ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ. ಕಿತ್ತೂರ ಮುತ್ತಿಗೆ. {ಅಕ್ಟೋಬರ್ ೧೧೮. ಓಡಿಹೋಗಿ ಗಡ್ಡ ಬೀಳುತ್ತಾರೆ. ಅಬ್ಬಬ್ಬಾ ! ಎಂತಹ ಬಂಟರೋ ಇವರು? ಎಲೈ ಹೇಡಿಗಳೇ, ಸಾಮ್ರಾಜ್ಯ ಸಂರಕ್ಷಣೆಗಾಗಿ ಸಮರಾಂಗಣದಲ್ಲಿ ಸತ್ತರೆ ಸ್ವರ್ಗ ಸಿಕ್ಕ ಲಾರದೆ ? ಮೊದಲಿನವರೊ! ಹುರಿಕಟ್ಟಿನ ಹೋರಿಯಂತಹ ಹುಡುಗರು! ಕೆಚ್ಚೆದೆಯ ಕಲಿಗಳು ! ಉತ್ಸಾಹದಿಂದ ಉಬ್ಬಿದವರು! ಸ್ವಾಭಿಮಾನದಿಂದ ಸಜ್ಜಾದವರು! ಸ್ವರಾಜ್ಯ ಸಂರಕ್ಷಣೆಗಾಗಿ ರಕ್ತವನ್ನು ಧಾರೆ ಎರೆಯುವವರು !! ಅದಕ್ಕೆಂದೇ“ ಅಡಿಯ ಮುಂದಿಡೆ ಸ್ವರ್ಗ, ಅಡಿಯ ಹಿಂದಿಡೆ ನರಕ, ಅಡಿಗಶ್ವಮೇಧಫಲ, ಸ್ವಾಮಿ ಕಾರ್ಯಕ್ಕೆ ಮಡಿಯಲೇ ಬೇಕು " ಎಂಬ ಸರ್ವಜ್ಞಮೂರ್ತಿಯ ವಚನವು, ಅವರಲ್ಲಿ ಸಡ್ಡು ಹೊಡೆಯುತ್ತಿತ್ತು !!! ಚುಂಗಾಣಿಯ ಬಲದವರು ಒಬ್ಬರನ್ನೊಬ್ಬರು ಕೆಣಕಿದರು. ಎರಡೂ ಕಡೆ ಯವರು ಜೀವದ ಹಂಗುದೊರೆದು ಹೋರಾಡಿದರು. ರಾವುತರು ಕುದುರೆಗಳನ್ನು ಏರಿಸಿ ಹೊಡೆದರು. ಮಾವುತರು ಆನೆಗಳನ್ನು ಒತ್ತಿ ತುಳಿಸಿದರು. ಕಾಲಾಳುಗಳು ಕಣಖಟಿಲ್ ಎಂಬ ಸಪ್ಪಳಗಳಿಂದ ಕಾಳಗದ ಕಣವನ್ನು ಕಣಾಡಿಸಿಬಿಟ್ಟರು. ತೋಪುಗಳು ಢಣಾಡಿಸಿದುವು. ಎರಡೂ ತಂಡಗಳಲ್ಲಿ ರುಂಡಗಳು ಹಾರಾಡಿದುವು. ಆನೆ ಕುದುರೆಗಳು ಸೀಳಿ ಹೋಳಾದುವು. ಕಿತ್ತೂರ ಸೈನ್ಯವು ಕರಗುತ್ತ ಬಂತು. ಆದರೂ ಮಲ್ಲಸರ್ಜನು ಬೆಚ್ಚಿದನೆ? ಬೆದರಿದನೆ? ಅವನ ಕಲಿತನದ ಕೆಚ್ಚು ಕೊರಗಿತೆ ? ವಿಲಯದ ಕಾಲಭೈರವನಂತೆ ಕನಲಿ ಕಿಡಿಕಿಡಿಯಾದನು. ಚೀಪು