ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕೆ. ಮುಹಮೂದ್ ಗವಾನನ ಚರಿತ್ರೆ. | ನನ: ೧೯೧೯. • •. . . .. . ಪಾಂಡಿತ್ಯವು ಬಹಳ ಹೆಚ್ಚಾಗಿತ್ತು. ಗವಾನನಿಗೆ ಪೂರ್ತಿಯಾಗಿ ವಯಸ್ಸು ಬಂದಮೇಲೆ ಇವನ ಚಿಕ್ಕಪ್ಪನಾದ ಖಾಜಾಷಂಷುದೀನನಿಗೆ ರಾಜ್ಯಭಾರ ನಡಿಸುವ ವಿಚಾರದಲ್ಲಿ ವಿಶೇಷವಾಗಿ ಸಹಾಯಮಾಡುತ್ತಿದ್ದನು. ಇದೂ ಅಲ್ಲದೆ ಒಳದೇಶದಲ್ಲಿ ಆಗಾಗ ಖಂವಾರಿಯವರೂ ಇತರ ಜನರೂ ಬಂದು ಹಾವಳಿಮಾಡಿ ಜನರಿಗೆ ತೊಂದರೆಯನ್ನು ಕೊಡುತಿದ್ದರು, ಇವರನ್ನು ಹೊಡೆದು ಓಡಿಸಲು ಹೊರಟ ಸೇನೆಗೆ ಗವಾನನು ಅಧಿಕಾರಿಯಾಗಿ ನೇಮಿಸಲ್ಪಟ್ಟನು. ಆಗ ಅವನು ಆ ಜನರ ಮೇಲೆ ಯುದ್ಧವನ್ನು ಮಾಡಿ ಅವರ ಕಡೆ ನಾಯಕನಾದ ಹಾಜಿ ಮೊಹಮ್ಮದ್ ಎಂಬ ಖದಾರೆಯವನನ್ನು ಕೈಸೆರೆಹಿಡಿದು ತಂದನು. ಹೀಗೆ ಗವಾನಸಿಗೆ ಯುದ್ಧ ಪ್ರಮೇಯದಲ್ಲಿಯೂ ರಾಜಕೀಯವಾ: ಪಾರದಲ್ಲಿಯೂ ಮೊದಲಿಂದಲೂ ಅಭ್ಯಾಸ ವಿದ್ದ ಕಾರಣ, ರಾಜ್ಯಭಾರಕ್ರಮದಲ್ಲಿ ಅವನಿಗೆ ಹೆಚ್ಚಾದ ಅನುಭವ ಉಂಟಾಯಿತು. ಆದರೆ ಅಲ್ಲಿ ದೊರೆಯಾಗಿದ್ದ ಷಹತವಾಸ್ಸನು ಚತುರನಾದ ಗವಾನನ್ನು ಕಂಡು ಸಂತೋಷಪಡುವುದಕ್ಕೆ ಬದಲಾಗಿ ಅಸೂಯೆಯಿಂದ ದ್ವೇಷವನ್ನು ಸಾಧಿಸಿ ವಿಪತ್ತನ್ನು ತರುವ ಸೂಚನೆ ಕಂಡುಬಂತು. ಅದರಿ೦ದ ಗವಾನನು ತನ್ನ ದೇಶವನ್ನು ಬಿಟ್ಟು ರಾಜತಂತ್ರದ ಸೆಲೆಯನ್ನು ತ್ಯಜಿಸಿ ವ್ಯಾಪಾರದಿಂದ ಜೀವನಮಾಡಿಕೊಳ್ಳೋಣ ವೆಂದ, ಹೊರಟನು. ಆಳುವ ದೊರೆಯು ದ್ವೇಷವನ್ನು ಹಿಡಿದರೆ ಛಲವನ್ನು ಕಟ್ಟಿ ತಕಕಾರ ಭಾಗವನ್ನು ನಡಿಸುವುದುಂಟು. ಇದು ಸಾಗುವುದಿಲ್ಲವೆಂದು