ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕ | 6) ಮಹಮೂದ್ ಗವಾನನ ಚರಿತ್ರೆ. 'ನನ ೧೯೧೯. ಆ ಭತ್ಯನ ಪ್ರಾಮಾಣಿಕತೆಯನ್ನು ಮೆಚ್ಚಿ ಈ ಸಂಗತಿಯನ್ನು ಚಕ್ರವರ್ತಿಯ ಮಗ ನಾದ ಮೊಹಮ್ಮದ್‌ ತೊಗಲಖನಿಗೆ ತಿಳಿಸಿದನು. ರಾಜಪುತ್ರನು ಇದನ್ನು ತನ್ನ ತಂದೆಗೆ ಹೇಳಲು ಆ ದೊರೆಯು ಒಂದುನೂರು ಕುದುರೆಗೆ ತುಕಡಿದಾರನಾಗಿರೆಂದು ಹಸನ್ನನ್ನು ನೇಮಕಮಾಡಿದನು. ಹಸನ್ನನಿಗೆ ಈ ಅಧಿಕಾರ ದೊರೆಯುವುದಕ್ಕೆ ಮುಂಚೆ ಆ ಗಂಗುಜೋಯಿಸನು ಅವನನ್ನು ಕುರಿತು --ಎಲಾ ಡರ್ಸ, ದೊರೆತನ ಮಾಡುವ ಪದಸಿ ನಿನಗೆ ಬರುವುದು ಖಂಡಿತ, ನಿನ್ನ ಜಾತಕವನ್ನು ಗುಣಿಸಿನೋಡಿದರಲ್ಲಿ ಗೊತ್ತಾಯಿತು, ನೀನು ಇನ್ನು ಮೇಲೆ ನಮ್ಮ ಮನೆಯಲ್ಲಿ ಚಾಕರಿ ಮಾಡಬೇಡ, ಎರಡು ಹೊತ್ತು ಊಟಮಾಡಿ ಕೊಂಡು ಸುಖವಾಗಿರು ಎಂದನು. ಅದಕ್ಕೆ ಸಸನ್ನನು--ಅಯ್ಯೋ ಸ್ವಾಮಿ! ಒಂದು ಹೊತ್ತಿನ ತಿಂಡಿಗೂ ಗತಿ ಇಲ್ಲದೆ ತಮ್ಮ ಮನೆಯಲ್ಲಿ ಚಾಕರಿಮಾಡಿಕೊಂಡು ಬಿಡಿ ರುವ ನನಗೆ ದೊರೆತನವೆಂದರೇನು? ಇದು ತಿರುಕನ ಕನಸಾಗಿದೆ ಎಂದು ಹೇಳಿದನು. ಅದಕ್ಕೆ ಗಂಗುಭಟ ನು- -ನಿನಗೆ ದೊರೆತನ ಎ೦ದರೆ ನನಗೇನ ಕೊಡುತ್ತೀಯೆ ? ಎಂದು ಕೇಳಲು ಅದಕ್ಕೆ ಆ ಆಳು.. -ಸ್ವಾಮಿ, ಹಾಗೆ ನನಗೆ ದೊರೆತನ ಬಂದರೆ ತನ್ನನ್ನು ನನ್ನ ಭಂಡಾರದ ಅಧಿಕಾರಕ್ಕೂ ನನ್ನ ಮಂತ್ರಿತ್ವಕ್ಕೂ ನೇಮಿಸುತ್ತೇನೆ. ಮತ್ತು ತನ್ನ ಹೆಸರಿನಮೇಲೆ ನಾನು ಬದುಕುತ್ತೇನೆ ಎಂದನು. ಈ ಮಾತು ನಡೆದ ಕೊ೦ಚದಿವಸದಲ್ಲಿಯೇ ಹಸನ್ನನ್ನು ತೊಗಲಖನು ದಂಡಿನ ಸರದಾರ ನನ್ನಾಗಿ ಮಾಡಿ ದರ್ಖಗೆ ಕಳುಹಿಸಿದನು. ಅಲ್ಲಿ ಸನ್ನನು ವಿಶೇಷ ಪರಾಕ್ರನು ವನ್ನು ತೋರಿಸಿ ಸಫರ್ ಖಾನನೆಂಬ ಹೆಸರಿನಿಂದ ದೊಡ್ಡ ಅಧಿಕಾರಿಯಾಗಿ ಖಿಲವಾಗಿದೆ ರಾಜ್ಯಗಳನ್ನು ಜೈಸಿಕೊಂಡು ಅಲ್ಲಿಗೆ ಹೊರೆಯಾದನು : ಕೂಡಲೆ ತನ್ನನ್ನು ಕಾಪಾ ಡಿದ ಗಂಗುಜೋಯಿಸನನ್ನು ಕರೆಯಿಸಿ ಅವನನ್ನು ಹೆಚ್ಚಾದ ಮಕ್ಕಾದೆಯಿಂದ ಕಂಡು ತಾನು ನಾಗಾ ನಮಾಡಿದ್ದ ಪ್ರಕಾರ ನಿಶೇಷವಾದ ಕೃತಜ್ಞತೆಯಿಂದ ಆ ಬ್ರಾಹ್ಮಣನನ್ನು ತನ್ನ ಮಂತ್ರಿಯಾಗಿ ನೇಮಿಸಿಕೊಂಡು ಅವನಿಗೆ ತನ್ನ ಕೋಶಾಧಿಕಾರವನ್ನು ಕೊಟ್ಟ ದೂ ಅಲ್ಲದೆ " ಜಲಾಲುರ್ದ್ದೀ ಪರ್ಸ ಗಂಗು ಬಹುಸಿ” ಎಂದು ಹೆಸರಿಟ್ಟು ಕೊಂಡನು. ಇವನ ತರುವಾಯ ದೊರೆತನಕ್ಕೆ ಒಂದ ದೊರೆಗಳೆಲ್ಲರೂ * ಗಂಗು ಒಹಮನಿ " ಎಂಬ ಬಿರುದನ್ನು ಬಿಡಲಿಲ್ಲ. ಇವರ ವಂರಕ್ಕೆ ಈ ಹೆಸರು ಬಂತು. ಈ ದೊರೆಗಳ ರಾಜಧಾನಿ ಮೊದಲು ಕಲ್ಬುರ್ಗಿ, ತರುವಾಯ ಬೀದರ್ ಎಂಬ ಪಟ್ಟಣ, ಈ ವರದ ದೊರೆಗಳು ಈಗಿನ ಹೈದರಾಬಾದು ರಾಜ್ಯ ಮತ್ತು ಅದಕ್ಕೆ ಪೂರದಿಕ್ಕಿಗೆ ಬಂಗಾಳಕೊಲ್ಲಿವರೆಗೂ ತೆಲಗುಸೀಮೆ, ಕರ್ನೂಲು ಪ್ರಾಂತ ಪಶ್ಚಿಮಸಮುದ್ರದವರೆಗಿನ ಸೀಮೆ, ಇದೆಲ್ಲಾ ಸೇರಿಸಿಕೊಂಡು ಬಹುಸಿರಾಜ್ಯವೆಂಬ ಹೆಸರಿನ್ನಿಟ್ಟು ಆಳುತಿದ್ದರು. ಬೀಾರುದೇಶವೂ ಸಹ ಇದರಲ್ಲಿ ನಳಿತವಾಗಿತ್ತು. ಈ ವಂಶದ ಮುಸರ್ಲ್ಮಾ ಮೊರೆಗಳು ಹಲವ ತಲೆಗಳ ವರೆಗೂ ಆಳಿದರು. ಇವರು ಅನೇಕ ರಾಜ್ಯಗಳನ್ನು ಗೆದ್ದು ಅನೇಕ ಸೀಮೆಗಳನ್ನು ಕೊಳ್ಳೆ ಹೊಡೆದು ವಿಶೇಷವಾಗಿ ಚಿನ್ನ ಬೆಳ್ಳಿ, ರತ್ನ ಮೊದಲಾದುದನ್ನು ದೋಚಿಹಾಕಿಕೊಂಡು ಅತ್ಯಧಿಕವಾಗಿ ಐಶ್ವರ