ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತಿ ಸGl1 ಪುಷ್ಯ. ಕರ್ಣಾಟಕ ೯ ೧ಷಾಭಿವೃದ್ಧಿ ವಿಚಾರ. [ಕರ್ಣಾಟಕ ಸಾಹಿತ್ಯ -- .~ - . . ......... ಸೀಮೆಯಲ್ಲಿ ಸಾಮಾನ್ಯವಾಗಿ ಸರ್ವಭಾಗದಲ್ಲಿಯೂ ಕಾಣಬರುವುದೆಂದು ಹೇಳ ಬಹುದು. ಹೀಗೆ ಬೇರೆಬೇರೆ ದೇಶಗಳಲ್ಲಿ ಈ ಕನ್ನಡವು ಹರಡಿಕೊಂಡಿರುವುದರಿಂದ ಆಯಾಯಾ ದೇಶದ ಸುತ್ತು ಮುತ್ತು ಇರುವ ಇತರ ಭಾಷಾಪದಗಳ ಸಂಪರ್ಕವೂ ವಾಕ್ಯ ಶೈಲಿಯ ಸಂಪರ್ಕವೂ ಈ ಭಾಷೆಗೆ ಕೆಲವು ದೇಶಗಳಲ್ಲಿ ಬರಬಹುದಾದುದರಿಂದ ಹಾಗಾಗದೆ ಭಾಷೆಯು ಮಿಶ್ರಭಾಷೆಯಾಗದಿರುವುದಕ್ಕೆ ಈ ಪ್ರಯತ್ನದ್ವಯವೂ ಸಾಧಕವಾಗಬಹುದು, ಆದರೆ ಬೇರೆಬೇರೆ ಆಧಿಪತ್ಯದವರು ಈ ಪ್ರಯತ್ನಕ್ಕೆ ಸಮ್ಮತಿ ಯನ್ನು ಕೊಡಬೇಕಾಗಿರುವುದು - ಇದಲ್ಲದೆ ಏಕಾಕ್ಷ ಬೋದನೆಗಾಗಿ ಒಂದೊಂದು ದೇಶದಲ್ಲಿ ಒಂದೊಂದು ವಿಧ ವಾದ ಪದಪ್ರಯೋಗವಾಗ್ಯಶೈಲಿಗಳು ಕಾಣಬರುವುದರಿಂದ ಒಂದು ದೇಶದವರು ಬರೆದ ಗ್ರಂಥವನ್ನು ನೋಡಿ ಗೊಣಗುಟ್ಟದೆ ಮತ್ತೊಂದು ದೇಶದವರು ನಿರ್ದುಷ್ಟ ವಾಗಿರುವುದೆಂದು ಒಪ್ಪಲಾರರಾದರೂ ಪ್ರಯತ್ನಿಸಿದಲ್ಲಿ ತಾದೃಶಗ್ರಂಥವನ್ನು ಸಹ ದಯರಾದ ಅದೇ ಬೇರೆಬೇರೆ ದೇಶದವರೇ ನಿರ್ದುಷ್ಟವಾಗಿರುವುದೆಂದು ಅಂಗೀಕರಿಸುವ ಹಗೆ ಮಾಡಿದರೂ ಮಾಡಬಹುದು, ಇದರಿಂದ ಭಿನ್ನ ಭಿನ್ನ ದೇಶದಲ್ಲಿರತಕ್ಕೆ ಕರ್ಣಾಟಿಕರೆಲ್ಲರೂ ತಮ್ಮ ತಮ್ಮ ಗ್ರಂಥಗಳಲ್ಲಿ ದೇಶಭೇದ ಪ್ರಯುಕ್ತವಾದ ಭಿನ್ನ ಕ್ರಮವನ್ನು ಬಿಟ್ಟು ಸರ್ವ ಸಮ್ಮತವಾದ ಒಂದು ಕ್ರಮವನ್ನನುಸರಿಸುವುದರಿಂದ ಒಬ್ಬ ಗ್ರಂಥಕಾರನ ಭಾಷಾಶೈಲಿಯನ್ನು