ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಯ: ಸಾ! ಪ್ರಸ್ತ.. ಕವಿತಾವರ್ಧನ. [ಕರ್ಣಾಟಕ ಸಾಹಿತ್ಯ • - ಯುವಷ್ಟೇ, ಅಥವಾ ಒಂದಿಷ್ಟು ಹೆಚ್ಚು ಉಪಯೋಗವಿರಬಹುದಲ್ಲದೆ ನಾವು ಆಶಿಸು ವಷ್ಟು, ಲಾಭವಿಲ್ಲ. - ದೀರ್ಘಕಾವ್ಯಗಳನ್ನು ಸಾದ್ಯಂತವಾಗಿ ರಸಾಲಂಕಾರಗಳಿಂದ ತುಂಬುವುದು ಅಸಾಧ್ಯ. ತುಂಬಿದರೂ ಜುಗುಪ್ಪಾ ವಹವಾಗುವುದರಿಂದ, ಕಾವ್ಯಗಳು ಸಂಕ್ಷಿಪ್ತ ವಾಗಿರಬೇಕೆಂದು ಹಲವು ಪಾಶ್ಚಾತ್ಯರ ಮತವಿದೆ. ಒಂದು ಕಥೆಯಲ್ಲಿ ಕೆಲವು ಭಾಗಗಳು ಅನುರಂಜಕವಾಗಿರುವುವು, ಇನ್ನೂ ಕೆಲವು ರಸವಿಹೀನವಾಗಿರಬಹುದು. ನಾಟಕಗಳಲ್ಲಿ ಕೆಲವು ಸಂಭಾಷಣಗಳು ಗವ್ಯಾತ್ಮಕವಾಗಿ ಕೆಲವು ಪದ್ಯಾತ್ಮಕವಾಗಿ ರುತ್ತನೆ. ಚಂಪೂಕಾವ್ಯಗಳನ್ನು ರಚಿಸಲಿಕ್ಕೆ ಮೊತ್ತ ಮೊದಲು ಇದೇ ಕಾರಣವಾಗಿರ ಬಹುದಿತ್ತು. ಈಗ ಉಳಿದಿರುವ ಕಾವ್ಯಗಳಲ್ಲಿ ಗದ್ಯಾಂಶಗಳಲ್ಲಿಯೂ ರಸಾಲಂಕಾರ ಗಳು ಶೋಭಿಸಬಹುದು. ಪದ್ಯಗಳೆಲ್ಲವೂ ರಸಭರಿತವೆನ್ನಲಾಗದು. ಶೂರರಾದ ರವೀಂದ್ರನಾಥಠಾಗೂರ, ಶ್ರೀಮತಿ ಸರೋಜಿನೀ ನಾಯುಡು ಮುಂತಾದವರ ಕವಿತೆ ಗಳು ಸಂಕ್ಷಿಪ್ತವಾಗಿಯೇ ಇವೆ. ಕವಿಗಳಿಗೆ ಸ್ವತಂತ್ರತೆಯಿರಬೇಕು, ಪುರಾಣದ ಕಥೆಗಳನ್ನು ಅನುವಾದಿಸಿ ಹೇಳು ವುದು ಈಗ ಆವಶ್ಯಕವಲ್ಲ. ಅವುಗಳನ್ನು ಪರಿವರ್ತಿಸಿ, ಅವುಗಳಲ್ಲಿ ಹೊಸ ಪ್ರಸಂಗ ಗಳನ್ನು ಸೇರಿಸಿ, ತಮ್ಮ ನೂತನವುತಿಗೆ ತೋಚಿದಂತೆ ಹೇಳಿದರೆ ಹೇಳಲಿಕ್ಕೆ ಅವಕಾಶವಿದೆ. ಬ್ರಾಹ್ಮಣರೂ ಜೈನರೂ ಇತಿಹಾಸಗಳನ್ನು ತಮಗೆ ಬೇಕಾ ದಂತೆ ಹವಣಿಸಿಕೊಳ್ಳಲಿಲ್ಲವೇ? ಹದಿನೆಂಟು ಅ೦ಗಗಳನ್ನು ವರ್ಣಿಸಬೇಕೆಂಬ ವಿಧಿಯನ್ನು ನಿರಸಿಸಬೇಕು. ಅಭಿನವವಾದಿವಿದ್ಯಾನಂದಸಂಕಲಿತ ಕಾವಸಾರದಲ್ಲಿ ಸುಮಾರು ಐವತ್ತು ವರ್ಣನೆಗಳಿವೆ. ಪ್ರಪಂಚದಲ್ಲಿ ವರ್ಣನೀಯ ಪದಾರ್ಥಗಳಿಗೂ ಛಾನಗಳಿಗೂ ಮಿತಿಯಿದೆಯೇ? ಭಾವಗಳು ಮುಖದಲ್ಲಿಯೂ ಚರಿತದಲ್ಲಿಯೂ ಹೇಗೆ ಕಾಣಿಸಿಕೊಳ್ಳುತ್ತವೆಂದು ಕನ್ನಡ ಕವಿಗಳು ವರ್ಣಿಸದಿರುವದಿಲ್ಲ. ಕೆಳಗೆ ಅನುವಾದಿಸಿ ಬರೆದ ಕೊಲ್ಲಿನ್ಸ್ ಕವಿಯ ಕೃತಿಯನ್ನು ಓದಿದರೆ ವರ್ಣನೆಗೆ ಎಷ್ಟು ವಿಷಯಗಳು ದೊರೆಯಬಹುದು, ಅವುಗಳನ್ನು ಎಷ್ಟು ವಿಧವಾಗಿ ವರ್ಣಿಸಬಹುದು ಎಂಬುದು ವಿಶದವಾದೀತು. ಭಾವಗಣ. ಕೃತಯುಗದಿಂದುದಿನ ಸ೦ಗೀತ ದಧಿದೇವಿ | ಅತಿಪಟುತೆಯನು ತೋರಿ ಹಾಡುತಿರಲು | ಕುತುಕಪೂರಿತಭಾವಮೂರ್ತಿಗಳು ಬಂದಲ್ಲಿ | ಧೃತಿಹೀನವಾದುವು ಶ್ರುತಿಸುತಿರಲು {{ ೧ | ಗೀತದಾನೇಶದಿಂದಾದ ಪರವಶತೆಯನು | ರೀತಿ ರೀತಿಯಲೊಡನೆ ಕಾಣಿಸಿದುವು !