ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಷತ್ರಿಕೆ. ಕನ್ನಡ ಶಬ್ದದ ವ್ಯುತ್ಪತ್ತಿ. ಜನನ: ೧೯೧೯. • • • • - - - - - - - - - - -..-. ೨, ಕರುನಡ (.... ಕನ್ನಡ) ಕರ್ಣಾಟ. ಕನ್ನಡಿಗರ ನೆರೆಹೊರೆಯಲ್ಲಿರುವ ತಮಿಳರು ಈ ನಾಡಿಗೂ ನುಡಿಗೂ ಹೆಸ ರಿಟ್ಟಿದ್ದ ಪಕ್ಷದಲ್ಲಿ, ಅವರು ಕೀಲ್ನಾಡಿನವರಾದುದರಿಂದ ಮೇಲ್ಪಾಡನ್ನು ಕರುನಾಡು ಕರುನಡಂ ಎಂದು ಹೆಸರಿಟ್ಟಿರಬಹುದು. ಕರು ಎಂದರೆ ತಮಿಳಲ್ಲಿ ಬೆಟ್ಟ ವೆಂದರ್ಥ, ತಮಿಳನಾಡಿನ ಸುತ್ತಲಿದ್ದ ಹನ್ನೆರಡು ನಾಡುಗಳ ಹೆಸರುಗಳು :- ಸಿ೦ಗಳಂ, ಸಬಿಂದೀವು', ಕೊಲ್ಲಂ, ಕೂಪಂ, ಕೊಂಕಣಂ, ತುಳುವ, ಕುಡಗಂ ಕರುನಡಂ, ಕೂಡಂ, ನಡುಗು', ತೆಲುಂಗು, ಕಳಿಂಗಂ' ಎಂಬಿವು ತೊಲ್ಲಾಪ್ಪಿಯಂ ಶೋಲ್ಲಧಿಕಾರದ ೪೦೦-ನೆಯ ಸೂತ್ರದ ವೃತ್ತಿಯಲ್ಲಿ ಹೇಳಲ್ಪಟ್ಟಿರುವುವು. ನನ್ನೂಲ್ ೨೭೩-ನೆಯ ಸೂತ್ರದ ವೃತ್ತಿಯಲ್ಲಿ ತಮಿಳನಾಡಿನ ಸುತ್ತಲಿದ್ದ ಹದಿನೇಳು ನಾಡುಗ ಳೊಳಗೆ ಕನ್ನಡಂ ಎಂಬುದೊಂದೆಂದು ತಿಳಿಯಬರುವುದು, ಹೂಣಶಕ ೧೮೪Cರಲ್ಲಿ ಬರೆದ ಮುರುಗದಾಸರ-- ಪುಲವರ್ ಪುರಾಣದ ಕುಮಾರದೇವರ ಸರಿ ಚ್ಛೇದದಲ್ಲಿ ಕರುನಾಡದೇಯ ಮುಮಂ ಪುರಂದು' (-- ಕರ್ಣಾಟದೇಶವನಿತಂ ಪೊರೆದು) ಎಂದು ಹೇಳಿದೆ. ಹೀಗಿರುವುದರಿಂದ ಕನ್ನಡಶಬ್ದಕ್ಕೆ ಸರೇಫನಾಮವೇ ಮೊದಲೆಂದು ಹೇಳ ಬೇಕಾಗುವುದು ಎಂದರೆ ಕೇಶಿರಾಜ ಭಟ್ಟಾಕಳಂಕರಂತೆ ಸಂಸ್ಕೃತದ ಕರ್ಣಾಟ ಎಂಬ ಶಬ್ದವು ಕನ್ನಡವಾಯ್ತಿನ್ನಬೇಕು. ಹೀಗೆಂದರೆ ಕರ್ಣಾಟ ಶಬ್ದಕ್ಕೆ ಅರ್ಥ ವೇನು? ಕಾಕಿನಾಡದ ಪಾಠವೆಂಕಟನಾರಾಯಣ ಪಂಡಿತರು ಆಂಧ್ರಬಾಷಾ ತತ್ವ ಎಂಬ ಗ್ರಂಥದಲ್ಲಿ ಕರ್ಣ ಪರ್ವತ, + ಅಟ... ಭ್ರಮಣೇ ಎಂದು ವಿಂಗಡಿಸಿ ಕನ್ನಡಿಗರೆಂದರೆ ಕರ್ಣಾಟರೆಂದರೆ ಕಾಡುಜನರು ಎಂದು ವಾದಿಸಿರುವರು. ಕರ್ಣ ವೆಂಬ ಸಂಸ್ಕೃತಪದಕ್ಕೆ ಪರ್ವತವೆಂದು ಅರ್ಥವಿದ್ದಲ್ಲಿ ಇವರ ವುತ್ತತ್ತಿ ಸಮಂಜಸ ವಾಗುತ್ತಿತ್ತು. ಆದರೆ ಕರ್ಣಶಬ್ದಕ್ಕೆ ಸಂಸ್ಕೃತದಲ್ಲಿ ಈ ಅರ್ಥವಿರುವಂತೆ ಕಾಣು ವುದಿಲ್ಲವಾದುದರಿಂದ ಪಾಠಿಯವರ ವ್ಯುತ್ಪತ್ತಿಯನ್ನು ಬಿಡಬೇಕಾಗಿದೆ. ಹಾಗಾದರೆ ಕರ್ಣ ಶಬ್ದಕ್ಕೆ ನೌಕರ್ಣವೆಂದು ಅರ್ಥಮಾಡಿದರೆ ಬಾಧಕ ವೇನು? ಕರ್ಣರಾಫ್ ಕನ್ನರ ಎಂಬ ಅರಸರು ನೌಕರ್ಣಧಾರರಾದುದರಿಂದ ಈ ಹೆಸರು ಬಂದಿರಬಹುದು. ಕನ್ನರನಾದರದಿ೦ ಕುಜೆ ! ಪೊನ್ನ೦ ಮನನೊಸೆದು ತೈಲವಂ ಕುತೆ ರನ್ನ ೦ || ಮನ್ನಿಸಿ ಬಲ್ಲಾಳಂ ಕುಡೆ | ಜನ್ನ೦ ಕವಿಚಕ್ರವರ್ತಿನೆಸ ರ೦ ಪಡೆದ ೧ 1 (ಯಶೋ : 1. 21) ಎಂದು ಜನ್ನನು ಹೇಳಿಲ್ಲವೇ? ಹಾಗಾದರೆ ಕನ್ನಡಿಗರು ಪೂರ್ವಕಾಲದಲ್ಲಿ ೨೯