ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯುಕ್ತ ಸಂಪತ್ಯ- ಮಹಮದ್ ಗವಾನನ ಚರಿತ್ರೆ. ( ಕರ್ಣಾಟಕ ಸಾಹಿತ್ಯ ಕೂತುಕೊಳ್ಳುತಿದ್ದರು. ಉಳಿದವರೆಲ್ಲಾ ನಿಂತುಕೊಳ್ಳುತಿದ್ದರು. ಜನರು ತಮ್ಮ ಅರ್ಜಿಗಳನ್ನು ಸ್ವತಃ ತಂದು ದರಬಾರಿನಲ್ಲಿ ಕೊಡುತಿದ್ದರು. ಅವರ ವಿಚಾರಣೆ ಯಾಗುತಿತ್ತು. ಆದರೆ ಅರ್ಜಿ ತೆಗೆದುಕೊಂಡು ದೊರೆಯ ಸವಿಾಪಕ್ಕೆ ಹೋಗತಕ್ಕ ಜನರನ್ನು ಅಂಗಶೋಧನೆ ಮಾಡಿ ಅವರಲ್ಲಿದ್ದ ಆಯುಧಗಳನ್ನು ಪಹರೇದವರು ತೆಗೆದುಕೊಂಡು ಆ ಜನರನ್ನು ಒಳಕ್ಕೆ ಬಿಡುತಿದ್ದರು. ಸತ್ಕಾರಿ ವಿಷಯವೆಲ್ಲಾ ಬಹಿರಂಗವಾಗಿ ದರಬಾರಿನಲ್ಲಿ ವಿಚಾರಣೆಯಾದ ಕೂಡಲೆ ಫೈಸಲಾಗುತಿತ್ತು. ಮದುವೆ.– ದೊರೆಯ ಮಕ್ಕಳನ್ನು ದೊರೆಗಳಲ್ಲಿಯೂ ಮತಸಂಬಂಧದ ಜನರಲ್ಲಿಯೂ ಕೊಟ್ಟು ತಂದು ಮಾಡುತಿದ್ದರು. ಸಾಧಾರಣ ಜನರಲ್ಲಿ ನಂಟತನ ಮಾಡುತಿರಲಿಲ್ಲ. ಈ ದೊರೆಗಳು ಹಿಂದೂ ರಾಜಪುತ್ರಿಯರನ್ನು ಮದುವೆಯಾಗು ತ್ರಿವರು. ದೊರೆಗಳು - ಎಲ್ಲರೂ ಅಕ್ಷರಸ್ತರು, ಫಿರೋಸ್ ನಹನು ಹುಡುಗರಿಗೆ. ಪಾಠವನ್ನು ಸಹ ಹೇಳಿಕೊಡುತ್ತಿದ್ದನು. ಪಂಡಿತರಾದವರಿಗೆ ಪ್ರೋತ್ಸಾಹ ವಿಶೇಷ ವಾಗಿತ್ತು ದೊರೆಯ ಅಂಗರಕ್ಷಣೆಗಾಗಿ ನಾಲ್ಕು ಸಾವಿರ ಕುದುರೆ ಯಾವಾಗಲೂ ಸಿದ್ದವಾಗಿರುತಿತ್ತು. ದೊರೆಯ ಆಯುಧಶಾಲೆಯನ್ನು ನಿರಂತರವಾಗಿ ಇನ್ನೂರು ಜನ ಸಿಲೇವಾರರು ಕಾದುಕೊಂಡಿರುತಿದ್ದರು. ಒಂದು ಸಾವಿರ ಜನ ಅರಮನೆಯಲ್ಲಿ ಪಹರೆ ಕೊಡುತಿದ್ದರು. ಒಂದೊಂದು ತುಕಡಿಯವರು ಇಪ್ಪತ್ತುನಾಲ್ಕುಗಂಟೆ ಪಹರೆ ಕೊಡುತ್ತಿದ್ದರು. ತರುವಾಯ ಬದಲಾಯಿಸಿ ಕೊಳ್ಳುತಿದ್ದರು. ಬಿರುದುಗಳು.- ಈ ದೊರೆಗಳು ಯೋಗ್ಯರಾದವರಿಗೆ ಬಿಲ್ಲತ್ತುಗಳನ್ನೂ ಬಿರು ಮಗಳನ್ನೂ ಕೊಡುತಿದ್ದರು. “ ಬಾಜಾಜಿರ್ಹಾ” ಎಂಬುವುದೇ ದೊಡ್ಡ ಬಿರುದು. ಇದನ್ನು ಮಹಮೂದ್ ಗವಾನನಿಗೆ ಕೊಟ್ಟಿದ್ದರು. ದೊಡ್ಡ ಅಧಿಕಾರಿಗಳು,-" ವಕೀಲಿಸಲ್ತನತ್ " ಎಂಬ ಅಧಿಕಾರಿ ಇದ್ದನು. ಇವನು ದೊರೆಯಿಲ್ಲದ ವೇಳೆಯಲ್ಲಿ ಹುಕ್ಕುಂಗಳನ್ನು ಕೊಡುತಿದ್ದನು “ ವಸೀರೆಕುಲ್" ಎಂಬ ಒಬ್ಬ ಅಧಿಕಾರಿ ಇದ್ದನು. ಇವನು ಅರಮನೆಯ ವಿಚಾರ ವನ್ನು ನೋಡಿಕೊಳ್ಳುತಿದ್ದನು. ಕೊತ್ವಾಲನೆಂಬ ಅಧಿಕಾರಿಯು ಸಾಧಾರಣವಾದ ಅಪರಾಧಗಳನ್ನು ಮಾಡಿದವರಿಗೆ ಸಾಧಾರಣವಾದ ಶಿಕ್ಷೆಯನ್ನು ಕೊಡುತಿದ್ದನು. ನ್ಯಾಯವಿಮರ್ಶೆ ಮಾಡಲು ಖಾಸಿ ಎಂಬ ಒಬ್ಬ ದೊಡ್ಡ ಅಧಿಕಾರಿ ಇದ್ದನು. ವಿದ್ಯಾಭ್ಯಾಸ.– ಹಸನಾಬಾದು ಎಂಬುವುದು ಹಳೇರಾಜಧಾನಿಯಾಗಿತ್ತು ತರುವಾಯ ಬೀದರನ್ನು ರಾಜಧಾನಿ ಮಾಡಿಕೊಂಡರು. ಈ ಪಟ್ಟಣವನ್ನು ಬಹಳ ಚೆನ್ನಾಗಿ ಕಟ್ಟಿಸಿದರು. ಈ ದೊರೆಗಳು ಜನರ ವಿದ್ಯಾಭ್ಯಾಸಕ್ಕೆ ವಿಶೇಷವಾಗಿ ಗಮನಕೊಟ್ಟರು. ಪ್ರತಿಗ್ರಾಮದಲ್ಲಿಯೂ ಒಂದು ಮಸೀತಿ ಒಂದು ವಿದ್ಯಾಶಾಲೆ ಇರುತಿದ್ದವು. ಈ ಮಠಗಳಲ್ಲಿ ಅರಬ್ಬಿ, ಪಾರ್ಷಿ ಈ ಭಾಷೆಯನ್ನು ಕಲಿಸುತ್ತಿದ್ದರು. ರ್ಸ ೧೩೯೭ ರಲ್ಲಿ ಎಲ್ಲಾ ಕಡೆಯಲ್ಲಿಯೂ ದೊಡ್ಡದಾಗಿ ವೀರಕ್ಷಾಮ ಬಂತು. ಅನೇಕ ಜನ ಸತ್ತು ಹೋದರು. ಅನೇಕ ಮಕ್ಕಳು ತಬ್ಬಲಿಗಳಾದವು. ಈ ದೊರೆಗಳು ೨೦