ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸpt ಆಶ್ವಯುಜ.] ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗರೂ.[ಕರ್ಣಾಟಕ ಸಾಹಿತ್ಯ 65 ಕನ್ನಡಿಗರ ತೇಜವು ಲೋಪವಾಯಿತು, ಕನ್ನಡಿಗರ ಹಗೆಗಳಾದ ವಿಜಾಪುರ ಮತ್ತು ಗೋವಳಕೊಂಡೆಯ ಸುಲ್ತಾನರು ಕನ್ನಡಿಗರ ಸಾಮ್ರಾಜ್ಯವನ್ನು ನಷ್ಟ ಮಾಡಿದರೂ ಕನ್ನಡಿಗರ ದ್ವೇಷವನ್ನು ಮಾಡುವುದು ಬಿಡಲಿಲ್ಲ. ವಿಜಾಪುರದವರ ರಾಜ್ಯವು ಕೇವಲ ಕರ್ಣಾಟಕದಲ್ಲಿ ಹಬ್ಬಿದ್ದರೂ ಕನ್ನಡ ಜನರಿಗೆ ಕನ್ನಡ ಭಾಷೆಗೆ ವಿಜಾಪುರದವರಲ್ಲಿ | ರಾಜಾಶ್ರಯವು ದೊರೆಯಲಿಲ್ಲ. ಕನ್ನಡರಾಜರು ನಷ್ಟವಾದರೂ ಕನ್ನಡಿಗರು ಅವರಿಗೆ ಹಗೆಗಳಂತೆ ತೋರುತ್ತಿದ್ದರು. ಭಾಷೆಗಳಲ್ಲಿ ಮಹಾರಾಷ್ಟ್ರ ಭಾಷೆಗೆ ವಿಜಾಪುರದ ಸುಲತಾನರು ಆಶ್ರಯವನ್ನು ಕೊಟ್ಟರು. ರಾಜಾಶ್ರಯವು ಹೋದುದ ರಿಂದ ಕನ್ನಡವು ಮೂಲೆಗೆ ಬಿತ್ತು. ಇದೇ ಹಾಡು ಗೋವಳಕೊಂಡೆಯ ರಾಜ್ಯ ದಲ್ಲಿಯೂ ಆದುದು ಕಂಡುಬರುತ್ತದೆ. ಮೈಸೂರು, ಬೇದನೂರು ಮುಂತಾದ ಕರ್ಣಾಟಕಸಂಸ್ಥಾನಗಳಲ್ಲಿ ಕನ್ನಡಕ್ಕೆ ರಾಜಾಶ್ರಯವು ತಕ್ಕಮಟ್ಟಿಗೆ ಸಿಕ್ಕಿದುದರಿಂದ ಈವತ್ತಿಗೂ ಆ ಭಾಷೆ ಜೀವದಿಂದ ಉಳಿದಿರುತ್ತದೆ. ಆದರೆ ಇತ್ತ ಕರ್ಣಾಟಕವು ತಾಳೀಕೋಟೆಯ ಕಾಳಗದಲ್ಲಿಯೇ ಸೌಭಾಗ್ಯವಿಹೀನವಾಯಿತು. ಜನರಲ್ಲಿಯ ಸ್ವಾಭಿಮಾನವು ಕಾಲಾಂತರದಲ್ಲಿ ನಷ್ಟವಾಯಿತು. ದೇಶಾಭಿಮಾನವೂ ಭಾಷಾಭಿ ಮಾನವೂ ಹೊರಟು ಹೋದುದರಿಂದ ಈ ಪ್ರಾಂತದ ಕನ್ನಡಿಗರ ಕಡೆಯಿಂದ ಅದರ ತರುವಾಯ ಯಾವುದೂ ಕಾರ್ಯವಾಗಲಿಲ್ಲ. ಕರ್ಣಾಟಕವು ಆ ಕಾಲದಲ್ಲಿಯೇ ತುಂಡುತುಂಡಾದುದರಿಂದ ಕರ್ಣಾಟಕರಲ್ಲಿ ಪರಸ್ಪರ ಪ್ರೇಮವು ಅಳಿದು ಹೋಯಿತು. ಕರ್ಣಾಟಕವು