ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಮದ್ ಗವಾನನ ಚರಿತ್ರೆಯ ಉಪೋದ್ಘಾತ. ಈ ಲೋಕ ವ್ಯವಹಾರದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಇರತಕ್ಕೆ ಜನರ ನಡತೆಗೆ ನೀತಿ ಎಂಬ ಕಟ್ಟು, ಉಂಟು. ಇಂಥಾ ನೀತಿಗೆ ಸರ್ವರ ಸೌಖ್ಯ ವೇ ಮೂಲಾ ಧಾರ. ಇದು ಸಸೌಖ್ಯವೆಂತಲೂ ಪರಸೌಖ್ಯವೆಂತಲೂ ಎರಡು ಭಾಗವಾಗಿದೆ. ಆತ್ಮೀಯವಾದ ಸೌಖ್ಯವು ತಕ್ಕಮಟ್ಟಿಗೆ ಇರಲೇಬೇಕು. ಮನುಷ್ಯನೇ ಮೊದಲಾದ ಸಮಸ್ತ ಪ್ರಾಣಿಗಳಲ್ಲಿಯೂ ಈ ಗುಣ ಇದ್ದೇ ಇರುವುದು, ಅದು ಇಲ್ಲದಿದ್ದರೆ ಪ್ರಾಣಿವರ್ಗವೇ ಮೂಲೋತ್ಪಾಟನವಾಗುವುದು. ಈ ಗುಣವು ಸಸ್ಯವರ್ಗದಲ್ಲಿಯೂ ಉಂಟು. ಆದರೆ ಪ್ರಾಣಿಗಳಲ್ಲೆಲ್ಲಾ ಶ್ರೇಷ್ಟನಾದ ಮನುಷ್ಯನಲ್ಲಿ ಈ ಗುಣಕ್ಕೆ ಮಿತಿ ಯುಂಟು. ಈ ಮಿತಿಯೇ ನೀತಿಯಸಾರ, ಸ್ವಕೀಯನಾದ ಸೌಖ್ಯವನ್ನು ತಿರಸ್ಕ ರಿಸಿದವರಿಗೆ ಮನುಷ್ಯನು ಹಿತಚಿಂತೆಯನ್ನು ಎಷ್ಟೆಷ್ಟು ಹೆಚ್ಚಾಗಿ ಬಯಸುತ್ತಾನೋ ಅಷ್ಟಷ್ಟರಮಟ್ಟಿಗೆ ಅವನೇ ಲೋಕೋಪಕಾರಿ ಎನಿಸುವುನು, ಅನ್ಯರ ಕಷ್ಟವನ್ನು ನೋಡಿ ಸಹಿಸಲಾರದೆ ತಾನು ಅನುತಾಪದಿಂದ ಮಖಸಡುವವನೇ ಪುರುಷಪ್ರೇಷ ನೆಸಿಸುವನು. ಇಂಥಾ ಉತ್ತಮ ಪುರುಷರಿಗೆ ದೇಶ ಜಾತಿ ಕುಲಗೋತ್ರಾದಿ ಭೇದ ಯಾವುದೂ ಇಲ್ಲ, ಆದರೆ ಪ್ರಪಂಚದಲ್ಲಿ ಇಂಥವರು ಬಹಳ ಕಡಮೆ. ಈ ಉತ್ತಮವಾದ ಗುಣವು ಯಾವ ಪುರುಷನಲ್ಲಿ ಅತ್ಯಧಿಕವಾಗಿದೆಯೋ ಅವನೇ ಮಹಾ ಪುರುಷ, ಅಂಥವರ ಚರಿತ್ರೆಯೆ ಪ್ರಣ- ಚರಿತ್ರೆ ಎನಿಸುವುದು, ಮಹಮೂದ್ ಗವಾನನು ಇಂಥಾ ಪಾತ್ರನಾಗಿ ನಾನೆ.