ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸn ಆಶ್ವಯುಜ, ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗ ರೂ, [ಕರ್ಣಾಟಕ ಸಾಹಿತ್ಯ

211

•- - ಸಾಮಾನ್ಯವೇ? ಅವರಲ್ಲಿ ಎಂತಹ ವೀರ್ಯ? ಎಂತಹ ಸ್ವಾಭಿಮಾನ? ಎಂತಹ ಉತ್ಸಾಹ ? ಅವರು ಯಾರು ? ನಮ್ಮ ಪೂರ್ವಜನರು! ಅವರಿಗೂ ನಮಗೂ ಯಾವ ಬಗೆಯ ಹೋಲಿಕೆ ? ಕತ್ತಲೆಯಾಗಲು ಹಿತ್ತಲಲ್ಲಿ ಹೋಗಲಿಕ್ಕೆ ನಮಗೆ ಹೆದರಿಕೆ! ಬಂಟತನವನ್ನು ತೋರಿಸಬೇಕೆಂದರೆ, ಇಲಿಗಳೂ ಸಿಕ್ಕಿಲ್ಲವು! ತಗಣೆ, ಚಿಕ್ಕಾಡ (ಚಿಕಟ) ಗಳಂತೂ ಉರುಳಾಡಿಸಿ ಕಡಿಯುತ್ತಿರುವುವು! ಅವುಗಳನ್ನು ನುಚ್ಚನುರಿಯಾಗಿ ಮಾಡಬೇಕೆಂದರೆ, ಇದಿರಿಗೆ ಬಂದು ನಿಲ್ಲಲೊಲ್ಲವು! ಇಂತಹ ಗಂಡುಗಲಿಗಳು ನಾವು !! ನಮ್ಮ ಮುಂದೆ ಮೊದಲಿನವರು ಯಾವ ಗಿಡದ ತೊಪ್ಪಲು? “ ಅಡಕಲಗಡಿಗೆಯೊಳಗಿನ ಬಂಟರು.” ಎಂಬ ಬಿರುದು ನಮ್ಮದೇ! ಎಲ್‌, ಕರ್ಣಾಟಕ ಜನನೀ! ಮೊದಲಿನವರು ನಿನ್ನ ಹಡೆದ ಮಕ್ಕಳು, ನಾವು ಮಲಮಕ್ಕಳೇನು? ನೀನು ಅವರಿಗೆ ಯಾವತರದ ಗೃಹಶಿಕ್ಷಣವನ್ನು ಕೊಡುತ್ತಿದ್ದೆ? ಅದನ್ನೇ ನಮಗೇಕೆ ಕೊಡಲೊಲ್ಲೆ? ತಾಯೆ ! ಹೇವೆ (ಪ್ರೇಮ) ವುಳ, ನೀನು ತುಸ ನಾದರೂ ಕರುಣಾಕಟಾಕ್ಷದಿಂದ ನೋಡಿದಲ್ಲಿ ನಾವು ಧನ್ಯರು! ಧನ್ಯರು!! ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗರೂ. ಧಾರವಾಡದಲ್ಲಿ ಮ|| ರಾಮರಾವ ನರಗುಂದಕರ ವಕೀಲ ಇವರು ಈ ವಿಷಯವಾಗಿ ಸ್ವಾರಸ್ಯವಾದ ಒಂದು ವ್ಯಾಖ್ಯಾನವನ್ನು ಕೊಟ್ಟರು. ಇದು ಅಲ್ಲಿಯ “ಚಂದ್ರೋದಯ ” ಪತ್ರಿಕೆಯ ೮,೧೫-೭-೧೮೧೮ ನೆಯ ಸಂಚಿಕೆಗಳಲ್ಲಿ ಪ್ರಕಟವಾಗಿದೆ. ವಿಜಯನಗರವನ್ನು ಸ್ಥಾಪಿಸಿ ವಿಜಯನಗರದಲ್ಲಿ ಬಹುಕಾಲ ಆಳಿ ವಿಜಯ ನಗರದ ಸಿಂಹಾಸನದ ಅಭಿಮಾನದಿಂದ ಅದರ ವೈಭವವನ್ನು ಬೆಳೆಯಿಸಿ, ಹಿಂದೂ ಸ್ಥಾನದ ಮಿಕ್ಕ ಹಿಂದು ರಾಷ್ಟ್ರಗಳು ಕೈಯಲ್ಲಾಗದೆ ಮೂಲೆಗುಂಪಾಗಿ ಬಿದ್ದ ಕಾಲಕ್ಕೆ ಪರಧರ್ಮಿಗಳಾದ ಶತ್ರುಗಳಿಗೆ ಎದೆಗೊಟ್ಟು ಆರ್ಯಧರ್ಮವನ್ನೂ ಆರ್ಯವಿದ್ಯೆ ಯನ್ನೂ ಕಾಪಾಡಿದವರು ಕನ್ನಡಿಗರೇ, ಹೀಗಿದ್ದು ಈಗಿನ ಕಾಲದಲ್ಲಿ ಕನ್ನಡಿಗರಿಗೆ ವಿಜಯನಗರವು ಕನ್ನಡ ರಾಜ್ಯವಾಗಿತ್ತೆಂದು ಹೇಳುವ ಪ್ರಸಂಗವು ಒದಗಿದ್ದು ದೈವ ದುರ್ವಿವಾದವೇ ಸರಿ. ದೈವವಶಾತ್ ನಮಗಿಂತಲೂ ಹೆಚ್ಚಿನ ಸುಸ್ಥಿತಿಯಲ್ಲಿ ಇದ್ದ ಮಹಾರಾಷ್ಟ್ರರೂ ಆಂಧರೂ ಇಂಗ್ಲೀಷ್ ವಿದ್ಯೆಯನ್ನು ಕಲಿತು ನಮಗಿಂತಲೂ ೧೭೭