ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಪುಷ್ಯ, ಕರ್ಣಾಟಕ ಭಾಷಾಭಿವೃದ್ಧಿ ವಿಚಾರ. ಕರ್ಣಾಟಕ ಸಾಹಿತ್ಯ - hun °i * * * * ಯೇ ಇರುವುದು, ಹಾಗಿದ್ದರೂ ಈ ಭಾಷೆಗಳು ಅಭಿವೃದ್ಧಿಯಸ್ಥಿತಿಯಲ್ಲಿರುವುದೆಂದು ಯಾರೂ ಅಂಗೀಕರಿಸಲಾರರು. ಇದಕ್ಕೆ ದೃಷ್ಟಾಂತವಾಗಿ ಒಂದು ತೋಟವನ್ನು ಹಿಡಿದಲ್ಲಿ ತೋಟವು ವಿಧವಿಧವಾದ ವೃಕ್ಷಾದಿಗಳಿಂದ ತುಂಬಿರಬೇಕಲ್ಲದೆ ಆ ಪ್ರತಿ ಯೊಂದು ವೃಕ್ಷವೂ ಜನಗಳಿಗೆ ಆವಶ್ಯಕವಾದ ಫಲವನ್ನು ಅಧಿಕವಾಗಿ ಕೊಡುತ್ತಿದ್ದರೆ ತೋಟವು ಅಭಿವೃದ್ಧಿಯ ಸ್ಥಿತಿಯಲ್ಲಿರುವುದೆಂದು ಹೇಳಬಹುದೇ ಹೊರತು ತದ್ವಿನದ ಗೃಹಕೃತ್ಯ ಮಾತ್ರದಲ್ಲಿ ವಿಶ್ರಾವವಾಗುವ ಒಂದೆರಡು ತರಕಾರಿಯನ್ನು ಬೆಳೆಯುತ್ತಿದ್ದ ಮಾತ್ರಕ್ಕೆ ಅಭಿವೃದ್ದಿಯ ಸ್ಥಿತಿಯಲ್ಲಿರುವುದೆಂದು ಹೇಳಲಾಗುವುದಿಲ್ಲವು, ಹೀಗೆಯೇ ಭಾಷೆಯೂ ಕೂಡ ಆಧಿಕಫಲಪ್ರದವಾಗದೆ ವ್ಯವಹಾರ ಮಾತ್ರ ಪರವಸಾಯಿ ಯಾಗುವಷ್ಟು ಮಟ್ಟಿನ ಸ್ಥಿತಿಯಲ್ಲಿದ್ದರೂ ಅಭಿವೃದ್ಧಿಯಸ್ಥಿತಿಯಲ್ಲಿರುವುದೆಂದು ಹೇಳಿ ಲಾಗುವುದಿಲ್ಲವಾದುದರಿಂದ ಭಾಷೆಯಿಂದ ಪಡೆಯಬೇಕಾದ ಅಧಿಕಫಲವು ಯಾವು ದೆಂಬ ವಿಷಯವಾಗಿ ಈಗ ವಿಚಾರ ಮಾಡಬೇಕಾಗಿರುವುದು. ಈ ಸಂದರ್ಭದಲ್ಲಿ ಯಾವ ಭಾಷೆಯನ್ನು ನೋಡಿದರೂ ಜನಗಳಿಗೆ ಜ್ಞಾನೋ ದಯವನ್ನು ಕಲ್ಪಿಸುವುದೇ ಭಾಷೆಗೆ ಮುಖ್ಯ ಫಲವಾಗಿ ಕಾಣುವುದು, ಹಾಗೆ ಭಾಷೆಯು ಜ್ಞಾನೋದಯಕ್ಕೆ ಸಾಧಕವಾಗಿರುವಾಗ ಯಾವ ವಿಧವಾದ ಜ್ಞಾನವು ಭಾಷೆಯಿಂ ದುಂಟಾಗಬೇಕೆಂದು ನೋಡಿದಲ್ಲಿ ಮನುಷ್ಯನಿಗೆ ಆವಶ್ಯಕವಾದ ಧನಧಾನ್ಯಾದಿಗಳ ಸಮೃದ್ಧಿಯೂ, ಲೋಕದಲ್ಲಿ ಮಾನವರಾದೆಗಳೂ, ಪರೋಪಕಾರಪ್ರವೃತ್ತಿಯೂ, ಅಪಾಯನಿವಾರಣನೈಪುಣ್ಯವೂ ಕೂಡ ಯಾವ ಜ್ಞಾನದಿಂದುಂಟಾಗಬಹುದೋ ತಾದೃಶಜ್ಞಾನೋದಯಕ್ಕೆ ಭಾಷೆಯು ಸಾಧಕವಾಗಿರಬೇಕೆಂದು ಯಾರಿಗೂ ತಿಳಿಯದ ಸಂಗತಿಯಲ್ಲವು, ಮನುಷ್ಯನ ಜ್ಞಾನ ಸರ್ವಸ್ವ ಕ್ಕೂ ಇಹದಲ್ಲಿ ಮೇಲೆ ಹೇಳಿದ ಫಲ ಚತುಷ್ಟಯವೇ ಫಲವಲ್ಲದೆ ಯಾವುದೋ ಒಂದು ವಿಧದಿಂದ ಜಠರಸಿಠರವನ್ನು ತುಂಬುವದು ಮಾತ್ರವೇ ಫಲವೆಂದು ಬುದ್ಧಿಶಾಲಿಗಳಾದ ಯಾರಿಗೂ ತೋರಲಾರದು. ಹೀಗೆ ಭಾಷೆಯುಜಠರಸಿಠರಪೂರಣಮಾತ್ರಫಲಕವಾದ ಜ್ಞಾನಕ್ಕಲ್ಲದೆ ಧನ ಧಾನ್ಯಾದಿಸಮೃದ್ಧಿಗೂ ಮಾನವರಾದೆಗಳಿಗೂ, ಅಸಾಯನಿವಾರಣನೈ ಪುಣ್ಯಕ್ಕೂ ಪರೋಪಕಾರಪ್ರವೃತ್ತಿಗೂ ಸಾಧಕವಾದ ಜ್ಞಾನವನ್ನು ಉಂಟುಮಾಡಬೇಕಾಗಿರುವ ಸಂದರ್ಭದಲ್ಲಿ ಜಪಾನಿನವರೇ ಮೊದಲಾದ ಅನ್ಯದೇಶೀಯರು ತಮ್ಮ ತಮ್ಮ ಭಾಷಾ ಬಲದಿಂದ ಪಡೆಯುತ್ತಿರುವ ಧನಾಭಿವೃದ್ಧಿ ಮೊದಲಾದ ಐಹಿಕ ಫಲಗಳಿಗೆ ಸಾಧಕ ವಾದ ಜ್ಞಾನವನ್ನೂ ಧನಾದಿಗಳ ವಿಷಯದಲ್ಲಿ ಉಪಕ್ಷೀಯಮಾಣಾವಸ್ಥೆಯಲ್ಲಿರುವ ನಮ್ಮ ದೇಶೀಯರು ತಮ್ಮ ಭಾಷಾಬಲದಿಂದ ಪಡೆಯುತ್ತಿರುವ ಜ್ಞಾನವನ್ನೂ ನೋಡಿದಲ್ಲಿ ಜಪಾನಿನವರೇ ಮುಂತಾದವರ ಭಾಷೆಯ ಮುಂದೆ ನಮ್ಮ ಭಾಷೆಯು * ರಂಗನಮುಂದೆ ಸಿಂಗನೇ' ಎಂಬಂತಾಗುವುದು, ಇದರಿಂದ ಜಪಾನಿನವರೇ ಮುಂತಾದವರ ಭಾಷೆಯಲ್ಲಿರುವಂತೆ ನಮ್ಮ ಭಾಷೆಯಲ್ಲಿ ಮೇಲೆ ಹೇಳಿದ ಫಲಗಳಿಗೆ ಸಾಧಕವಾದ ಜ್ಞಾನಸಂಪಾದನೆಗೆ ಅವಕಾಶವಿಲ್ಲದಿರುವುದೆಂದು ಹೇಳಬಹುದಾಗಿರು ವುದಲ್ಲದೆ ಹಾಗಾಗುವುದಕ್ಕೆ ಐಹಿಕಫಲ ಸಾಧಕವಾದ ಶಾಸ್ತ್ರಜ್ಞಾನಕ್ಕೆ ಸಾಕಾದಷ್ಟು SS