ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶ್ರೀ ವಿನಾಯಕಾಯನಮ. ಶ್ರೀ ಶಾರದಾಂಜಾಯ್‌ನಮಃ ಶ್ರೀ ಲಕ್ಷ್ಮೀನರಸಿಂಹ ಪ್ರಸನ್ನ ಮಹಮೂದ್‌ಗವಾನನ ಚರಿತ್ರೆ. ೧ ನೆಯ ಅಧ್ಯಾಯ ಹಿಂದುಸ್ಥಾನದ ಉತ್ತರ ದೇಶದಲ್ಲಿ ದಿ ಯನ್ನು ರಾಜಧಾನಿಯಾಗಿ ಮಾಡಿ ಕೋಂಡು ತುರಕರ ಗುಲಾಮಿ ಮೊರೆಗಳೂ ಬಿಲ್ ಜಿ ಸಂತತಿಯ ಗುಲಾಮಿ ದೊರೆ ಗಳೊ ಆಳುತ್ತಾ ಇದ್ದುದು ಸರಿಯಷ್ಟೆ. ಜಲಾಓರ್ದಿ ಜಿಲ್ಜಿಯ ಕಾಲದಲ್ಲಿ ಇವನ ಸೇನಾಪತಿಯಾದ ಮಲ್ಲಿಕ್ಕಾಪೂರನು ದಕ್ಷಿಣ ದೇಶಕ್ಕೆ ಪ್ರವೇಶಮಾಡಿ ಓರಗಲ್ಲು ದೇಶವನ್ನೂ ಹೊಯಿಸಲಬಲ್ಲಾಳರ ರಾಜ್ಯವನ್ನೂ ಹಿಡಿದು ನಾಶಮಾಡಿದ ವಿಷಯ ಚರಿತ್ರೆಯಲ್ಲಿ ವಿಶದವಾಗಿದೆ. ಒರಗಲ್ಲಿನಿಂದ ಓಡಿಸಲ್ಪಟ್ಟ ನಮ್ಮ ರಾಜರು ದಕ್ಷಿಣಕ್ಕೆ ಒಂದು ಮಾಧವಾಚಾರ್ಯರೆಂದು ಹೆಸರು, ವಿದ್ಯಾರಣ್ಯರೆಂಬ ಒಬ್ಬ ಮಹಾ ಮುಸಿಯ ಸಹಾಯದಿಂದ ತುಂಗಭದ್ರಾ ತೀರದಲ್ಲಿರುವ ವಿಜಯನಗರದಲ್ಲಿದ್ದುಕೊಂಡು ದೊಡ್ಡ ರಾಜ್ಯವನ್ನು ಕಟ್ಟಿ ಹೆಚ್ಚಾದ ಭಾಗ್ಯಕ್ಕೆ ಅಧಿಪತಿಗಳಾಗಿದ್ದರು. ಅತ್ತ ಓರ ಗಲ್ಲು ರಾಜ್ಯವನ್ನು ಜೈಸಲು ಬಂದಿದ್ದ ತುರುಕರಲ್ಲಿ ದೇಶವನ್ನು ನಾಶಮಾಡಿ ಸಿಕ್ಕಿದ ಭಾಗ್ಯವನ್ನೆಲ್ಲಾ ದೋಚಿಕೊಂಡು ಹೋದವರು ಹೋಗುತ್ತಾ ಉಳಿ ದವರು ದಕ್ಷಿಣ ದೇಶದಲ್ಲಿ ನಿಂತು ಅಲ್ಲಲ್ಲಿ ಸಿಕ್ಕಿದಷ್ಟು ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದರು. ಅವರಲ್ಲಿ ಒಬ್ಬಾನೊಬ್ಬ ಮನುಷ್ಯನು ವಿಶೇಷವಾಗಿ ಪ್ರಾಬಲ್ಯಕ್ಕೆ ಒಂದನು. - ಇವನಹೆಸರು ಸಫ‌ರ್ಖಾ ಇದಕ್ಕೆ ಮುಂಚಿನ ಹೆಸರು ಹರ್ಸ, ಇವನು ಗಂಗನೆಂಬ ಒಬ್ಬ ದಿ ಬ್ರಾಹ್ಮಣನ ಮನೆಯಲ್ಲಿ ಚಾಕರಿ ಇದ್ದನು. ಈ ಬ್ರಾಹ್ಮ ಇನ ಹೆಸರು ಗಂಗುಜೋಯಿಸ, ಜೋಯಿಸನು ಮಹಮ್ಮದ್ ತೊಗಲಖನ ದಯಕ್ಕೆ ವಿಶೇಷವಾಗಿ ಪಾತ್ರನಾಗಿದ್ದನು. ಹಸನ್ನನು ಒಂದು ದಿನ ಜೋಯಿಸನ ಹೊಲವನ್ನು ಉಳುತ್ತಿರುವಾಗ ನೇಗ: ಮುಂದಕ್ಕೆ ಹಾಯದೆ ತಡೆಯಿತು. ಅದೇ ನೆಂದು ನೋಡಲು ಒಂದು ಸರಪಣಿ ಸಿಕ್ಕಿತು. ಆ ಸರಪಣಿಯು ನೆಲದಲ್ಲಿ ಹೂಳಿದ್ದ ಒಂದು ತಾವುದ ಕೊಪ್ಪರಿಗೆಗೆ ತಗುಲಿಸಿತ್ತು. ಅಗೆದು ನೋಡಲು ಆ ಕೊಪ್ಪರಿಗೆ ತುಂಬ ಚಿನ್ನದ ನಾಣ ಪಿತ್ತು. ಹಸನ್ನನು ಆ ನಿಕ್ಷೇಪವನ್ನು ತಂದು ತನ್ನ ಯಜ ಮಾನಸಿಗೆ ಕೊಟ್ಟನು. ಗಂಗುಜೋಯಿಸನಿಗೆ ಬಹಳ ಸಂತೋಷವಾಯಿತು. ಅವನು