ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ | ಮಹಮದ್ ಗವಾನನ ಚರಿತ್ರೆ. [ ಜನನ ೧೯೧. - - ಗುಲ್ಬರ್ಗ, ಬೀದರು, ಎಲಿಚಪೂರ್, ದೌಲತ್ತಾಬಾದ್ ಮೊದಲಾದ ಪಟ್ಟಣ ಗಳಲ್ಲಿ ಧರ್ಮಕ್ಕೆ ಪಾಠಶಾಲೆಗಳನ್ನೂ ಅನಾಥಾಲಯಗಳನ್ನೂ ಏರ್ಪಡಿಸಿದರು. ವಿದ್ಯಾವ್ಯಾಸಂಗಕ್ಕೆ ಈ ದೊರೆಗಳು ಹೆಚ್ಚಾಗಿ ಪ್ರೋತ್ಸಾಹವನ್ನು ಕೊಟ್ಟರು. ಕಟ್ಟಡಗಳು- ಈ ದೊರೆಗಳು ಭಾರಿಯಾದ ಕಟ್ಟಡಗಳು ಯಾವುದನ್ನೂ ಕಟ್ಟಿಸಲಿಲ್ಲ. ಬೀದರ್ ಪಟ್ಟಣದಲ್ಲಿ ದೊಡ್ಡದಾದ ವೈದ್ಯಶಾಲೆ ಇತ್ತು, ಇದರಲ್ಲಿ ಔಷಧ ವನ್ನು ಕೊಡುತ್ತಿದ್ದರು. ಅಲ್ಲಿಯೇ ಇದ್ದು ಗುಣಮಾಡಿಕೊಳ್ಳಲು ಇಷ್ಟ ಉಳ್ಳ ರೋಗಿ ಗಳಿಗೆ ಅಲ್ಲಿಯೇ ಅನ್ನ ಹಾಕಿ ಬಟ್ಟೆ ಸಹ ಕೊಡುತ್ತಿದ್ದರು. ಅ೦ಚೆಗಳು, ರಸ್ತೆಗಳು, ಛತ್ರಗಳು ಇರಲಿಲ್ಲ. ಅವರು ಬೆಟ್ಟಗಳಮೇಲೆ ಹಲವು ಕೋಟೆಗಳನ್ನು ಕಟ್ಟಿಸಿದರು. ಇತರ ಏರ್ಪಾಡು- ಪೋಲೀಸಿನ ಜವಾನರನ್ನು ಏರ್ಪಡಿಸಿದರು. ದಿಂದಲೂ ರಾಜ್ಯಭಾರ ಕ್ರಮದಲ್ಲಿದ್ದ ಹಳೇ ಏರ್ಪಾಡುಗಳನ್ನು ಇಟ್ಟುಕೊಂಡರು. ಅದರಮೇಲೆ ಹೊಸ ಏರ್ಪಾಡುಗಳನ್ನು ಮಾಡಿದರು. ಸದ್ವಾರದ ಉದ್ಯೋಗದಲ್ಲಿ ಬ್ರಾಹ್ಮಣರು ವಿಶೇಷವಾಗಿದ್ದರು, ಹಿಂದುಗಳ ಮೇಲೆ ಜೆಸಿಯಾ ಮೊದಲಾದ ಯಾವ ತಲೆಕಂದಾಯವನ್ನೂ ಹಾಕಿರಲಿಲ್ಲ. ಮಕ್ಕಳು, ಹೆಂಗಸರು, ಮುದುಕರು, ಅ೦ಗ ಹೀನರೂ, ಇವರುಗಳಿಗೆ ಯಾವ ಹಿಂಸೆಯನ್ನೂ ಮಾಡಕೂಡದೆಂದು ತಾವು ತಮ್ಮ ರಾಜ್ಯದಲ್ಲಿ ಅಪ್ಪಣೆ ಮಾಡಿದ್ದೂ ಅಲ್ಲದೆ ಇತರ ದೇಶಗಳಲ್ಲಿಯೂ ಕೂಡ ಇಂಥಾ ಕೆಟ್ಟ ಕೃತ್ಯಗಳನ್ನು ನಿಲ್ಲಿಸಬೇಕೆಂದು ಇತರ ದೊರೆಗಳೊಡನೆ ಕರಾರು ಮಾಡಿಕೊಂಡರು. ಸೇನೆ- ಇವರಲ್ಲಿ ಐವತ್ತು ಸಾವಿರ ಸೇನೆ ತಯಾರಾಗಿತ್ತು. ಎರಡು ಸಾವಿರ ಆನೆಗಳನ್ನು ಇಟ್ಟಿದ್ದರು. ವಿಜಯನಗರದ ದೊರೆಗಳು ತಮ್ಮ ಯುದ್ಧ ಗಳಲ್ಲಿ ಫಿರಂಗಿಗಳನ್ನು ಉಪಯೋಗಿಸುತ್ತಿದ್ದರು. ಇದನ್ನು ನೋಡಿ ಬಹಮನಿ ದೊರೆಗಳೂ ಫಿರಂಗಿಗಳನ್ನು ತಯಾರಾಡಿಸಿ ಉಪಯೋಗಿಸಲು ಮೊದಲು ಮಾಡಿ ದರು. ತಾವೇ ಮದ್ದನ್ನು ತಯಾರಾಡಿಸುತ್ತಿದ್ದರು. ಇವರ ಸೇನೆಯಲ್ಲಿ ತುರುಕರೂ ಫಾರ್ಷಿ ಜನರೂ ಇರುತಿದ್ದರು. ಫಿರಂಗಿ ಹಾರಿಸುವ ಗೋಲಂದಾಸ್ ಕೆಲಸಕ್ಕೆ ರೋರ್ಮ ಜನರನ್ನು ಇರಿಸಿಕೊಂಡಿದ್ದರಂತೆ. ಇವರ ರಾಜ್ಯದಲ್ಲಿ ಹಿಂದುಗಳ ಸಂಖ್ಯೆಯೇ ಬಹಳವಾಗಿತ್ತು, ಅದಕ್ಕೆ ಕಡವೆ ಯಾಗಿ ದಖನಿ ಮುಸಲ್ಮಾನರು, ಅದಕ್ಕಿಂತಲೂ ಕಡಿಮೆಯಾಗಿ ಅನ್ಯದೇಶೀಯರಾದ ಮುಸಲ್ಮಾನರು ಇವರು. ಜನರು ವಿದ್ಯಾ ವ್ಯಾಸಂಗ ಮಾಡುತಿದ್ದರು, ವಿದ್ಯಾ ವಂತರು ಯಾರಾದರೂ ಸರಿಯೆ, ಅವರಿಗೆ ಗೌರವವಿತ್ತು, ದೊಡ್ಡ ದೊಡ್ಡ ಅಂಗಡಿಗಳಿದ್ದವು, ವ್ಯಾಪಾರ ಚೆನ್ನಾಗಿ ನಡೆಯುತಿತ್ತು. ದೊಡ್ಡ ಅಧಿಕಾರಿ ಗಳೆಲ್ಲಾ ವ್ಯಾಪಾರ ಮಾಡುತಿದ್ದರು, ಇದು ಅವಮಾನವೆಂದು ಭಾವಿಸಿರಲಿಲ್ಲ. ಜನರಲ್ಲಿ ಲಕ್ಷಣವಾದ ರೇಷ್ಮೆಉಡುಪು ವಾಡಿಕೆಯಲ್ಲಿತ್ತು, ಅನೂಚಾನವಾಗಿ ಬಂದ ಮನೆತನಸ್ತರು ಇರಲಿಲ್ಲ. ಜನರು ತಂತಮ್ಮ ಯೋಗ್ಯತೆ ಇದ್ದ ಹಾಗೆ ಮುಂದಕ್ಕೆ ಬರುತಿದ್ದರು, ಯೋಗ್ಯತಾಪಕ್ಷಪಾತವೇ ಮುಖ್ಯವಾಗಿತ್ತು. (ಸಶೇಷ) ೨