ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕೆ, ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗರೂ, [ಅಕ್ಟೋಬರ್ ೧೯೧೮. - -: • ದಂಡಾಧಿಪತಿಗಂಡ ಬಚ್ಚಪ್ಪ, ಮಲ್ಲನಾಥ, ತಿಮ್ಮರಾಜ ಈ ಹೆಸರಿನವರು ಕೇವಲ ಕನ್ನಡಿಗರೇ ಆಗಿದ್ದಾರೆ. ಈವತ್ತಿಗೂ ಆನೆಗುಂದಿ ರಾಜರಲ್ಲಿ ಕನ್ನಡ ಕಾಗದ ಪತ್ರಗಳು ಅನೇಕವಾಗಿ ದೊರೆಯುತ್ತವೆ ಅವುಗಳನ್ನು ಶೋಧನೆ ಮಾಡಿದವರಿಗೆ ಮನಸ್ಸಿಗೊಪ್ಪುವ ಅನೇಕ ಸಂಗತಿಗಳು ದೊರೆಯಬಹುದು. ವಿಜಯನಗರದ ತಾಮ್ರಶಾಸನಗಳಲ್ಲಿಯೂ ಶಿಲಾಶಾಸನಗಳಲ್ಲಿಯೂ ಶಾಸನದ ಲಿಪಿ ಯಾವ ಭಾಷೆಯಲ್ಲಿ ಇದ್ದರೂ ಶ್ರೀ ವಿರುಪಾಕ್ಷ ಎಂಬ ರಾಜವಿಳಾಸವು ಮಾತ್ರ ಕನ್ನಡದಲ್ಲಿಯೇ ಇರುತ್ತದೆ. ವಿಜಯನಗರದಂತಹ ಸಾಮ್ರಾಜ್ಯದ ರಾಜಭಾಷೆ ಯಾದ ಕನ್ನಡವು ಈಗಿನ ಕಾಲದ ಕನ್ನಡಿಗರಿಗೆ ಮಾತ್ರ ಕಾಡುಭಾಷೆಯೆಂದು ತೋರು ವುದು ಎಷ್ಟು ನಾಚಿಕೆಗೇಡು ! ಪಶ್ಚಿಮ ಚಾಳುಕ್ಯರ ಮತ್ತು ವಿಜಯನಗರದ ರಾಜರ ಸಾಮ್ರಾಜ್ಯದ ಧ್ವಜಚಿಹ್ನವು ವರಾಹ ಮೂರ್ತಿ, ಪಶ್ಚಿಮ ಚಾಳುಕ್ಯರು ಕೇವಲ ಕನ್ನಡಿಗರು, ದಕ್ಷಿಣ ಹಿಂದುಸ್ಥಾನದಲ್ಲಿ ಅವರಹಾಗೆ ಹೆಸರಾದ ರಾಜವಂಶವು ವಿಜಯನಗರದವರ ಹೊರತಾಗಿ ಬೇರೆ ಯಾವುದೂ ಇಲ್ಲ. ತಮ್ಮ ಪೂರ್ವಜರಾದ ಚಾಳುಕ್ಯರ ಧ್ವಜಚಿಹ್ನೆಯನ್ನೇ ವಿಜಯನಗರದವರು ಧರಿಸಿದುದರಿಂದ ಕೇವಲ ಕನ್ನಡ ರಾಷ್ಟ್ರವೆಂಬ ಅಭಿಮಾನವೇ ವಿಜಯನಗರದ ರಾಜರಲ್ಲಿ ತುಂಬಿ ತುಳುಕುತ್ತಿ ತೆಂದು ತೋರಿಸಲಿಕ್ಕೆ ಬೇರೆ ಕಾರಣವು ಅಗತ್ಯವಿಲ್ಲ. ವಿಜಯನಗರದವರ ಕಾಲದಲ್ಲಿ ಹೆಸರಾದ ಕನ್ನಡಕವಿಗಳು ಅನೇಕರು ಆಗಿ ಹೋಗಿರುತ್ತಾರೆ. ಮಂಗರಾಜ, ಭೀಮಕವಿ, ನೃಸಿಂಹಕವಿ ಮುಂತಾದ ಕವಿಗಳು ಹರಿಹರರಾಯನ ಕಾಲದಲ್ಲಿ ಉದ ಯಿಸಿದರು. ಮಂಗರಾಜನು ತನ್ನ ಗ್ರಂಥಾಂತರದಲ್ಲಿ “ ಧರೆಗನುರಾಗಮಂ ಹರಿ ಹರಕ್ಷಿತಿಪಂ ಕುಡುತಿರ್ಪನೆಯಿಂ” ಎಂದು ಬರೆದಿದ್ದಾನೆ. ಮಧುರ ಕವಿ ೨-ನೆಯ ಹರಿಹರನ ಕಾಲದವನು, ವಿಜಯನಗರದ ಮಲ್ಲಿಕಾರ್ಜುನರಾಯನ ಕಾಲದ ಆಸ್ಪಾನಕವಿಯಾದ ಚಾಮರಸ ಕವಿ ಪ್ರಭುಲಿಂಗಲೀಲೆ ಎಂಬ ವೀರಶೈವ ಗ್ರಂಥವನ್ನು ಬರೆದಿರುತ್ತಾನೆ, ಮತ್ತು ಈ ಕವಿಯ ಪ್ರಭಾವದಿಂದಲೇ ಮಲ್ಲಿಕಾರ್ಜುನ ರಾಯನು ವೀರಶೈವಮತವನ್ನು ಧರಿಸಿದನು, ಪ್ರಭುಲಿಂಗಲೀಲೆಯು ತಮಿಳಿಗೂ ತೆಲುಗಿಗೂ ಭಾಷಾಂತರವಾಗಿರುತ್ತದೆ. ಕರ್ಣಾಟಕದಲ್ಲಿ ಇವತ್ತಿಗೂ ಮೆರೆಯುತ್ತಿ ರುವ ವೈಷ್ಣವ ದಾಸಕೂಟವು ವಿಜಯನಗರದವರ ಕಾಲದಲ್ಲಿಯೇ ಪ್ರಾರಂಭ ವಾಯಿತು. ದಾಸಶಿರೋಮಣಿಯಾದ ಪುರಂದರದಾಸರ ಮಂದಿರವು ಈವತ್ತಿಗೂ ವಿಜಯನಗರದಲ್ಲಿ ಚಕ್ರತೀರ್ಥದ ಹಾದಿಯ ಮೇಲೆ ಕಾಣುತ್ತದೆ. ಪ್ರಸಿದ್ದ ಸೋಮೇ ಸ್ವರಕವಿ, ರಾಘವಾಂಕ, ವಿರೂಪಾಕ್ಷಪಂಡಿತ ಮುಂತಾದವರು ಕೇವಲ ವಿಜಯ ನಗರದ ಕಾಲದಲ್ಲಿಯೇ ಉದಯಿಸಿದರು. ರಾಜರು ಕನ್ನಡಿಗರಾಗಿದ್ದುದರಿಂದಲೇ ಪ್ರಸಿದ್ದರಾದ ಅನೇಕ ಕನ್ನಡ ಕವಿಗಳು ಆ ಕಾಲದಲ್ಲಿ ಪ್ರಕಾಶಿಸಿದರು ವಿಜಯ ನಗರವು ೧೫೬೫-ನೆಯ ಇಸವಿಯಲ್ಲಿ ಹಾಳಾಯಿತು. ರಾಜವೈಭವವು ನಷ್ಟವಾದುದು ರಿಂದ ರಾಜಮನೆತನವು ಮುಂದೆಸಾಗಿದರೂ ಪೂರ್ವದ ವೈಭವವು ಉಳಿಯಲಿಲ್ಲ. ತಾಳಿಕೋಟೆಯ ಕಾಳಗದಲ್ಲಿ ವಿಜಯನಗರದ ಹೆಸರಾದ ದಂಡು ಮಡಿದುಹೋಯಿತು. ೧೮೦ .