ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷ ಕ್ಷತ್ರಿಕೆ) ಮಹಮದ್ ಗವಾನನ ಚರಿತ್ರೆ. 'ಬನವರಿ ೧೯:. ಯಾವುದು ಸಿಕ್ಕೀತು ? ದೊರೆಯ ಬಲವಂತದಿಂದ ಇವನೂ ದರ್ಖನಲ್ಲಿಯೇ ಸ್ಥಿರ ನಾಗಿ ನಿಂತನು. ಈ ಗವಾನನಿಗೆ ಒಂದು ಅಧಿಕಾರವೂ ಆಯಿತು. ರ್ಸ ೧೪೦೩ ರಲ್ಲಿ ಕೊಂಕಣ ದೇಶದ ಕಡೆ ಇದ್ದ ಕೆಲವರು ದೇಶೀಯ ಅರಸು ಗಳು ಬಹಮಸಿ ರಾಜ್ಯದ ಮೇಲೆ ಕೈಮಾಡಿ ಕದನಕ್ಕೆ ನಿಂತರು, ಇವರನ್ನು ಸಿಗ್ರಹ ಮಾಡುವುದು ಸುಲಭವಾದ ಕೆಲಸವಾಗಿ ಕಂಡುಬರಲಿಲ್ಲ. ಆದಕಾರಣ ದೊರೆಯ ಮಲ್ಲಿಕುತುಬ್ಬಾರ್ ಎ೦ಬ ಸರದಾರನ ಸಂಗಡ ಸೇನೆಯನ್ನು ಕಳುಹಿ ಸಿದನು. ಈ ಸೇನೆಯಲ್ಲಿ ಒಬ್ಬ ಅಧಿಕಾರಿಯಾಗಿ ಗವಾನನು ಹೋಗಬೇಕೆಂದು ಅಪ್ರಣೆಯಾಯಿತು. ಸೇನಾಪತಿಯಾದ ಮಲ್ಲಿಕನು ಆ ಪ್ರಾಂತದ ಕೆಲವು ಕೆಲವು ಮರಾಟಿ ಅರಸರನ್ನು ಜಯಿಸಿದನು. ಈ ಸರದಾರರಲ್ಲಿ ಒಬ್ಬನಾದ ಶರಕೆ ದೊರೆ ಯನ್ನು ಮುಸಲ್ಮಾನನಾಗೆಂದೂ ಇಲ್ಲವಾದರೆ ಅವನನ್ನು ಉಳಿಸದೆ ಕಡಿದುಬಿಡುವು ವಾಗಿಯೂ ಮಲ್ಲಿಕನು ಹೇಳಿದನು. ಅದಕ್ಕೆ ಹೆದರದೆ ಇರಕೆ ರಾಜನ -ಖೇಲ್ ಣಾ ಪಟ್ಟಣದ ಸರದಾರ ಶಂಕರರಾವ್ ಎಂಬುವನು ತನ್ನಲ್ಲಿ ಬಹಳವಾಗಿ ಹಗೆತನವನ್ನು ಸಾಧಿಸುತ್ತಿದ್ದಾನೆ, ಅವನನ್ನು ಜಯಿಸಲು ತನಗೆ ಮಲ್ಲಿಕನು ಸಹಾಯ ಮಾಡಿದರೆ, ಆ ಶ೦ಕರರಾಯನೂ ತಾನೂ ಏಕಕಾಲದಲ್ಲಿ ತುರುಕರಾಗಬಹುದು ಎಂದನು. ಇವಕ್ಕೆ ಒ ಮಲ್ಲಿಕನು ಸೇನೆಯನ್ನು ಬೇಳಣ ಪಟ್ಟಣದ ಕಡೆಗೆ ತಿರುಗಲು ಅಪ್ಪಣೆ ಮಾಡಿದನು. ಆದರೆ ಇವನ ಸೇನೆಯಲ್ಲಿ ಸಿಶೇಷ ದುಸಿಮುಸಲ್ಮಾನರೇ ಇದ್ದರು ಇವರು ವಿದೇಶಿಯಾದ ಮಲ್ಲಿಕನ ಅಪ್ಪಣೆಯಂತೆ ನಡೆಯದೆ ಹೋದರು. ಬೇಳೆಣಾ ಪಟ್ಟಣವು ದೊಡ್ಡ ಕಾಡಿನ ಮಧ್ಯೆ ಇತ್ತು. ಈ ಮಹಾರಣ್ಯದಲ್ಲಿ ಹೋಗುವುದು ಸುಲಭವಾದ ಕೆಲಸವಾಗಿರಲಿಲ್ಲ. ಹೀಗೆ ದಹಿಸಿ ಸೇನೆಯು ತಿರುಗಿಬಿದ್ದು ಮುಂದಕ್ಕೆ ಕಾಲಿಡದೆ ಒ೦ದಿರುಗಿ ಮಲ್ಲಿಕನು ಉಳಿದ ಜನರನ್ನು ಕರೆದುಕೊಂಡು ಆ ಕಾಡಿನಲ್ಲಿ ಬೇಳಣಾ ಪಟ್ಟಣವನ್ನು ಹುಡುಕುತ್ತಾ ಹೊರಟನು. ಈ ಕಾಡನ್ನು ದಾಟುವಾಗ ವಾರಿಯಲ್ಲಿ ಅನೇಕರು ತೀತಜ್ವರ ಬಂದು ಛಲವಾದರು. ಈ ಸಂದರ್ಭವನ್ನು ತಿಳಿದು ಶರಕೆ ಸರದಾರನು ಗುಟ್ಟಾಗಿ ಜೀಣಾ ಸರದಾರನಿಗೆ ಬೇಹುಗಾರರ ಮೂಲಕ ಹೇಳಿ ಕಳುಹಿಸಿದನು. ಅವರಿಬ್ಬರ ದಂಡೂ ಬಂದು ತುರುಕರ ದಂಡನ್ನು ನಾಶ ಮಾಡಿತು. ಕದನದಲ್ಲಿ ಮಲ್ಲಿಕನೂ ಮಡಿದನು. ಗವಾನನು ಹಾಗೂಹೀಗೂ ಪ್ರಾಣವನ್ನು ಉಸಿಕೊಂಡು ಓಡಿಬಂದು ಚಾಕಣ ದುರ್ಗವನ್ನು ಸೇರಿವನು, ಈ ಸಮಾಚಾರವನ್ನು ಗವಾನನಿಂದ ಪಿಸ್ತಾರವಾಗಿ ಕೇ ಸುತ್ತಾ ಅಲ್ಲಾಉದೀನನು ವಹಿಸಿ ತುರುಕರಲ್ಲಿ ಅನೇಕರನ್ನು ಹಿಡಿಯುಸಿ ಫಿರಂಗಿ ಬಾಯಿಗೆ ಕಟ್ಟಿಸಿ ಸುಹಿಸಿದನು. ಸುಮಾರು ಈ ಕಾಲದಲ್ಲಿ ದೊರೆಯ ಭಾವಮೈದನಾದ ಜಲಾಲ್ ಪಾನನು ತಲಗುಂದದ ಪ್ರಾಂತದಲ್ಲಿ ಕೆಲವು ಪುಂಡರನ್ನು ಕಟ್ಟಿಕೊಂಡು ದಂಗೆ ಎದ್ದನು. ಇದನ್ನು ಅಡಗಿಸಲು ಹೊರಡಬೇಕೆಂದು ದೊರೆಯು ಅಪ್ರಣೆ ಮಾಡಿದ ಪ್ರಕಾರ, ಗನ: ನನು ಸೇನಾಸಮೇತನಾಗಿ ಹೋti ಜಲಾಲನನ್ನು ಜಯಿಸಿ ಬಂದನು. ಈ ರಾಜಕಾರವನ್ನು ನಿರ್ವಹಿಸಿದ್ದಕ್ಕಾ; ಆ ಸೇನಾ ಸತಿಗೆ ಪಾದಷಹನು ವಿಶೇಷವಾಗಿ