ಪರಿಷತೃತ್ರಿಕೆ..! ಕವಿತಾವರ್ಧನ. 1 ಜನನ ೧೯೧೯.
- ° = "
ವರುಷದೊಳಗೆಲ್ಲ ಬೇಸರದಿಂದ ದುಡಿದರೆಯು | ಅರಸನಾಗೀದಿನದಲೊಪ್ಪುತಿಹೆನು 11 ೧ 11, || ೨ || ಹಿರಿಯರಾರೀವಾಗ ಕಿರಿಯರವರಿಗೆ ಜೋಡು | ದೊರೆತವಿಖ್ಯಾತಿ ಅಖ್ಯಾತನಹುದು || ಪುರಜನರಭವನವೆ ನಗರಮನೆಯ ತೆರನಾಗಿ | ವರಣಪತ್ರದ ಪೆಟ್ಟಿ ಪಟ್ಟ ವಹುದು ಇಂದುವೃತಿಯಲ್ಲಿ ರಾಷ್ಟ್ರ ಸೇವೆಯನು ಮಾಡುವನು | ಮಂದಿಯರ ಧನಿಗಳಿಗೆ ಸಂಗಡಿಗನು ! ಕುಂದಿಸುರ್ಕಿದ ಕೈಯ ಕೆಂಚನೀಸಮಯದಲಿ | ಚಂದತುಡಿಗೆಯ ಚಲುವರೊಂದಿಗಿಹನು } ... | ಹೊನ್ನು ಹೋಲಕಲ್ಪಿಗಳ ಜಂಭಮಾಡುವರೊಡನೆ | ನನ್ನಸತ್ತೆಯನೀಗ ಕಾಣಿಸುವೆನು || ಚಿನ್ನ ಬಿನ್ನಾಣಗಳುನನಗಿಲ್ಲ ಸಾಧುಮತಿ | ಇನ್ನೂ ಪ್ರಬಲವೆಂದು ತೋರಿಸುವೆನು !! ೪ ! ಪರಿಹರಿಸಲನ್ಯಾಯ ಕಷ್ಟಗಳು ನಿಂತಿರಲು | ಹರಸಿಸದ್ದರ್ಮವನು ಪಾಲಿಸುವೆನು || ಹರಕುಬಟ್ಟೆಯನುಟ್ಟು ತೇಪೆಯಂಗಿಯತೊಟ್ಟು | ನರಗನರನೆಂದು ಸಾಧಿಸುವೆನು !! 3 | ಕವಿರಾಜರು ರಮಣೀಯತೆಯನ್ನು ಕಾಣದ ಸ್ಥಳವೆಲ್ಲಿ? ಅವರು ತಾವು ನೋಡಿದುದನ್ನು ವರ್ಣಿಸಿದರೆ ಸಾಕು. ಸಾಮಯಿಕವರ್ಣನೆಗಳಿಗೆ ಈಗಿನ ಶಿಕ್ಷಿತ ಜನರು ಮೆಚ್ಚುವುದಿಲ್ಲ. ಪೂರ್ವ ಕವಿಗಳು ಉತ್ಸಾಹದಿಂದ ರಚಿಸಿದ ಕೆಲವು ವರ್ಣನೆ ಗಳು ಈಗಿನವರಿಗೆ ಬೀಭತ್ಯವಾಗಿವೆ. ಪೂರ್ವಪದ್ದತಿಗನುಸಾರವಾಗಿ ಏಕಪ್ರಕಾರತೆ ಯನ್ನು ಆಚರಿಸುವುದರಿಂದ ಓದುವವರಿಗೆ ಬೇಸರವಾಗುತ್ತದೆ. ಭಾವನೆಯ ಬಿಚ್ಚಿಬಿಡು, ನೋಡಿದುದನೋಡಿದರೆ ಆವ ರಮಣೀಯತೆಗೆ ತಪ್ಪುವುದು ನಿಯತಜರೆ? ಮಧುಮಾಸದಾನಂದ ಹೂಗಳೊಡನಳಿಯುವುದು, ವಿಧುಕಿರಣಗಳ ಸೊಬಗು ಮಬ್ಬಿನೊಳಗಡಗುವುದು. ನೋಡಿದುದ ನೋಡಿದರೆ ಮೋಹಿಸುವ ಕಂಣೆಲ್ಲಿ ? ಬಾಡದಂತಹಸದಪುದಂತ ಮೌಕ್ತಿಕವೆಲ್ಲಿ ? ಕೇಳಿದುದ ಕೇಳಿದರೆ ಸವಿಮಾತಿಗಿಂಪೆಲ್ಲಿ? ೨೭