ಬೇರೆ ಬೇರೆ ರಾಜರ ಕೈವಶವಾದುದರಿಂದ ಕನ್ನಡಿಗರಲ್ಲಿಯ ಸಂಘ ಶಕ್ತಿ ಲೋಪವಾಯಿತು. ವಿಜಾಪುರದವರ ರಾಜ್ಯ ವೈಭವವು ನಷ್ಟವಾಗುವಕಾಲಕ್ಕೆ ಮಹಾರಾಷ್ಟರ ವೈಭವವು ಬೆಳೆಯಹತ್ತಿತ್ತು, ಮಹಾರಾಷ್ಟ್ರರ ರಾಜ್ಯವು ಬೆಳೆಯುತ್ತ ಕರ್ಣಾಟಕದ ಉತ್ತರಭಾಗವನ್ನು ಆಕ್ರಮಿಸಿತು. ' ರಾಜಾಕಾಲಸ್ಯ ಕಾರಣಂ ? ಎಂಬಂತೆ ಕನ್ನಡಿಗರು ಮೊದಲೇ ಸ್ವಾಭಿಮಾನಕ್ಕೆ ಎರವಾದುದರಿಂದ ಮಹಾರಾಷ್ಟ್ರ ಭಾಷೆಯನ್ನೇ ದರಬಾರಿನಲ್ಲಿ ಉಪಯೋಗಿಸಲಿಕ್ಕೆ ಪ್ರಾರಂಭಿಸಿದರು. ಪೇಶವೆಯರ ಕಾಲದಲ್ಲಿ ಈ ಪ್ರಾಂತದ ಜನರು-ವಿಶೇಷವಾಗಿ ಬ್ರಾಹ್ಮಣರು-ಕನ್ನಡಕ್ಕೆ ತಮ್ಮ ಮನೆ ತನದ ಕೆಲಸದಲ್ಲಿ ಸಹ ಆಶ್ರಯವನ್ನು ಕೊಡಲಿಲ್ಲ. ಜನರಲ್ಲಿ ಅಭಿಮಾನವು ಹೊರಟುಹೋದುದರಿಂದ ಕರ್ಣಾಟಕ ಪ್ರಾಂತದ ಉತ್ತರ ಸೀಮೆ ಹಿಂದಕ್ಕೆ ಸರಿ ಯುತ್ತ ಬಂದಿತು, ಮತ್ತು ಈವತ್ತಿಗೂ ಈ ಕ್ರಮವು ನಡೆದಿರುತ್ತದೆ. ಪೂರ್ವ ಸೀಮೆಯ ಗತಿಯಾದರೂ ಇದೇ ಕನ್ನಡಿಗರು ಸ್ವತ್ವವನ್ನು ಮರೆತು ಬಿಟ್ಟು ದರಿಂದ ಪೂರ್ವದ ವೈಭವವು ಅವರಿಗೆ ಸ್ವಪ್ನವೆಂದು ತೋರಿತು. ಈ ಸ್ಥಿತಿ ಈವತ್ತಿಗೂ ಇದೆ. ಸದ್ಯಕ್ಕೆ ಹಿಂದುಸ್ಥಾನದಲ್ಲಿ ನಡೆದ ಲವಲವಿಕೆಯಲ್ಲಿ ಕನ್ನಡನಾಡು ಹಿಂದೆ ಬಿದ್ದಿದೆ. ಮದ್ರಾಸ ಇಲಾಖೆಯಲ್ಲಾಗಲಿ, ಮುಂಬಯಿ ಇಲಾಖೆಯಲ್ಲಾಗಲಿ ಇಂಗ್ಲಿಷರ ಆಡಳಿತ ದಲ್ಲಿ ಕನ್ನಡಿಗರಿಂದ ಯಾವ ಮಹತ್ವದ ಕಾರ್ಯವೂ ಆಗಲಿಲ್ಲ. ಮತ್ತು ಕಾರ್ಯ ವನ್ನು ಮಾಡಬೇಕೆಂಬ ಉತ್ಸಾಹವು ಯಾರಲ್ಲಿಯೂ ಇಲ್ಲ. ಸ್ವಭಾಷೆ ಮತ್ತು ಸ್ವತಿಹಾಸ ಇವುಗಳ ಬಗ್ಗೆ ನಾವು ಕನ್ನಡಿಗರು ಈವತ್ತಿನವರೆಗೆ ತೋರಿಸಿದ ಅನಾಸಕ್ತಿ ಯಿಂದ ಈ ಪ್ರಕಾರ ಮೂಲೆಗೆ ಬಿದ್ದಿರುತ್ತೇವೆ. ವಿಜಯನಗರದ ಸೋಜ್ವಲವಾದ ೧೮೧