ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳ ಮುಕ್ತ ಕವಿ ಪ್ರಹೈ.. ಮಹಮದ್ ಗವಾನನ ಚರಿತ್ರೆ, ಕರ್ಣಾಟಕ ಸಾಹಿತ್ಯ ಮರಾದೆಯನ್ನು ಮಾಡಿದನು. ಆದರೆ ನಾನನು ಯಾವಾಗಲೂ ಪರಹಿತೈಷಿ ಯಾಗಿಯೇ ಇದ್ದವನಾದಕಾರಣ, ದೊರೆಯ ಸಂತೋಷಸಮಯವನ್ನು ನೋಡಿ ಕೊಂಡಿದ್ದು ಜಲಾಲನು ದೈನ್ಯದಿಂದ ಆಸ್ಥಾನದಲ್ಲಿ ದೊರೆಯ ಕ್ಷಮಾಪಣೆಯನ್ನು ಬೇಡಿಕೊಳ್ಳು ವಂತೆ ಮಾಡಿ, ಅದೇ ತಲಗುಂದವನ್ನು ಅವನಿಗೆ ಜಹಗೀರಿಯಾಗಿ ಕೊಡಿಸಿದನು. ಎರಡುವರುಷದ ತರುವಾಯ ಅಲ್ಲಾ ಉರ್ದಿ ಸತ್ತು ಇವನ ಮಗ ಹುಮಾ ರ್ಯೂ ಎಂಬುವನಿಗೆ ದೊರೆತನವಾಯಿತು. ತಂದೆ ಸಾಯುವಾಗ ಮಗನನ್ನು ಕುರಿತು- ಗವಾನನನ್ನು ಗೌರನವಾಗಿ ಕಾಪಾಡು ಎಂದು ಹೇಳಿದ ಮಾತಿನಪ್ರಕಾರ, ಈ ಹೊಸದೊರೆಯು ಗವಾನನಿಗೆ ಬರುವ ಮೊದಲಾದನ್ನು ಕೊಟ್ಟು ಗೌರವವಾಗಿ ಕಾಣು ತಿದನು. ಜಲಾಲ್ ಖಾನನ ಪ್ರನ: ತಲಗುಂದದಲ್ಲಿ ದಂಗೆ ಎಬ್ಬಿಸಿದನು. ಪುನಃ ಗವಾನ: ದಂಡಿನೊಡನೆ ಕಳುಹಿಸಿದರು: ಇವನು ಸ್ಪಳಕ್ಕೆ ಹೋಗಿ ಪುಂಡನ್ನು ಅಡ ಗಿಸಿ ಆ ತೆಲಗಾಣ ದ ಸೀಮೆಯನ್ನು ಸಮಾಧಾನವಾದ ಸ್ಥಿತಿಗೆ ತಂದನು. ಇಂಥಾ ಸ್ವಜನಮಾಡುತಿದ ಗಜಾಲಿನಿಂದ ದೊರೆಗೆ ಅವರ ಮೇಲೆ ಬಹು ದ್ವೇಷಹುಟ್ಟ ತು. ಈ ಯುದ ದ ಕಾರ ಕಾ ಗಣಾನನು ಹೊರಟುಹೋಗಿದ್ದ ಕಾಲದಲ್ಲಿ ಹುಮಾ ರ್ಯೂಪತಸಲಿಂ ಬಹುಸಿಯು ತನ್ನ ಸಂಬಂಧಗಳನ್ನು ಸುಮಾರು ೬೦೦ ಜನದ ವರೆಗೆ ಕೊಂದಾಕಿಸಿದನು. ಇನಸಿಗೆ ಸಾಲಿಂ ಎಂದು ಹೆಸರು ಬರಲು ಇದೇ ಕಾರಣ, (ಸಾಲಿ ಎಂದರೆ ನೀಚನೆಂದು ಅರ್ಥ.) ಗವಾನನು ಆಗ ರಾಜಧಾನಿ ಯಲ್ಲಿ ಇದ್ದ ಪಕ್ಷ ತೊರೆಯು ಇಂಥಾ ಅನಾಹುತಕ್ಕೆ ಪ್ರವೇಶಮಾಡಲು ಆ ಮಂತ್ರಿ ಯು ಆಸ್ಪದಕೊಡುತ್ತಿರಲಿಲ್ಲ. ಈ ಮಹಾ ಮುಷ್ಕರಕ್ಕೆ ಗವಾನನು ಅಡ್ಡಿಯನ್ನು ತಂದು ಹಾಕಿಯಾನೆಂತಲೇ ಅವನು ಇಲ್ಲದ ಹಾಗೆ ಹುಮಾರ್ಯೂಷಹನು ಅವನನ್ನು ಯುದ್ದದ ನೆಪದಿಂದ ಸ್ಥಳಾಂತರಕ್ಕೆ ಕಳುಹಿಸಿರಬಹುದೆಂದು ಯೋಚಿಸಿಕೊಳ್ಳು ವು ದಕ್ಕೆ ಆಧಾರವಿದೆ. ಹಾಗಲ್ಲದಿದ್ದರೆ ಒಂದು ಸಾಧಾರಣ ದಂಗೆಯನ್ನು ಅಡಗಿಸಲು ಮಂತ್ರಿಯೇ ಹೊರಡಬೇಕಾದ ಅಗತ್ಯವೇನೂ ಇರಲಿಲ್ಲ. ಆದಕಾರಣ ಇದು ಸೂಕ್ತ ಭಾವಿ ದೊರೆಯು ಕೃತಸಂಕೇತನಾಗಿ ಮಾಡಿದ ಕಾರವೆನ್ನುವುದಕ್ಕೆ ಅನುಮಾನ ಕಾಣುವುದಿಲ್ಲ, ಅತ್ಯ೦ತ ಕೊರಿಯಾದ ಈ ದೊರೆಯ ಸ್ವಭಾವವನ್ನು ನೋಡಿ ನೋಡಿ ಸಾಕಾಗಿ ಇಂಥವನ ಕೈಕೆಳಗೆ ಉದ್ಯೋಗದಲ್ಲಿರಬಾರದೆಂದು ಗವಾನನು ಬಹಳವಾಗಿ ಅಸಮಾಧಾನಪಟ್ಟು ಕೊಂಡಿದ್ದನು. ಇದು ಸಹಜವೆ. ದೊರೆ ಯಾವ ಕೆಟ್ಟ ಕಾರವನ್ನು ಮಾಡಿದರೂ ಆ ಭಾರವನ್ನು ಮಂತ್ರಿ ವಹಿಸಬೇಕಾಗುವುದು. ಅವನ ಮೇಲೆಯೇ ಆ ತೂಕವನ್ನೆಲ್ಲಾ ಪ್ರಜೆಗಳು ಹಾಕುವರು. ರಾಜನ ಬುದ್ಧಿಯ ಅಗಾನನ್ನು ಎಳೆದು ಹಿಡಿಯಲು ಮಂತ್ರಿಯ ಅಶ್ವಾರೂಢನಾಗಿದಾನೆ. ಇಂಥಾ ಕಷ್ಟ ತರವಾದ ಕೆಲಸವನ್ನು ಮಾಡಲು ತನ್ನ ಯತ್ನ ಜಾರಿದ್ದ ಕಾರಣ, ಇಂಥಾ ಗಣಿಯ ಚಾಕರಿಯಲ್ಲಿ ಎಂದಿದ್ದರೂ ತನಗೆ ಕೆಟ್ಟ ಹೆಸರು ತಪ್ಪುವುದಿಲ್ಲವೆಂಬ ಭೀತಿ ಯಿಂದ ಗವಾನನು ತನ್ನ ಮಂತ್ರಿಯ ಕೆಲಸಕ್ಕೆ ರಾಜೀನ: ಮೆಯನ್ನು ಕೊಡಬೇಕೆಂದು ಸತು ಯೋಚಿಸಿದ್ದನು.