ಸುಲ್ತಾನನ್ನು ಹಣಿದುಹಾಕಬೇಕೆಂದು ಹೆಣಗಿದನು. ಅಷ್ಟರಲ್ಲಿಯೇ ಸುಲ್ತಾನನ ಕಡೆಯ ಪಟುಭಟರು ಏರಿಬಂದರು. ಮಲ್ಲಸರ್ಜನನ್ನು ಸೆರೆಹಿಡಿದರು. ಸುಲ್ತಾನನು ಜಯಭೇರಿಯನ್ನು ಹೊಡೆಸಿದನು, ಕಿತ್ತೂರನರ ದಂಡು ಎಷ್ಟು, ಸುಲ್ತಾನನ ಸೈನ್ಯವು ಎಷ್ಟು ? ಕೌರವರ ಕಡೆಯ ಕಲಿಗಳೆಲ್ಲ ಕೂಡಿ ಕಂದನ (ಅಭಿಮನ್ಯು) ನ್ನು ಸೋಲಿಸಿದರು. ಅದರಿಂದ ಅಭಿಮನ್ಯುವಿನ ಕಲಿತನಕ್ಕೆ ಬಂದ ಕುಂದೇನು? ಮಲ್ಲಸರ್ಜನನ್ನೂ, ಉಳಿದ ಸೇನೆಯನ್ನೂ ಒಯ್ದು ನಳದುರ್ಗದಲ್ಲಿ ಸೆರೆ ಹಾಕಿದರು. ' ಹರನು ಮುನಿದರೂ ಗುರು ಕಾಯುವನು' ಎಂಬ ಕನ್ನಡ ನಾಡನುಡಿ ಸುಳ್ಳಲ್ಲ ! ದುರದುಂಡಿಯಲ್ಲಿ ಶಿವಲಿಂಗಸ್ವಾಮಿ ಎಂಬ ಮಹಾ ಸಾಧುಶ್ರೇಷ್ಟರಿದ್ದರು.' ಅವರ ಪರಮಭಕ್ತರಲ್ಲಿ ಮಲ್ಲಸರ್ಜನೊಬ್ಬನು, ಭಕ್ತಿ ದಯಾರಸಗಳು ಒಂದಾದರೆ ಯಾವುದು ತಾನೆ ಆಗಲಾರದು ? ದುರದುಂಡಿಯ ಸ್ವಾಮಿಗಳು ಮಲ್ಲಸರ್ಜನನ್ನು ದಾಟಿಸಿಕೊಂಡು ಬಂದರು, ಅವರು ಬರುವಾಗ ಕೋಟೆಯ ಬಾಗಿಲ ಕೀಲುಗಳು ತಮ್ಮಿಂದ ತಾವೇ ಕಳಚಿ ಬಿದ್ದು ವಂತೆ !! ಇದು ಟೀಪು ಸುಲ್ತಾನನಿಗೆ ಹಿಂದಿನಿಂದ ಗೊತ್ತಾಯಿತು, ಆಗ ಅವನು “ ಕಿತ್ತೂರಿಗೆ ಮುತ್ತಿಗೆಯನ್ನು ಹಾಕಿದುದು ಕತ್ತೆಯ ಬಿಟ್ಟಿ ' ಯಾಯಿತು ಎಂದು ಕುದಿಯುತ್ತ ಕುಳಿತುಕೊಂಡನು. ಇರಲಿ. ಓ ಕನ್ನಡನಾಡಿನ ಅಣ್ಣಗಳಿರಾ, ನಾವು ಜಯಾಪಜಯಗಳ ಕಡೆಗೆ ನೋಡುವು ದಿಲ್ಲ. ಧೈರ್ಯಸಾಹಸಾದಿಗುಣಗಳನ್ನು ನೋಡುವೆವು, ಕಿತ್ತೂರ ಸೈನಿಕರ ಎದೆ ಗಾರಿಕೆ ಕಡಮೆಯದೇ ? ಅವರ ಸಾಹಸವು ಸಣ್ಣದೇ ? ಮಲ್ಲಸರ್ಜನ ಭಕ್ತಿ انت