ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿತ್ತೂರ ಮುತ್ತಿಗೆ. ಅಕ್ಟೋಬರ್ ೧೯೧೮. ಎಷ್ಟು ಮಂದಿಯನ್ನು ಹಡೆಯುವೆ ? ಎಂದು ? ತಾಯೇ ! ನಿನ್ನಲ್ಲಿರುವ ಕುಂದು ಗಳೆಲ್ಲ ಬೆಂದುಹೋಗಿ, ನೀನು ಮೇಲ್ಕೆಯನ್ನು ಹೊಂದಿ ಮುಂದೆ ಬಂದು, ಹಿರಿಹಿರಿ ಹಿಗ್ಗಿ, ಕುಲುಕುಲು ನಗುವುದನ್ನು ಯಾರು ನೋಡುವರೋ, ಅವರೇ ಧನ್ಯರು ! ಧನ್ಯರು !! ಕಿತ್ತೂರ ಮುತ್ತಿಗೆ. ಮ: ಮ. ಫ, ಗಣಾಚಾರ್ಯ, ಗೋಕಾಕಘಾಲ್ಸ್ - ಇವರು ಬೆಳ ಗಾವಿಯ “ ವಿಭಾಗಕರ " ಪತ್ರಿಕೆಗೆ (೨5-೬-೧೯(೧೮) ಈ ಲೇಖನವನ್ನು ಬರೆರವರು. ಇದರಲ್ಲಿ ಕನ್ನಡ ಸಂಸ್ಥಾನವಾದ ಕಿರನ್ನು ಟಿಪ್ಪು ಸುಲ್ತಾನನು ಮುತ್ತಿದ ಸಂಗತಿ ತಿಳಿಗನ್ನಡದ ಲಲಿತ ಶೈಲಿಯಲ್ಲಿ ವಣರ್ಿತವಾಗಿದೆ. ಮೈಸೂರ ಚರಿತ್ರೆಗೆ ಸಂಬಂಧಿಸಿದ ಕೆಲವ್ರ ವಿಷಯಗಳು ಇದರಲ್ಲಿ ದೊರೆಯುತ್ತದೆ. ಕಿತ್ತೂರ ಮುತ್ತಿಗೆಯ ಮಾತನ್ನು ತೆಗೆದ ಕೂಡಲೆ, ಆ ಸಂಸ್ಥಾನದ ಮೂಲ ಪುರುಷರು ಯಾರು ? ಎಂಬ ಕೇಳ್ಳೆ ಹೊರಡಬಹುದು. ಆ ಕೇಳ್ಮೆಗೆ ತಾಳ್ಮೆ. ಯನ್ನು ಒಂದೆರಡು ಮಾತಿನಲ್ಲಿ ಬರೆದುಬಿಡೋಣ. 'ಕಿತ್ತೂರ ಸಂಸ್ಥಾನಿಕರು ಕನ್ನಡಿಗರು, ವೀರಶೈವ ಮತದವರು. ಅವರ ಮೂಲ ಪುರುಷರು ಹಿರಿಯ ಮಲ್ಲಶೆಟ್ಟಿ, ಚಿಕ್ಕಮಲ್ಲಶೆಟ್ಟಿ ಎಂಬವರು. ಅವರು ಸಾಗರ ಪ್ರಾಂತದಿಂದ ಬಂದರು, ವಿಜಾಪುರದ ದಂಡಿನಲ್ಲಿ ಸೇರಿದರು. ಅಲ್ಲಿ ಬೆಳಕಿಗೆ ಬಂದರು. ಅವರನ್ನು ವಿಜಾಪುರದ ಷಹನು ಮೆಚ್ಚಿದನು. ಹುಬ್ಬಳಿಯ ಸರದೇಶ ಮುಳಿಯನ್ನು ಕೊಟ್ಟನು. ಆಗಿನ ಮುಸಲ್ಮಾನರು ಹಿಂದೂ ಜನರ ಕಡುಹಗೆ ಗಳಾಗಿದ್ದರು. ಆದರೂ ಕಿತ್ತೂರ ಮೂಲಪುರುಷರು, ಮುಸಲ್ಮಾನರಲ್ಲಿಯೇ ಬೆಳೆದರು. ಮುಸಲ್ಮಾನರಲ್ಲಿಯೇ ತಮ್ಮ ಬೇಳೆಯನ್ನು ಬೇಯಿಸಿಕೊಂಡರು. ಎಂದಮೇಲೆ ಅವರು ಎಂತಹ ಕರ್ತೃತ್ವಶಾಲಿಗಳಿರಬಹುದು ? ಅವರಿಂದ ಐದನೆಯ ತಲೆಯ ನನೇ ಮುಡಿಮಲ್ಲಪ್ಪನು. ಅವನು ಕಿತ್ತೂರಲ್ಲಿ ತಳವೂರಿದನು. ಬಾಹುಬಲದಿಂದ ಸ್ವತಂತ್ರನಾಗಿ ಆಳತೊಡಗಿದನು. ೧೬೪ "