ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕೆ: ] ಕಣಾಟಕ ಭಾಷಾ ಭಿವೃದ್ಧಿ ವಿಚಾರ. ಜನವರಿ ೧೯೧. ಗಿರುವುದು, ಮೈಸೂರು ದೇಶದಲ್ಲಿ ಹಿಂದಿನಕಾಲದಲ್ಲಿ ಕನ್ನಡವು ರಾಜಾಧಿಕಾರಸ್ಥಾನ (ಕೋರ್ಟು) ಗಳಲ್ಲಿ ಬಳಕೆಯಾಗಿತ್ತೆ೦ಬ೦ಶವು ಚರಿತ್ರಜ್ಞರಿಗೆ ತಿಳಿಯದ ಸಂಗತಿ ಯಲ್ಲವು, ಪ್ರಕೃತದಲ್ಲಿ ಇದಕ್ಕಾಗಿಯೂ ಕೆಲವಾದರೂ ಲಾ (ಧಶಾಸ್ತ್ರಗಳ) ಪುಸ್ತಕ ಗಳನ್ನು ಕನ್ನಡಿಸಬೇಕಾದ ಕ್ರಮವಿರುವುದು. ಆದರೂ ಭಾಷಾಭಿವೃದ್ಧಿಗಾಗಿ ಪ್ರಯತ್ನಿ ಸಿದ ಬಳಿಕ ಅದಕ್ಕೆ ತಕ್ಕ ಸರ್ವ ಪ್ರಯತ್ನವನ್ನೂ ಮಾಡಬೇಕಾದುದು ಆವಶ್ಯಕವಲ್ಲ ವೇ ?-ಅದರಲ್ಲಿಯೂ ಗೌರಮೇಂಟಿನವರೇ ಈ ಭಾಷಾಭಿವೃದ್ಧಿಗೆ ಪ್ರಯತ್ನಿಸಿರುವಾಗ ಯಾವ ಕೆಲಸವನ್ನೂ ನಿರ್ವಹಿಸಬಹುದಾಗಿರುವುದರಿಂದ ಅತ್ಯಲ್ಪ ಕಾಲದಲ್ಲಿಯೇ ಈ ಕರ್ಣಾಟಭಾಷೆಯೂ ಕೂಡ ಅಭಿವೃದ್ದಿಯ ತುತ್ತ ತುದಿಯನ್ನು ಹತ್ತಬಹುದೆಂದು ಹೇಳಬಹುದಾಗಿರುವುದು. ಹೀಗೆ ಲೋಕೋತ್ತರಜ್ಞಾನಪ್ರದವಾಗುವ ಸ್ಥಿತಿಯೂ ಸ್ವಯಂಪ್ರಕಾಶಕ್ಕೆ ಬರುವ ಸ್ಥಿತಿಯೂ ಕೂಡ ಭಾಷಾಭಿವೃದ್ಧಿಯ ಸ್ಥಿತಿಯೆಂದು ಹೇಳಬಹುದಾಗಿರುವು ಎಂಬಲ್ಲಿಗೆ - ಭಾಷೆಯು ಅಭಿವೃದ್ದಿಗೆ ಬರುವುದೆಂದರೇನು? "-ಎಂಬ ವಿಚಾರವನ್ನು ಸಾಕುಮಾಡಿ ಭಾಷಾಭಿವೃದ್ಧಿಗಾಗಿ ಆಚರಿಸಬೇಕೆಂದಿರುವ ವಿಷಯವಾಗಿ ಮುಂದೆ ವಿಚಾರಮಾಡೋಣ. ಹಿಂದೆ ಹೇಳಿದ ಸಭೆಯ ಮಹನೀಯರು ಕರ್ಣಾಟಕ ಭಾಷಾಭಿವೃದ್ಧಿಗಾಗಿ ಪ್ರಯತ್ನಗಳನ್ನು ಮಾಡಬೇಕೆಂದು ಸಂಕಲ್ಪಿಸಿರುವರಾದ ಕಾರಣ ಈ ಪ್ರಯತ್ನಗಳು