ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ೦ll ಆಶ್ವಯುಜ | ಕಿತ್ತೂರ ಮುತ್ತಿಗೆ. [ಕರ್ಣಾಟಕ ಸಾಹಿತ್ಯ ಕಿತ್ತೂರ ಸಂಸ್ಥಾನಿಕರು ಒಮ್ಮೆ ಮಹಾರಾಷ್ಟರಿಗೆ ಕಪ್ಪಕಾಣಿಕೆಗಳನ್ನು ಕೊಡು ತಿದ್ದರು. ಒಮ್ಮೆ ಮೈಸೂರವರಿಗೆ ಕಪ್ಪ ಕಾಣಿಕೆಗಳನ್ನು ಕೊಡುತ್ತಿದ್ದರು. ಒಮ್ಮೆ ಮುಂಗೈ ಕಸುವಿನಿಂದ ಸ್ವತಂತ್ರರಾಗಿ ಆಳುತ್ತಿದ್ದರು. ಅವರಲ್ಲಿ ಮಲ್ಲಸರ್ಜನೆಂಬವನು ಬಹು ಬಲಿಷ್ಟನು. ಅವನು ಯಾರಿಗೂ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದಿಲ್ಲ, ಪ್ರಜೆ ಗಳನ್ನು ಮಕ್ಕಳಂತೆ ಪಾಲಿಸುತ್ತಿದ್ದನು. ವಿದ್ವಾಂಸರಿಗೆ ಆಶ್ರಯಕೊಡುತ್ತಿದ್ದನು. ಮೇಲಾದ ಭಗವದ್ಭಕ್ತನಾಗಿದ್ದನು. ಅವನ ಸಡಗರವನ್ನು ಕಂಡು, ನೆರೆಹೊರೆಯ ಅರಸರ ಹೊಟ್ಟೆಯಲ್ಲಿ ಉರಪು ಹುಟ್ಟಿತು. ಕಿತ್ತೂರ ರಾಜ್ಯವು ಟೀಪುಸುಲ್ತಾನನ ಕಣ್ಣಲ್ಲಿ ಒತ್ತುತ್ತಿತ್ತು. ಅದರಿಂದ ಅವನು “ ಕಿತ್ತೂರಿಗೆ ಮುತ್ತಿಗೆಯನ್ನು ಹಾಕು ವೆನು, ಮಲ್ಲಸರ್ಜನ ಬಿಂಕವನ್ನು ಬಿಡಿಸುವೆನು ' ಎಂದು ಸೈನ್ಯದೊಡನೆ ಸಾಗಿ ಬಂದನು. ಇತ್ತ ಮಲ್ಲಸರ್ಜನು ಒಡೋಲಗದಲ್ಲಿ ಕುಳಿತಿದ್ದನು. ಆಗ ಚಾರನೊಬ್ಬನು ಅವಸರದಿಂದ ಬಂದು, ಸುಲ್ತಾನನು ದಂಡೆತ್ತಿ ಬರುವ ಸುದ್ದಿಯನ್ನು ಹೇಳಿದನು. ಅದನ್ನು ಕೇಳಿದ ಕೂಡಲೆ ಮಲ್ಲಸರ್ಜನ ಕಣ್ಣು ಕೆಂಪಾದುವು, ಕುಡಿಹುಬ್ಬು ಕುಣಿದುವು. ಅವನು ಹೊರಳಿ ಎಡಬಲಗಳನ್ನು ನೋಡಿದನು. ಕೂಡಲೆ ಭಟಮಾನ್ಯರು, “ ನಾವು ಯಾರಿಗೂ ಕಪ್ಪಕಾಣಿಕೆಗಳನ್ನು ಕೊಟ್ಟವರಲ್ಲ. ಒಬ್ಬರ ಕೈಕೆಳಗಿರುವುದಕ್ಕಿಂತ ನುಡಿಯುವುದೇ ಲೇಸು. ಮದ್ದಾನೆಯಂತೆ ಮಬ್ಬು ತಲೆಗೇರಿದ ಟೀಪು ಒಮ್ಮೆ ನನ್ನ ಕೈ ಹೊಡೆತವನ್ನು ನೋಡಲಿ ” ಎಂದು ಗರ್ಜಿಸಿದರು. ಅದಕ್ಕೆ ಮಂತ್ರಿಗಳೂ ತಲೆದೂಗಿದರು. ಅಷ್ಟರಲ್ಲಿ ಒಬ್ಬ ಭಟನು ಬಂದು ' ದೊರೆಯೇ ತಡ ವೇಕೆ ? ವೈರಿ ಸಮಿಾಸಿಸಿದನು, ರಣಭೇರಿಯನ್ನು ಹೊಡೆಯಿಸು ' ಎಂದು ಹೇಳಿದನು. ಕೂಡಲೆ ಮಲ್ಲಸರ್ಜನು ಸೇನಾಪತಿಗೆ ಸೂಚಿಸಿದನು, ಸೇನಾಪತಿ ಸೈನಿಕರಿಗೆ ಅಪ್ಪಣೆಯನ್ನು ಕೊಟ್ಟನು. ಕಾಳಗವೆಂದರೆ ಕಾಲುಗೆದರುವ ಕಟ್ಟಾಳುಗಳೆಲ್ಲ ನಡ ಕಟ್ಟಿದರು. ರಾವುತರು ಕುದುರೆಗಳನ್ನು ಕುಣಿಸಿದರು. ಮಾವುತರು ಆನೆಗಳನ್ನು ನಡೆಸಿದರು. ತೋಪಿನ ಬಂಡಿಗಳು ಹೂಡಿದುವು. ರಣವಾದ್ಯಗಳು ಕಿವಿಯನ್ನು ಕಿವುಡುಗೊಳಿಸಿದುವು. ಸೈನ್ಯವು ಸರ್ವಸನ್ನಾಹದಿಂದ ಹೊರಹೊರಟಿತು. ಅಷ್ಟ ರಲ್ಲಿಯೇ, ಇದಕ್ಕೆ ನೂರುಮಡಿಯಾಗಿ ಬಂದು, ಸುಲ್ತಾನನ ಸೈನ್ಯವು ಸಾಗರದಂತೆ ಸುತ್ತುಗಟ್ಟಿತು. ಅದರಲ್ಲಿ ಎಲ್ಲರೂ ಹಲವು ಕಾಳಗಗಳನ್ನು ಮಾಡಿದವರಿದ್ದರು. ಮಲ್ಲಸರ್ಜನೆಂದರೆ " ಅಡಕೆಯ ಹೋಳು ' ಎಂದು ಟೀಪು ತಿಳಿದಿರಬಹುದಲ್ಲವೆ ? ಟೀಪುವಿನ ದರ್ಪಕ್ಕೆ ಒಳ್ಳೆಯವರು ಕೂಡ ಗಡಗಡನೆ ನಡುಗುತ್ತಿದ್ದರು, ಎಂದ ಮೇಲೆ ಮಲ್ಲಸರ್ಜನು ಎದೆಗಾರನಲ್ಲವೆ? ಅದಕ್ಕಾಗಿಯೇ ಅವನನ್ನು ಸರ್ಜ ನೆನ್ನುತ್ತಿರಬಹುದೇನು ? ಅವನ ಸೈನ್ಯವಾದರೂ ಹೆದರಿತೇ ? ಹೆದರಲಿಕ್ಕೆ ಅವರು ಯಮನೂರ ಸೀರನ ಪರಸೆಯಿಂದ ಹಿಡಿದು ತಂದ ಮಂದಿಯೇ ? ಈಗಿನವರಂತೆ ಹತವೀರ್ಯರೇ ? ಈಗಿನವರನ್ನು ಕಾಳಗಕ್ಕೆ ಕರೆಯುವುದೊಂದೇ ತಡ! ಕೂಡಲೆ ೧೭೨;