ಮತ್ತೊಬ್ಬರು ಅನುಸರಿಸಿದಂತಾಗಿ ಪರಸ್ಪರಾಭಿಪ್ರಾಯವನ್ನು ಅನುಮೋದಿಸುವಷ್ಟು ಸ್ನೇಹವು ಸಂವರ್ಧಿತವಾಗಬಹುದು. ಆದರೂ ಇದರಿಂದ ದೇಶಭೇದ ಪ್ರಯುಕ್ತವಾದ ಸಂಗತವಾದ ಕೆಲವು ಭಾಷಾ ಶೈಲಿಯೂ ಕೂಡ ಕಾಲಕ್ರಮದಲ್ಲಿ ನಷ್ಟವಾದರೂ ಆಗಬಹುದಾಗಿ ಕಾಣಬರುವುದು. ಆದುದರಿಂದ ಈ ಪ್ರಯತ್ನವನ್ನು ಭಾಷಾಭಿವೃದ್ಧಿಗೆ ಸಾಧಕವೆಂದು ಭಾವಿಸುವುದ ಕ್ಕಿಂತಲೂ ಭಾಷಾಸಂಕೋಚೀಕರಣ ಅಥವಾ ಭಾಷಾಸದೃಶೀಕರಣಕ್ಕೆ ಸಾಧಕ ವೆಂದು ಹೇಳಬಹುದಾಗಿರುವುದು. ಆದುದರಿಂದ ಇದಕ್ಕಿಂತಲೂ ಗ್ರಾನ್ಸಿಕಭಾಷೆಯು ದೋಷಶೂನ್ಯವಾಗಿರುವಂತೆಯೂ ತಾದೃಶಪಾಠ್ಯ ಪುಸ್ತಕಗಳನ್ನು ಬಳಸುವಂತೆಯೂ ಪ್ರಯತ್ನಿಸುವುದು ಉತ್ತಮವಾಗಿರುವುದು. * ಇನ್ನು ಈ ವಿಚಾರವನ್ನು ಸಾಕುಮಾಡಿ ಕನ್ನಡಿಗರೆಲ್ಲರಿಗೂ ಪ್ರಯೋಜನ ಕಾರಿ ಯಾದ ಜ್ಞಾನವನ್ನು ಹರಡುವುದಕ್ಕಾಗಿ ಸಣ್ಣ ಸಣ್ಣ ಗ್ರಂಥಗಳನ್ನು ಪ್ರಚುರ ಪಡಿಸ ಬೇಕೆಂಬ ಪ್ರಯತ್ನವನ್ನು ನೋಡಿದಲ್ಲಿ ಕನ್ನಡಿಗರಿಗೆ ಫಲಕಾರಿಯಾದ ಜ್ಞಾನವು ಆವಶ್ಯಕವಾದುದರಿಂದ ಈ ಪ್ರಯತ್ನವು ಶೀಘ್ರದಲ್ಲಿಯೇ ಕೈ ಗೂಡಬೇಕೆಂಬುದು ಸರ್ವರಿಂದಲೂ ಅಭಿನಂದನೀಯವಾಗಬಹುದು, ಈ ಸಂದರ್ಭದಲ್ಲಿ ಕನ್ನಡಿಗರು ವಿಶೇಷವಾಗಿ ಅಭಿವೃದ್ಧಿಗೆ ಬರಬೇಕಾದ ಕಾರಣ ಸಣ್ಣ ಸಣ್ಣ ಗ್ರಂಥಗಳಿಗಿಂತಲೂ ದೊಡ್ಡ ದೊಡ್ಡ ಗ್ರಂಥಗಳನ್ನು ಪ್ರಚಾರಪಡಿಸಬೇಕಾಗಿರುವುದಾವಶ್ಯಕ ವಾದರೂ ಈ ಸಣ್ಣ ಸಣ್ಣ ಗ್ರಂಥಗಳೇ ಉತ್ತರಕಾಲದಲ್ಲಿ 'ಯಾದರೂ ದೊಡ್ಡ ಗ್ರಂಥಕ್ಕೆ ಅಂಕುರ ಪ್ರಾಯ ವಾಗಬಹುದಾದುದರಿಂದ ಈ ಪ್ರಯತ್ನವು ಸರ್ವಾಭಿನಂದನೀಯವಾಗುವುದ ರಲ್ಲಿ ಸಂದೇಹ ವಿರಲಾರದು. ೫೬