ಎಷ್ಟರಮಟ್ಟಿಗೆ ಭಾಷಾಭಿವೃದಿ ಯ ವಿಷಯದಲ್ಲಿ ಫಲಕಾರಿಯಾಗಬಹುದೆಂದು ವಿಚಾರ ಮಾಡುವುದೂ ಪ್ರಕೃತವಾಗಿರುವುದರಿಂದ ಈ ವಿಚಾರಕ್ಕೂ ಆರಂಭಿಸಿ ವಿಚಾರಮಾಡಿ ನೋಡುವಲ್ಲಿ ಕನ್ನಡ ಭಾಷೆಯು ಪ್ರಚಾರದಲ್ಲಿರುವ ಪ್ರದೇಶಗಳಲ್ಲೆಲ್ಲಾ ಇರುವ ಕನ್ನಡ ಗ್ರಂಥಕರ್ತೃಗಳಲ್ಲಿ ಐಕಮತ್ಯವನ್ನು ಹೆಚ್ಚಿಸಬೇಕೆಂಬ ಪ್ರಯತ್ನವು ಭಾಷಾಭಿವೃದ್ಧಿಗೆ ಅಷ್ಟೊಂದು ಸಹಕಾರಿಯೆಂದು ಹೇಳಲಾಗುವುದಿಲ್ಲವಾದರೂ ಕರ್ಣಾಟಕಕ್ರಂಥಕಾರ ರಿಗೆಪರಸ್ಪರ ಸ್ನೇಹಕಾರಿಯಾದರೂ ಆಗಬಹುದು, ಆದರೆ ಇಷ್ಟು ಮಾತ್ರವಲ್ಲದೆ ಕರ್ಣಾಟಕ ಗ್ರಂಥಕಾರರಿಗೆ ಧನರೂಪವಾಗಿಯೋ ಮರಾದಾರೂಪವಾಗಿಯೋ ಪ್ರೋತ್ಸಾಹವನ್ನು ಕೊಟ್ಟಲ್ಲಿ ಗ್ರಂಥಾಭಿವೃದ್ಧಿಗೂ ತನ್ಮೂಲಕವಾದ ಭಾಷಾಭಿವೃದಿಗೂ ಉತ್ತೇಜನವಾದಂತಾಗುವುದೆಂದು ತೋರುತ್ತದೆ. ಇನ್ನು ಕನ್ನಡ ಭಾಷೆಯು ಪ್ರಚಾರದಲ್ಲಿರುವ ಪ್ರದೇಶಗಳಲ್ಲೆಲ್ಲಾ ಗ್ರಾಂಥಿಕ ಭಾಷೆಯನ್ನು ಏಕರೂಪಕ್ಕೆ ತರಬೇಕೆಂಬ ಪ್ರಯತ್ನವನ್ನೂ ಹಾಗೆಯೇ ಆ ಪ್ರದೇಶ ದಲ್ಲಿರುವ ಕನ್ನಡ ಪಾಠಶಾಲೆಗಳಲ್ಲಿ ಒಂದೇ ವಿಧವಾದ ಪಾಠ ಪುಸ್ತಕಗಳನ್ನಿರಿಸ ಬೇಕೆಂಬ ಪ್ರಯತ್ನವನ್ನೂ ಹಿಡಿದು ವಿಚಾರಮಾಡೋಣ. ಹಾಗೆ ವಿಚಾರಮಾಡಿ ನೋಡಿದಲ್ಲಿ ಈ ಕನ್ನಡ ಭಾಷೆಯು ಹೈದರಾಬಾದು ಸಂಸ್ಥಾನದ ನೈರುತ್ಯ ಭಾಗದಲ್ಲಿಯೂ ಬೆಳಗಾಂ ಧಾರವಾಡ ಮೊದಲಾದ ಬೊಂಬಾಯಿ ಆಧಿಪತ್ಯದ ದಕ್ಷಿಣದಲ್ಲಿ ಕೆಲವು ಭಾಗದಲ್ಲಿಯೂ ಹೀಗೆಯೇ ಮಂಗಳೂರ್ ನೊದ ಲಾದ ಮದ್ರಾ ಸಾಧಿಪತ್ಯದ ಪಶ್ಚಿಮಭಾಗದಲ್ಲಿ ಕೆಲವೆಡೆಯಲ್ಲಿ ಯ ಮೈಸೂರು ೨3