ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ಕಿ ಸಪ್ರಷ್ಟ . ಮಹಮದ್ ಗವಾನನ ಚರಿತ್ರೆ. | ಕರ್ಣಾಟಕ ಸಾಹಿತ್ಯ • • • • ..- " . . . ... - *-- : • • • • • • • : .. .. .. .. ... .. . . . . . . . . . ಬೆಳೆಯಿತು, ಆದರೆ ಆ ದಿವಸನೇ ದೊರೆಯಾದ ನಿಸಾ೦ಷರನು ರ್ಸ ೧೪೬ ರಲ್ಲಿ ಸತ್ತು ಹೋದನು. ಕೂಡಲೆ ಈ ದೊರೆಯ ತಮ್ಮನಾದ ೯ ವರುಷದ ಮೊಹಮ್ಮದ್ ಷಹನಿಗೆ ಪಟ್ಟವನ್ನು ಕಟ್ಟಿ ದರು. ಗವಾನನು ಮಂತ್ರಿಯಾಗಿಯೇ ಇದ್ದುಕೊಂಡು ವಿಶೇಷವಾದ ರಾಜಭಕ್ತಿಯಿಂದ ಎಲ್ಲಾ ಕಾರಗಳನ್ನೂ ನಿರ್ವಹಿಸಿದನು: ಈ ಮಂತ್ರಿಯು ವಿದ್ವತ್ತಿನ ಮಹಿಮೆಯನ್ನು ಬಲ್ಲ ಪಂಡಿತನಾದ ಕಾರಣ ದೊರೆಯ ವಿದ್ಯಾಭ್ಯಾಸಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿದನು. ಈ ಬಹನಸಿ ಮೊರೆ ಗಳಲ್ಲಿ ಸಿರೋಸ್ ಷಹನು ಒಳ್ಳೆ ಪಂಡಿತನೆಂದು ಪ್ರತಿಪಡೆದಿದನು. ಅವನ ತರ; ವಾಯ ೩೨೦ಥಾ ಹೆಸರುವಾಸಿಯು ೬ನನ ನುರಿಮಗನಾದ ಈ ಮೊಹಮದ್ ಷರ ನಿಗೆ ಬಂತು, ಇದು ಗವಾನನಿಂದಲೇ ಆಯಿತೇ ಹೊರತು ಮತ್ತೆ ಬೇರೆ ಇಲ್ಲ. ಈ ಬಹಮನಿ ರಾಜ ದಲ್ಲಿದ್ದ ದಖನಿ, ವಿದೇಶಿ ಎಂಬ ಎರಡು ಪಂಗಡಗ ಇಲ್ಲಿ ಮೊದಲನೆಯದಕ್ಕೆ ಮುಖಂಡನಾಗಿ ತಾನು ನಸೀರನಾಗಬೇಕೆಂದು ವಿಶೇಷವಾದ ಗಲಭೆಯನ್ನು ನಡಿಸುತಿದ್ದ ಖಾಜಾಜಿರ್ಹಾತರಖನ ನಡತೆಯು ಬಹಳ ಅನುಮಾನಾ ಪ್ರದವಾಗಿತ್ತು, ವಕೀಲನಾಗಿ ಮಂತ್ರಾಲೋಚನೆ ಸಭೆಗೆ ಸೇರಿದ ಇವನನ್ನು ಉಪಾಯವಾಗಿ ಕೊಲ್ಲಿಸುವುದಕ್ಕೆ ದೊರೆಯ ತಾಯಿ ಅಂಗೀಕಾರ ಮಾಡಿದ ಪ್ರಕಾರ ನಿಸಾಮುಲ್‌ ಮುಖ್ಯನು ಇವನ ಪ್ರಾಣವನ್ನು ತೆಗೆಯಿಸಿದನು. ರಾಣಿಯು ಖಾಜಾ ಜಿರ್ಹಾ ಎಂಬ ಬಿರುದನ್ನು ಮಂತ್ರಿಯಾದ ಗವಾನನಿಗೆ ಕೊಟ್ಟಳು. ಈ ಮೂಲಕ ವಿದೇಶೀಯರ ಪಕ್ಷ ಬಲವಾಯಿತು. ಯುಧ ದಲ್ಲಿ ಒಳ್ಳೆ ಪರಾಕ್ರಮಿ, ಸಿದ್ದಾ- ನಂತ ರಲ್ಲಿ ಒಳ್ಳೆ ಪಂಡಿತ, ನಡತೆಯಲ್ಲಿ ಪರಮಸಾಧು, ರಾಜಕೀಯ ವಿಚಾರದಲ್ಲಿ ನಿಮ. ಹೀಗೆಂದು ಗವಾನನಿಗೆ ಖ್ಯಾತಿಬಂತು. ೪ ನೆಯ ಅಧ್ಯಾಯ. ಆಡಳಿತಗಳೆಲ್ಲಾ ಸುಮಾರಾಗಿ ಸಮಾಧಾನ ಸ್ಥಿತಿಗೆ ಬರುತಿರಲಾಗಿ, ಕೊಂಕಣ ದೇಶದಲ್ಲಿ ಗಲಾಟೆ ಹೆಚ್ಚಾಯಿತು. ಆ ದೇಶದ ದೊರೆಯು ಹೆಚ್ಚಾಗಿ ಹಡಗುಗಳ ನ್ನಿಟ್ಟು ಸಮುದ್ರದ ಮೇಲೆ ಹೋಗತಕ್ಷ ಜಹಜುಗಳನ್ನು ಹೊಡೆಯಿಸಿ ಲೂಟಿಮಾಡಿ ಸುತ್ತಾ ಇದ್ದನು. ಅವನು ಪಶ್ಚಿಮಗಟ್ಟದ ಕಣಿವೆ ಕೆಳಗಿನಿಂದ ಮೇಲ್ಸೀಮೆಗೆ ಬರಲು ಇದ್ದ ಸರ್ವತದ ಸಂದುಗಳನ್ನೆಲ್ಲಾ ಬಿಮಾಡಿ ಯಾರೂ ಬರದಂತೆ ತಡೆ ಮಾಡಿ ಬಿಟ್ಟನು. ಈ ತಾವ:'ಯನ್ನು ಪ್ರಬಲರಾದ ಬಹಮಸಿ ರಾಜ್ಯದವರು ನೋಡಿಕೊಂಡು ಸುಮ್ಮನಿರಲು ಆದೀತೆ ? ಮತ್ತು ಹಿಂದಕ್ಕೆ ಕರಕೇರಾಜನೂ ೧೬