ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಪು: ಸ: ಪ್ರಸ್ತ ಮಹಮದ್ ಗವಾನನ ಚರಿತ್ರೆ. | ಕರ್ನಾಟಕ ಸಾಹಿತ್ಯ - ಎ.


* * * == : : *

ಜೀವನಕ್ಕಾಗಿ ಬಂದು ಸೇರಿಕೊಂಡಿದ್ದ ಅನ್ಯದೇಶೀಯರು, ಹೀಗೆ ಹಳೇ ತುರುಕರು ಹೊಸ ತುರುಕರು ಎಂದು ಎರಡು ಪಂಗಡವಿತ್ತು, ಇವರುಗಳೆಲ್ಲಾ ಮೊದಲು ಸ್ನೇಹವಾಗಿಯೇ ಇದ್ದರು. ಅಹಮದ್ ಷಹಲಿಯ ಆಳಿಕೆಯಲ್ಲಿ ಕೆಲವು ಹಿಂದೂ ಸಂಸ್ಥಾನಗಳು ಜಯಿಸಲ್ಪಟ್ಟುವು, ಮುಖ್ಯವಾಗಿ ವಿಜಯನಗರದ ಸಂಸ್ಥಾನದವರ ಮೇಲೆ ಈ ತುರುಕದೊರೆಯು ವಿಶೇಷವಾಗಿ ಕಾದಿ ಕೋಟ್ಯಂತರ ಹಿಂದುಗಳನ್ನು ಕಾಫರರೆಂದು ಕೊಲ್ಲಿಸಿದನು. ಹತ್ತು ಸಾವಿರ ಜನ ಕಾಫರರನ್ನು ಕೊಲ್ಲಿಸಿ ಒಂದು ಹಬ್ಬವನ್ನು ಮಾಡಿಸಿದನು. ಹೀಗೆ ಎಷ್ಟೋ ಹತ್ತು ಸಾವಿರ ಜನ ಹೋಗಿ ಅನೇಕ ಹಬ್ಬಗಳು ನಡೆದವು. ಈ ದೊರೆಯು ಅಸಂಖ್ಯಾತನಾದ “ ಕಾಫರರ " ನ್ನು ಕೊಲ್ಲಿ ಸಿದ ಕಾರಣ ಇವನಿಗೆ ನಲಿ ಎಂದು, ಬಿರು ಬಂದು ಅದು ಇವನಿಗೆ ಶಾಶ್ವತವಾಗಿ ನಿಂತುಹೋಯಿತಂತೆ, ವಲಿ ಎಂದರೆ ಖುಷಿ ಎಂದು ಅರ್ಥವಂತೆ. ಈ ಅಹಮದ್ ಷಹನಲ್ಲಿಯ ಆಳಿಕೆಯಲ್ಲಿ ಗುಜರಾತು ಸಂಸ್ಥಾನದಮೇಲೆ ದಂಡನ್ನು ಹೊರಡಿ ಸಿವರು, ಈ ದಂಡಿನಲ್ಲಿ ದೇಶೀಯ ತುರುಕರ ತುಕಡಿಗಳೂ ಸಿದೇತೀಯ ತುಕಡಿ ಗಳೂ ಸೇರಿವು, ಬಸರದೇಸಿಯನಾದ ಹರ್ಸ ಎಂಬುವನು ಈ ದಂಡಿಗೆಲ್ಲಾ ಮುಖ್ಯ ಸೇನಾಪತಿಯಾಗಿದ್ದನು. ದೇಶೀಯ ತುರುಕರು ಸಿವೇಯ ತುರುಕರು ಪರಸ್ಪರ ವಿರೋಧದಿಂದ ಒಬ್ಬರಿಗೊಬ್ಬರು ಸಹಾಯಮಾಡದೇ ಹೋದಕಾರಣ ಬಹುಸಿ ರಾಜ್ಯದ ದಂಡಿಗೆ ಸೋಲಾಯಿತು, ಆದರೆ ಎರಡನೆಯ ಸಾಲ ಅದೇ ಸೇನಾಪತಿಯು ಮೊಗಲಾಯ ತುಕಡಿಗಳನ್ನು ತೆಗೆದುಕೊಂಡು ಹೋಗಿ ಜಯವನ್ನು ಹೊಂದಿದನು. ಹೀಗೆ ಜಯಶೀಲನಾಗಿ ಬಂದ ಸೇನಾಪತಿಯನ್ನು ದೊರೆನಗನೇ ಹೋಗಿ ಎದುರು ಗೊಂಡು ಕರೆದುಕೊ೦ಡು ಬ೦ದನು. ಆ ದಿವಸದಿಂದ ನಿರ್ದೇಶೀಯ ತುರುಕರು ತನ್ನ ಬಲಗಡೆ ಇರಬೇಕೆಂತಲೂ ದೇಶೀಯ ತುರುಕರು ಎಡಗಡೆ ಇರಬೇಕೆಂತಲೂ ದೊರೆಯು ಅಪ್ಪಣೆ ಮಾಡಿದನು. ಇದರಿಂದ ಸ್ವದೇಶೀಯರಿಗೂ ಪಿದೇಶೀಯರಿಗೂ ಅತಿಯಾಗಿ ದ್ವೇಷ ಹೆಚ್ಚಿ ಬೀದಿಬೀದಿಗಳಲ್ಲೆಲ್ಲಾ ಇವರುಗಳು ಜಗಳವಾಡುವುದಕ್ಕೆ ಆರಂಭವಾಯಿತು. ಈ ಸಂದರ್ಭದಲ್ಲಿ ಅಹಮದ್‌ಷಹವಲ್ಲಿ ಸತ್ತು ಹೋದನು. ಇವನ ಮಗ ಸುರ್ಲ್ತಾ ಒಲ್ಲಾ ಉರ್ದಿಗೆ ಪಟ್ಟವಾಯಿತು. ಈ ಹೊಸದೊರೆಯು ಸ್ವಭಾವದಲ್ಲಿ ಒಳ್ಳೆ ಯವನು, ನೀಚನಾದ ಇವನ ತಂದೆಯ ಹಾಗೆ ಇವನಲ್ಲಿ ಕೌರವಿಲ್ಲ, ಆದರೆ ರಾಜಿಭಾರವನ್ನೆಲ್ಲ ಮಂತ್ರಿಗಳಿಗೆ ಬಿಟ್ಟು ತಾನು ಕೇವಲಸ್ತ್ರೀ ಲೋಲನಾಗಿದ್ದನು. ದಖಸಿಯವ ರಿಗೂಫಾರ್ಸಿಯವರಿಗೂ ದೋಷ ದಿನೇ ದಿನೇ ವೃಧಿ ಯಾಯಿತು. ಫಾರ್ಸಿಯವರ ಪ್ರತಿಷ್ಠೆ, ಹೆಚ್ಚಿಬಿಟ್ಟಿತು. ಈ ದೇಶದ ಸ್ಥಿತಿ ಹೀಗಿರುವಾಗಲೇ ಮಡವದ್ ಗವಾನನು ಬಹಮನಿ ರಾಜ್ಯಕ್ಕೆ ಬಂದದ್ದು. ದೊರೆಯು ಸ್ವತ: ತುಂಬ ಸಿದ್ಯಾವಂತನಾಗಿದ್ದನು : ವಿದ್ಯಾವಂತರಲ್ಲಿ ತುಂಬ ಅಭಿಮಾನವನ್ನು ಇಟ್ಟು ಕೊಂಡಿದ್ದನು. ಗವಾನನಿಗೆ ಇದ್ದ ಶ್ಲಾಘವಾದ ಪಾಂಡಿತ್ಯವು ಇವನನ್ನು ತೊರೆಯ ಆಸ್ಥಾನಕ್ಕೆ ಎಳೆದುಕೊಂಡು ಹೋಯಿತು. ಇವನಲ್ಲಿ ರಾಜಾಭಿಮಾನ ಏಶೇಷವಾಗಿತ್ತು, ಇವನ ದೇಶದ ಜನರೂ ಅಲ್ಲಿ ಬಹಳವಾಗಿದ್ದರು. ಇದಕ್ಕಿಂತಲೂ ಅನುಕೂಲವಾದ ಸ್ಥಳ ಇನ್ನು ೧೨