ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿಕ. ಕನ್ನಡಶಬ್ದದ ವ್ಯುತ್ಪತ್ತಿ. [ಜನವರಿ ೧೯೧೯. ಕನ್ನಡದ ನುಡಿಯೆಂದುಪೇಕ್ಷಿಸ | ಲಿನ್ನು ಹಿರಿಯರಿಗ೦ಜಿ ನುಡಿವೆನು | ಕನ್ನಡವೆ ದರ್ಪಣವದಲ್ಲದೆ ಭೇದವೇದಕ ?!! ಮುನ್ನ ಮುಪನಿಷದರ್ಥವನು ಸ೦ | ಪನ್ನ ಮತಿಗಳು ಪೇಳು ದನ ನಾಂ | ಕನ್ನಡಿಸಿದೆನು ಕೊರತೆಯಿರ್ದೊಡೆ ಮನ್ನಿಸುವುದೊಲಿದು ! (ಅನುಭವ-೪) ಸುಲಿದ ಬಾಳೆಯ ಹಣ್ಣಿನಂದದಿ || ಕಳೆದ ಸಿಗುರಿನ ಕಬ್ಬಿನಂದದಿ | ಯಳಿದ ಬಿಸುಪಿನ ಹಾಲಿನ೦ದದಿ ಸುಲಭವಾಗಿರ್ಸಾ ಲಲಿ ತವಹ ಕನ್ನಡದ ನುಡಿಯಲಿ | ತಿಳಿದು ತನ್ನೊಳು ತನ್ನ ಮೋಕ್ಷವ ! ಗಳಿಸಿಕೊಂಡರೆ ಸಾಲದೇ ಸ೦ಸ್ಕೃತದೊಳಿ ನೇನು? ! (ಅನುಭವ-೫) ಎಂದು ಹೇಳಿದನು. ಸಚ್ಚಿದಾನಂದನ ಜ್ಞಾನಸಿಂಧುವಿನಲ್ಲಿ.... ಮಾತು ಕನ್ನಡವೆ೦ದು ಸ೦ಸ್ಕೃತ | ಮಾತನರಿವವರಿದನು ಹಳಿವುದು ! ನೀತಿಯಲ್ಲವು ಮಾತುಗಳು ಮಾಣಿಕಗಳಿಟ್ಟ೦ತೆ || ಮಾತು ಬಹುಪರಿಯಾಗಿ ಕರೆವ ರು | ಪ್ರೀತಿಯಿ೦ದೊ೦ದಾದ ವಸ್ತುವ | ಮಾತು ಭಿನ್ನಿ ಸಲೇನು ವಸ್ತುವಿನನುಭವವೆ ಮುಖ್ಯ ! ಕನ್ನಡವು ಕನ್ನಡಿಯ ತೆ ರದೊಳ | ಗಿನ್ನು ಭಾವನ ತೋರ್ಪುದಿದು ಮೇಣ್ | ಕನ್ನಡವು ವ್ಯಾಕರಣ ಲಕ್ಷಣ ಶಿಕ್ಷಿತನದಾಗೆ || ಪೂನ್ನಿನಂದದಿ ಬೆಳಗುವುದು ಕೇಜ್‌ ! ಚಿನ್ನ ಮೆಲ್ಲರಿಗೇನು ಸುಲಭವೆ | ತನ್ನ ಭಾವನ ಪಾವರರ್ಗೆಯು ತಿಳಿಸುವುದೆ ಭಾಷೆ 1: ಕನ್ನಡದ ನುಡಿಯಲ್ಲಿ ಹೇಳಿ ಹು | ದಿನ್ನು ಹಾಗೀಗೆನಲು ಸಲ್ಲದು; ತನ್ನ ಮುಂದೆಯೆ ಎಡೆಯ ಬಡಿಸಿಟ್ಟ ೦ತೆಯನುಭೂತಿ | ತನ್ನ ತಿಳಿಯಲು ತನ್ನ ನರಿಯಲು !