ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ.] ಕರ್ಣಾಟಕ ಭಾಷಾಭಿವೃದ್ಧಿ ವಿಚಾರ. ಜನವರಿ ೧೯೧೯ ೭ – + -4 4 : ಗ್ರಂಥಗಳಿಲ್ಲದಿರುವುದೇ ಕಾರಣವೆಂದು ಹೇಳಬೇಕಾಗಿರುವುದು, ಆದುದರಿಂದ ಈ ನಮ್ಮ ಕರ್ಣಾಟಕ ಭಾಷೆಯಲ್ಲಿರುವ ಈ ವಿಧವಾದ ನ್ಯೂನತೆಯನ್ನು ಹೋಗಲಾಡಿಸುವು ದಕ್ಕಾಗಿ ಲೋಕೋಪಕಾರಕಗಳಾದ ಪಶುಗಜನರಾದಿಗಳ ರೋಗ ನಿವಾರಕವಾಗಿರುವ ವೈದ್ಯಶಾಸ್ತ್ರವೂ, ಖನಿಜಶಾಸ್ತ್ರವೂ, ವ್ಯವಸಾಯಶಾಸ್ತ್ರವೂ, ಯವ್ರಶಾಸ್ತ್ರವೂ, ಶಿಲ್ಪ ಶಾಸ್ತ್ರವೆಂದರೆ ಗೃಹಸೇತುದೇವಾಯತನಾದಿಸಿರಾಣಬೋಧಕಶಾಸ್ತ್ರವೂ ದೋಹದ ಶಾಸ್ತ್ರವೂ, ಅಭಿನವಪದಾರ್ಥನಿರಾಣಬೋಧಕನಾಗಿರುವ ಮೂರ್ತ ಪದಾರ್ಥ ಶಾಸ್ತ್ರವೂ (ಕೆಮಿಸ್ತ್ರಿ) ಇನ್ನೂ ಇತರವಾದ ಧನಾರ್ಜನೋಪಯುಕ್ತಶಾಸ್ತ್ರಗಳೂ, ಹೀಗೆಯೇ ಲೋಕನೀತಿ, ರಾಜನೀತಿ ಚರಿತ್ರೆಯೇ ಮುಂತಾದ ಲೋಕಾನುಭವ ಸಾಧಕವಾಗಿರುವ ಗ್ರಂಥಗಳೂ, ಭೂಗೋಳಶಾಸ್ತ್ರ, ಖಗೋಳಭೂಗರ್ಭಶಾಸ್ತ್ರ, ವನಸ್ಪತಿ ಶಾಸ್ತ್ರ, ಪ್ರಾಣಿ ಶಾಸ್ತ್ರ ಮೂರ್ತದ್ರವ್ಯಶಕ್ತಿಬೋಧಕವಾದ ಭೌತಿಕಶಾಸ್ತ್ರವೇ ಮುಂತಾದ ಬುದ್ಧಿ ವಿಕಾ ಸಕ ಶಾಸ್ತ್ರಗಳೂ, ಚಿತ್ರಕಥಾಕಾವ್ಯನಾಟಕಾದಿ ಮನೋವಿನೋದಕ ಗ್ರಂಥಗಳೂ ಹೀಗೆಯೇ ಯಾವುದಾದರೂ ಒಂದು ವಿಧದಲ್ಲಿ ಐಹಿಕ ಫಲಪ್ರದವಾದ ಇನ್ನೂ ಇತರ ಗ್ರಂಥಗಳೂ, ಇವಲ್ಲದೆ ಮುಖ್ಯವಾಗಿ ಪರಲೋಕವಿಚಾರೈಕಸರಾಯಣವೆಂದು ಹೇಳ ಬಹುದಾದರೂ ಸತ್ಯಾರ ಪ್ರವೃತ್ತಿಜನಕವಾಗಿಯೂ ದುಷ್ಕಾರ ಪ್ರವೃತ್ತಿ ನಿವಾರಕ ವಾಗಿಯೂ ಇದ್ದುಕೊಂಡು ಲೋಕಕ್ಷೇಮಕ್ಕೂ ಸಾಧಕವಾಗಿರುವ ಆತ್ಮವಿಚಾರ ಗ್ರಂಥಗಳೂ ಪರಲೋಕವಿಚಾರಗ್ರಂಥಗಳೂ ಈ ಕರ್ಣಾಟಕ ಭಾಷೆಯಲ್ಲಿ ತುಂಬಿರುವ ಹಾಗೆ ಏರ್ಪಡಿಸಬೇಕಾಗಿರುವುದು. ಹೀಗೆ ಮೇಲೆ ಹೇಳಿದ ಗ್ರಂಥಗಳು ಕರ್ಣಾಟಕಭಾಷೆಯಲ್ಲಿ ಪರಿಪೂರ್ಣವಾಗಲಾಗಿ ಈ ಭಾಷೆಯಿಂದ ಪಡೆಯಬೇಕಾದ ಜ್ಞಾನಸರ್ವಸ್ವವನ್ನೂ ಈ ಕರ್ಣಾಟದೇತೀಯ ಜನಗಳೂ ಪಡೆದು ಇತರ ದೇಶೀಯರಂತೆ ಇವರೂ ಪ್ರಸಿದ್ದರಾಗಬಹುದಲ್ಲದೆ ಐಹಿಕ ಸುಖಸಾಧಕಜ್ಞಾನಾರ್ಜನೋಪಯುಕ್ತ ಗ್ರಂಥಗಳಿಲ್ಲದಿರುವ ನ್ಯೂನತೆಯು ಸಮಗ್ರ ವಾಗಿ ನಷ್ಟವಾಗಿ ಐಹಿಕ ಸುಖಸರ್ವಸ್ವ ಸಾಧಕವಾದ ಜ್ಞಾನವನ್ನು ಜನಗಳಿಗೆ ಉಂಟು ಮಾಡುವುದರಿಂದ ಈ ಭಾಷೆಯು ಪರಿಪೂರ್ಣವೆನಿಸಿಕೊಂಡು ಪರಮಾಭಿವೃದಿ ಯ ಪರಾಕಾಷ್ಠೆ ಯನ್ನು ಪಡೆಯಬಹುದೆಂದು ಹೇಳಬಹುದಾಗಿರುವುದು. ಹೀಗೆ ಐಹಿಕ ಸುಖಸಾಧಕಜ್ಞಾನಾರ್ಜನೋಪಯುಕ್ತ ಗ್ರಂಥಗಳು ಕರ್ಣಾಟಕ ಭಾಷೆಯಲ್ಲಿ ತುಂಬುವುದರಿಂದ ಭಾಷೆಯು ಸರಿಪೂರ್ಣವಾದಲ್ಲಿ ಏತಾವೃಶಜ್ಞಾನಾರ್ಜ ನೆಗಾಗಿ ಅನ್ಯದೇಶೀಯಭಾಷಾಜ್ಞಾನವನ್ನು ಪಡೆಯಬೇಕಾದ ಆವಶ್ಯಕತೆಯೇನೂ ಕಂಡುಬರುವುದಿಲ್ಲವಾದಕಾರಣ ಈ ವೇಶೀಯರು ತಮ್ಮ ಹುಟ್ಟು ಭಾಷೆಯಾದ ಕರ್ಣಾಟಭಾಷೆಯಿಂದ ಅತ್ಯಲ್ಪ ಕಾಲದಲ್ಲಿ ಯೇ ಜ್ಞಾನಸರ್ವಸ್ವವನ್ನೂ ಪಡೆಯಬಹು ದಾದ ಸೌಕಯ್ಯವೂ ಕಂಡುಬರುವುದು, ಪ್ರಕೃತದಲ್ಲಿ ಈ ವಿಧವಾದ ಗ್ರಂಥಗಳು ಕರ್ಣಾಟಭಾಷೆಯಲ್ಲಿ ಇಲ್ಲವೇ ಇಲ್ಲವೆಂದು ಹೇಳಲಾಗದಂತೆ ಎಲ್ಲಿಯೋ ಒಂದೆರಡು ಗ್ರಂಥಗಳಿರಬಹುದಾದರೂ ಆ ಗ್ರಂಥವೂ ಫಲೋನ್ಮುಖಾವಸ್ಥೆಯಲ್ಲಿರದೆ ಅ೦ಕುರಾ ವಸ್ಥೆಯಲ್ಲಿದ್ದುಕೊಂಡು ಗೋಚರಾಗೋಚರವಾಗಿರುವುದರಿಂದ ಹಿಂದೆ ಹೇಳಿದ ಶಾಸ್ತ್ರ ೫