ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತಿ ಸಂ ಪುಷ್ಯ | ಕವಿಚರಿತ. ಕರ್ಣಾಟಕಸಾಹಿತ್ಯ +++++ ' .. .. .... .. ರಾಮಿದೇವಾಚಾರ್ಯ ಗುರುಪಂಡಿತಾಚಾರ್ಯ ಚೌಕಮಧ್ಯದಿ ನಿಂದ ಸಂಚವಣ್ಣಿಗೆ ಸಿದ್ದನಂಜೇಶ್ವರ” ಎಂದು ಚತುರಾಚಾರ್ಯರಿಗೆ ಸಮಾನನೆಂಬ ಭಾವದಿಂದ ಸ್ತುತಿ ಸಿದ್ದಾನೆ: “ಈತನಿಗೆ ಮುತ್ತಿನ ಕಂತೆಯ ಗುರುಸಿದ್ದನ೦ಜೇಶ ಎಂಬ ಹೆಸರೂ ಇದ್ದಂತೆ ತಿಳಿಯುತ್ತದೆ. ಅವನಿಗೆ ಅನೇಕಜನ » ಶಿಷ್ಯರು ಇದ್ದರೆಂದೂ ಅವನನ್ನು “ ಭೂಪತಿಪ್ರಚಯವಡಿಗೆಗಿ ಕಪ್ಪವ ತೆತ್ತು ಓಲೈಸಿದುದು” ಎಂದೂ ಕವಿ ಹೇಳು ತಾನೆ. ಗುರುರಾಜಚಾರಿತ್ರದಲ್ಲಿ ಬಸವಪೌರಾಣದ ಮಲ್ಲಣಾರ್ಯನಿಂದ ರಚಿತವಾದ ವೀರಶೈವಾಮೃತಪುರಾಣದಿಂದ (೧೫೩೦) ಕೆಲವು ವಿಷಯಗಳನ್ನು ಕಸಿ ಸಂಗ್ರಹಿಸಿ ದಂತೆ ಹೇಳುವುದರಿಂದ ಇವನು ೧೫೩೦ ರಿಂದ ಈಚೆಯವನು ಎಂಬುದು ಸ್ಪಷ್ಟ ವಾಗಿದೆ. ಸುಮಾರು ೧೬೦೦ ರಲ್ಲಿದ್ದ ಸಂಪಾದನೆಯ ಸಿದ್ದವೀರಾಚಾರ್ಯನ ಹೆಸ ರನ್ನು ರಾಘವಾಂಕಚಾರಿತ್ರದ ಅಂತ್ಯಭಾಗದಲ್ಲಿ ಹೇಳಿರುವುದರಿಂದ ಅವನ ಕಾಲಕ್ಕೂ ಈಚೆಯವನಾಗಿರಬೇಕು; ಸುಮಾರು ೧೬೫೦ ರಲ್ಲಿ ಇದ್ದಿರಬಹುದು. ಪೂರ್ವಕವಿಗಳಲ್ಲಿ ಹರಿದೇವ, ಕೆರೆಯ ಪದ್ಮರಸ, ರಾಘವಾಂಕ, ಪಾಲ್ಕುರಿಕೆ ಸೋಮೇಶ್ವರ, ಭೀಮಕವಿ, ಲಕ್ಕಣ್ಣ ದಂಡೇಶ, ಚಕ್ಕಣಾಚಾರ್ಯ, ಚಾಮರಸ, ಮಗ್ಗೆ ಯಾಚಾರ್ಯ, ಕಲ್ಲಮಠದಾಚಾರ್ಯ, ಸಿಂಗಿರಾಜ, ಬಸವಪೌರಾಣದ ಮಲ್ಲ ಣಾರ್ಯ ಇವರುಗಳನ್ನು ಸ್ಮರಿಸಿದ್ದಾನೆ. ಅಲ್ಲದೆ ಪದ್ದತಿಯ ಪ್ರಕಾರ ಬಾಣ, ಕಾಳಿ ದಾಸ, ಮಳಯರಾಜ, ಮಲುಹಣ, ಹಲಾಯುಧ, ಗುಜ್ಜರ, ಭೋಜ, ದಂಡಿ, ಮಯೂರ ಇವರುಗಳನ್ನೂ ಸ್ತುತಿಸಿದ್ದಾನೆ. ಇವನ ಗ್ರಂಥಗಳಲ್ಲಿ (೧) ರಾಘವಾಂಕ - ಇದು ವಾರ್ಧಕ ಷಟ್ರದಿಯಲ್ಲಿ ಬರೆದಿದೆ ; ಸಂಧಿ ೧೯, ಪದ್ಯ ೧೧, ಇದರಲ್ಲಿ ರಾಘವಾಂಕಕಸಿಯು (ಸು. ೧೧೬೫) ಚರಿತ್ರವು ಹೇಳಿದೆ. ಈ ಗ್ರಂಥರಚನೆಗೆ “ ಸುಶಾಂತಬಂಧುರಸಂಸ್ಕೃತಪ್ರಾಕೃತೋಭಯಕಸಿತ್ವಾಯಿಲರ ಶಿರೋಮಣಿಯೆನಿಸ ನಂದೀಶಕವಿಯ ಕೃಪೆಯಿಂ ಪ್ರಕಟವಂಮಾಡಿ ಸಿ೦ ", " ಕರ್ಣಾಟಕಕವಿತ್ವಕೋವಿದ ಪಂಚವಣ್ಣಿಗೆಯ ಓದ ನಂಜೇಶಾಂಘಿಕಮಲಮಧುಪ ರಾಚವಟ್ಟಿಯಾರಾಧನ ಕೃಪೆಯಿಂ ಗ್ರಂಥ ಪೂರ್ಣ ವಾಯಿತು” ಎಂಬ ಪದ್ಯಭಾಗಗಳಿಂದ ನಂದೀಶಕವಿಯ - ಈ ಸಿದ್ಧಭದ್ರೇಶ, ನಂಜಯ್ಯ, ಚೆನ್ನವೀರಯ್ಯ, ವಿಜಯಪುರದ ನಂಜಯ್ಯ, ಮುಖಬೋಳ ಸಿದ್ಧ ರಾಮಯ್ಯ, ಭೂಷಣದೊಣ್ಣೆಯ ಮತದ ಮುತ್ತಿನ ಕಂತೆಯಯ್ಯ, ಬಳಕೆಗೆ ಸಿದ್ದರಾಮಯ್ಯ, ಗುರು ನಂಜಯ್ಯ, ರಾಯಬಾಗಿದ ನಂಜಯ್ಯ, ಸೇಡುಬಳದ ನಂಜಯ, ಬಾದದ ನಂಜಯ್ಯ, ಗಟ್ಟದ ರಾಚನಟ್ಟ ಯನ್ನು ಗುನುಗೋಳದ ನಂಜಯ್ಯ, ಆನ್ನದಾನಯ್ಯ, ಕರ ಸುಲಭ ಕಲ್ಲಯ್ಯ, ಗು೦ಡಿಹಳ್ಳಿಯು ಚೆನ್ನ ಮುಲ್ಲಕಾರ್ಜುನದೇವ, ನನಗೆ ಐತೆ ರಾಚವಟ್ಟದಷ, ಜೈನಾಪುರದ ನ೦ಟಯ್ಯ, ಪ್ರಾಣದ ರಾಚವಟ್ಟಿಯ ದೇವ, ಸಂಜನಾಗೆ ನಿರೂಪಾಕ್ಷ, ಮುತ್ತಿನಕಂತೆ ಸಿದ್ದಮಲ್ಲಯ್ಯ, ಗಿಡ್ಡನುನ ಕಂತೆಯಯ್ಯ, ಸೊನ್ನಳಿ: ಪ್ರರದ 'ಅನ್ನದಾನಯ್ಯ, ಇವರೆಲ್ಲರ ಕವಿಯು ಸಮಕಾಒಗವರಾಗಿರಬೇಕು. • .. .. .. .. -.- -.- ... - * . ೪ಳಿ