ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ. ಮಂಗಲಗ್ರಹ. (ಜನವರಿ ೧೯೧೯.

ವುದು, ಗ್ರಹದ ತಾಪಾನುಗುಣವಾಗಿಯೇ ವೃಷ್ಟಿಯ ನ್ಯೂನಾಧಿಕಭಾವಗಳೂ ಸಂಭವಿಸುವುವು, ಭೂಮಿಯಲ್ಲಿ ಆದಷ್ಟು ವೃಷ್ಟಿ ಯು ಮಂಗಲ ಗ್ರಹದಲ್ಲಿ ಉಂಟಾಗ ಲಾರದು. ಮಳೆಇಲ್ಲದಿದ್ದರೆ ಬೆಳೆಯಾಗಲಾರದು. ಬೆಳೆಯಾಗದಿದ್ದರೆ ಅಲ್ಲಿಯ ಜನರು ಬದುಕುವುದು ಕಷ್ಟ, ಆದುದರಿಂದ ಅಲ್ಲಿಯ ಜನರು ಜಲಾಶಯಗಳ ಮೂಲಕ ಫೈರು ಪಚ್ಚೆಗಳನ್ನು ಬೆಳೆವರೆಂದು ವೈಜ್ಞಾನಿಕರು ಹೇಳುವರು, ಮತ್ತು ಮಂಗಲ ಗ್ರಹದಲ್ಲಿ ಅತ್ಯಂತವಿಸ್ಸತವಾದ ಕಾಲುವೆಗಳು ಕಂಡು ಬರುವುವೆಂತಲೂ ಅವು ಮೊದಲಲ್ಲಿರಲಿಲ್ಲವೆಂತಲೂ ಈಚೆಗೆ ಅಲ್ಲಿಯ ಜನರಿಂದ ಬಹುಕೌಶಲದಿಂದ ನಿರ್ಮಿತವಾಗಿರಬೇಕೆಂತಲೂ ಹೇಳವರು. - ಮಂಗಲಗ್ರಹದ ವಿಷುವದ್ರೇಖೆಯ ಸವಿಾಪದಲ್ಲಿ 60 ಅ೦ಶದ ಮಧ್ಯದಲ್ಲಿಯೇ ಆಕಾಲುವೆಗಳು ನಿರ್ಮಿತಗಳಾಗಿರುವುವು, ಅವನ್ನು ದೂರವೀಕ್ಷಣಯಂತ್ರದ ಸಹಾಯ ದಿಂದ ನೋಡಬಹುದು. ಅಂತಹವುಗಳು ಆ ಗ್ರಹದ ಸುತ್ತಲೂ ಇರುವುವು. ಆ ಕಾಲುವೆಗಳ ದೈರ್ತ್ಯವು 12,00೧ ಮೈಲಿಗಳಷ್ಟು ದೂರವೂ ಕೆಲವೆಡೆಗಳಲ್ಲಿ 50 ಮೈಲಿಗಳಷ್ಟು ಅಗಲವೂ ಕಂಡುಬರುವುವು, ಈ ವಿಷಯದಲ್ಲಿ ಅಮೆರಿಕಾದಲ್ಲಿರುವ ಲೋಕಲ್ ಆಬ್ಜರ್ ವೇಟರಿಯ ಪ್ರದರ್ಶಕರಾದ ಸರ್ ರಾಬರ್ಟ, ಎಲ್ ಎಲ್. ಡಿ., ಎಫ್. ಆರ್. ಎಸ್., ಎಂಬವರು ತಮ್ಮ ಜ್ಯೋತಿಷಗ್ರಂಥದಲ್ಲಿ ಅಂಕಿಸಿರುವರು. ಇದನ್ನು ನೋಡಿ ಅನೇಕವೈಜ್ಞಾನಿಕರು ಮಂಗಲಗ್ರಹವಾಸಿಗಳು ಇಂತಹ ಅದ್ಭುತವಾದ ಕಾಲುವೆಗಳನ್ನು ಹೇಗೆ ನಿರ್ಮಿಸಿದರು ಎಂದು ಆಶ್ಚರ ಪಡುತ್ತಿರುವರು. ಮತ್ತೆ ಕೆಲವರು ಗ್ರೀಷ್ಮಕಾಲದಲ್ಲಿ ಮೇರುಪಾರ್ಶ್ವದಲ್ಲಿರುವ ಹಿಮರಾಶಿಗಳು ಕರಗಿ ಹೆಚ್ಚಾಗಿ ಪ್ರವಹಿಸುವುದರಿಂದ ಕೃಷಿ ಮುಂತಾದುವುಗಳಿಗೆ ಬಹಳ ಪ್ರತಿಬಂಧಕ ವುಂಟಾಗುತ್ತಿರುವುದು. . ಆದಕಾರಣ ಅಲ್ಲಿಯ ಇಂಜನೀಯರುಗಳು ಬಹುನೈಪುಣ್ಯ ದಿಂದ ಇಂತಹ ಕಾಲುವೆಗಳನ್ನು ನಿರ್ಮಿಸಿ ತಮ್ಮ ಕೃಷಿಕಾರಗಳನ್ನು ಮಾಡಿ ಕೊಳ್ಳುವರು ಎಂದು ಹೇಳುವರು. - ಈ ಗ್ರಹವು ಸಣ್ಣದಾಗಿದ್ದರೂ ಅಲ್ಲಿಯ ಜೀವಿಗಳ ಸಂಖ್ಯೆಯು ಅತ್ಯಧಿಕವಾಗಿರು ವುದು. ಜನ ಸಂಖ್ಯೆಯು ಹೆಚ್ಚಿದಹಾಗೆಲ್ಲಾ ಅವರ ಜೀವನಯಾತ್ರೆಯು ಕಡಿಮೆ ಯಾಗುವುದು ಸಹಜ. ಅದಕ್ಕಾಗಿ ಅವರು ಪ್ರಾಣಸಣದಿಂದಲೂ, ಐಕಮತ್ಯ ದಿಂದಲೂ, ಕೆಲಸಮಾಡುವರು. ಅಲ್ಲಿಯ ಕಾಲುವೆಗಳು ಅವರ ಅದ್ಭು ತಬಲ, ಅದ್ಭುತಬುದ್ದಿ, ಅದ್ಭುತ ಶಕ್ತಿಗಳನ್ನು ವ್ಯಕ್ತಪಡಿಸುವುವು. ಅದನ್ನು ನೋಡಿ ನಮ್ಮ ಇಂಜನೀಯರುಗಳು ಆಶ್ಚರ ಪಡುತ್ತಿರುವರು. ಮೊದಲು ಮೊದಲು ನಂಗಲjಹದಲ್ಲಿ ಅತ್ಯಂತಸೂಕ್ಷ್ಮವಾದ ಒಂದು ರೇಖೆಯು ಕಂಡುಬಂದಿತು. ಬಳಿಕ ಎರಡು ತಿಂಗಳೊಳಗಾಗಿಯೇ ಸುಮಾರು 40 ಮೈಲಿಗಳಷ್ಟು ಅಗಲವೂ 6,000 ಸಾವಿರ ಮೈಲಿಗಳಷ್ಟು ಉದ್ದವೂ ಆದ ಒಂದು ಕಾಲುವೆಯು ಗೋಚರವಾಯಿತು. ಅಹಹ! ನಮ್ಮಿಂದ ಎರಡು ತಿಂಗ ಳೊಳಗಾಗಿ ಅಂತಹ ಕಾಲುವೆಯನ್ನು ಮಾಡಲು ಎಂದಿಗಾದರೂ ಸಾಧ್ಯವೇ? ೪೧