ಕಂಡರೆ ದೇಶಾ೦ತರಗತರಾಗಿ ಹೊರಟುಹೋಗುವುದು ಎರಡನೆಯ ಸರಾಯ. ಎರಡನೆಯ ಕೆಲಸವೇ ಸಾಧುವೆಂದು ಗವಾನನಿಗೆ ತೋರಿತು. ಇವನಿಗಿದ್ದ ಪಾಂಡಿತ್ಯದ ಕೆಚ್ಚು ಸಾಧಾರಣ ವರ್ತಕರ ರೀತಿಯಲ್ಲಿ ಪ್ರಯಾಣಮಾಡಿಕೊಂಡು ಹೋಗಲು ಎಡೆಗೊಡ ಲಿಲ್ಲ. ಇವನ ದಾರಿಯಲ್ಲಿ ಹೋಗುತ್ತಾ ಅಲ್ಲಲ್ಲಿ ತಂಗುತ್ತಾ ಆಯಾ ವೂರುಗಳಲ್ಲಿ ಪಂಡಿತರು, ಸಿದ ಪುರುಷರಾದ ಫಕೀರರು ಇವರ.ಗಳ ಪರಿಚಯಮಾಡಿಕೊಂಡನು. ಕೆಲವು ವರುಷ ಹೀಗೆ ಕಳೆಯಿತು. ಅಂಥ ಸತ್ತ ಹನಾಸಗಳಿ೦ದ ಇವನ ಪಾಂಡಿತ್ಯ ಇನ್ನೂ ಹೆಚ್ಚಾಗಲು ಕಾರಣವಾಯಿತು. ಮುಸಲ್ಮಾನರಲ್ಲಿ ಎಂಥ ಪಾಂಡಿತ್ಯ ನಿದ್ದರೂ ಅದಕ್ಕೆ ಅವರ ಮತದ ಸಂಬಂಧ ಇರುತ್ತಲೇ ಇರುವುದು ವಾಡಿಕೆಯಾಗಿದೆ. ಇದರಿಂದ ಇವಸಿಗೆ ಲೋಕವ ವಾರದಲ್ಲಿ ವೈರಾಗ ಹುಟಿ ಮತಾಭಿಮಾನದಿಂದ ಇವನು ನಕ್ಕಾಪಟ್ಟಣಕ್ಕೆ ಪ್ರಯಾಣಮಾಡಿದನು. ಸರಿರುವ ವಾದ ಸೃಳನೆಂದು ಮುಸಲ್ಮಾನರು ಭಾವಿಸಿರುವ ಆ ಮಕ್ಕಾಪಟ್ಟಣದಲ್ಲಿ ದೈವಭಕ್ತಿಯಿಂದಲೂ ಗುರು ಭಕ್ತಿಯಿಂದಲೂ ತುರುಕರು: ಲೋಕವ್ಯವಹಾರವನ್ನು ಬಿಟ್ಟು ದೇಶ ದೇಶಗಳಿಂದ ಬಂದು ಅಲ್ಲಿ ವಾಸವಾಗಿರುವುದು ಈಗಲೂ ವಾಡಿಕೆಯಾಗಿದೆ. ಹಾಗೆ ಪಂಡಿತ ರಾಗಿಯೂ ಸಿರಾಗಿಗಳಾಗಿಯೂ ಇದ ವರ ಗೋಷ್ಠಿ ಯಲ್ಲಿ ಗವಾನನು ಗ್ರ೦ಥನ್ಯಾಸಂಗ ವನ್ನು ಮಾಡುತ್ತಾ ಕಾಲವನ್ನು ಕಳೆಯುತ್ತಾ ಇದ್ದನು. ಇವನು ಫಾರ್ಸಿಸ್ತಾನವನ್ನು ಬಿಟ್ಟು ಹೊರಟು ಹೋದ ಎರಡುವರುಷಗಳ ತರುವಾಯ ಅವನ ಚಿಕ್ಕಪ್ಪ ಖಾಜಾಷಂಷುರ್ದೀನನು ತನ್ನ ಮಗ ಖಾಜಾ ಮೊಹದೀ ನನ್ನು ವರ್ ಕೆಲಸಕ್ಕೆ ನೇಮಿಸಿ ತಾನೂ ಮಕ್ಕಾಕ್ಕೆ ಹೊರಟುಹೋದನು. ಮುಸ