಿಕ್ಷಣವನ್ನು ಹೊಂದಿರು ವರು, ಅವರ ಶೈಲಿ, ಆಯಾಭಾಷಾಶೈಲಿಯನ್ನು ಹೋಲುವುದು ಸಹಜ. ಆದರೆ ಕನ್ನಡದ ಶೈಲಿ ಕೆಡಬಾರದೆಂಬ ಕೋರಿಕೆಯಿದ್ದರೆ, ಉತ್ತಮ ಶೈಲಿಯುಳ್ಳ ಮೂರು ನಾಲ್ಕು ಕನ್ನಡ ಗ್ರಂಥಗಳನ್ನು ಓದಬೇಕು, ವ್ಯಾಕರಣದ ಕಟು ಗಳನ್ನು ಮನದಟ್ಟು ಮಾಡಿಕೊಳ್ಳ ಬೇಕು, ಬಳಿಕ ಕನ್ನಡದಲ್ಲಿ ಲೇಖನಗಳನ್ನು ಬರೆಯತೊಡಗಬೇಕು. ಆಗ ಅವರು ಮಾಡುವ ಕರ್ಣಾಟಕ ಭಾಷಾಸೇವೆ ಸಫಲವಾಗುವುದು. - ಕೆಲಕೆಲವರು ಕನ್ನಡ ನುಡಿಯಲ್ಲಿ ಪರಭಾಷೆಯ ಶಬ್ದಗಳನ್ನು ಮನಸ್ಸಿಗೆ ಬಂದಂತೆ ಸೇರಿಸುತ್ತಿರುವರು. ಉದಾ :- ಕಾಳಜಿಪೂರ್ವಕ ಕೆಲಸ ಮಾಡಿದನು. ಸಡಕಿನ ಮೇಲೆ ಉರುಳುವ ಗಾಲಿಯು... ಮೇಲೆ ಉಪ್ಪರಣಿಯನ್ನು ಹೊತ್ತಿದ್ದನು. ಕ್ರಮಶಃ, ಮನಸಾ, ಸಿನಂಚ, ತದ್ವತ್‌, ಸಹಸ್ರಾರು ಮೊದಲಾದ ಪದ ಪ್ರಯೋಗ ಗಳು ಪ್ರಚಲಿತ ನಾಸಿಕ ಪುಸ್ತಕಗಳಲ್ಲಿಯೂ ವಾರಪತ್ರಗಳಲ್ಲಿಯೂ ದೊರೆಯುವುವು. ಪಾಠಶಾಲೆಗಳಿಂದ ಹೊರಬಿದ್ದವರ ಬರಹಗಳಲ್ಲಾದರೋ ಸಂಸ್ಕೃತ ಶಬ್ದಗಳು ಅಡ್ಡ ಮಳೆ ಹೊಡೆದಂತೆ ! ! ಪರಭಾಷೆಯ ಶಬ್ದಗಳನ್ನು ಮುಟ್ಟಲೇಬಾರದೆಂದು ನಾನು ಹೇಳುವುದಿಲ್ಲ. ಕಟ್ಟಾ ದಲ್ಲಿ ಕೈಗಡವನ್ನು ತರಬೇಕು. ಸಾಗುವಂತಿದ್ದರೂ ಸುಮ್ಮ ಸುಮ್ಮನೆ ಪರಭಾಷೆಯ ಶಬ್ದಗಳನ್ನು ವಾಕ್ಯಗಳಲ್ಲಿ ಸೇರಿಸಬಾರದು. ಸಂಸ್ಕೃತ ಶಬ್ದಗಳ ಬಳಕೆ ಹೆಚ್ಚಾಗುತ್ತ ನಡೆದಂತೆ, ಕನ್ನಡ ಶಬ್ದಗಳು ಮೂಲೆ ಯಲ್ಲಿ ಹೇಳಹತ್ತಿರುವವು. ಹಳ್ಳಿಯ ಹೆಂಗಸರ ಬಾಯಲ್ಲಿರುವ ಅಚ್ಚಗನ್ನಡ ಶಬ್ದ ಗಳು, ಈಗಿನವರ ಲೇಖನಗಳಲ್ಲಿ ಹುಡುಕಿದರೂ ಸಿಕ್ಕಿಲ್ಲವು ! ಕೈಯಿಂದಾದಷ್ಟು ಕನ್ನಡ ಶಬ್ದಗಳನ್ನು ಒಳಸುವ ಹವಣಿಕೆಯಲ್ಲಿರಬೇಕು. ಸಾಮಾನ್ಯ ಜನರಿಗೆ ತಿಳಿಯ ದಂತಹ ಶಬ್ದಗಳನ್ನು ತಿಳಿಯುವಂತೆ ಬರೆಯಬೇಕು, ಉದಾ ... -ಗುಮಟದ ಒಳವು ಸಿಲು (ವ್ಯಾಸ) ೧೨೪ ಫಟ ಅದೆ. ಇದಕ್ಕೆ ಇನ್ನು ಯಾವ ಹೂಟ (ಹಂಚಿಕೆ) ಯನ್ನು ಮಾಡಬೇಕು ? ಇಂತಹ ಹಲವು ಉದಾಹರಣೆಯನ್ನು ನಾಡಿನೆಲೆಗಾರನಲ್ಲಿ ನೋಡಿಕೊಳ್ಳ ಬಹುದು. ಹೀಗೆ ಎಲ್ಲರೂ ಹವಣಿಸಿದರೆ, ಮೂಲೆಗೆ ಬಿದ್ದಿರುವ, ೧೭