ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಟನೆ ಹಂಪೆ ಹರಿಹರದೇವರ ಗಿರಿಜಾ ಕಲ್ಯಾಣವೆಂಬ ಕನ್ನಡ ಚ೦ಪೂ ಗ್ರಂಥವನ್ನು ನಿನರ್ಶೆಮಾಡಿ ಅದರಲ್ಲಿರತಕ್ಕ ಗುಣದೋಷವಿವೇಚನ ಲೇಖನವನ್ನು ಉತ್ತಮ ನಾಗಿ ಬರೆದ ಮಾರ್ಚಿ ಅಬೈರೊಳಗಾಗಿ ಸರಿಷತ್ಕಾರ್ಯದರ್ಶಿಯವರಿಗೆ ಕಳುಹಿಸಿ ತಕ್ಕ ಲೇಖಕರು ಬಹುಮಾನಕ್ಕೆ ಅರ್ಹರಾಗುತ್ತಾರೆಂದು ಇದಕ್ಕೆ ಮುಂಚೆ ತಿಳಿವಳಿಕೆ ಪತ್ರಿಕೆ ಪ್ರಕಟಿಸಿ ಇದೆ. ಮೇಲೆಕಂಡ ಲೇಖನದ ವಿಚಾರದಲ್ಲಿ ಈ ಕೆಳಗೆ ಕೆಲವು ಸಂಗತಿಗಳನ್ನು ವಿವರವಾಗಿ ಲೇಖಕರ ತಿಳುವಳಿಕೆಗಾಗಿ ಛಾಪಿಸಿದೆ. ೧. ಈ ಗ್ರಂಥವನ್ನು ಬರೆದ ಕವಿಯ ಚರಿತ್ರೆಯನ್ನು ಸಂಕ್ಷೇಪವಾಗಿ ಬರೆದು ಈತನ ದೇಶ, ಮತ, ತಂದೆತಾಯಿಗಳು, ಅವರ ಸ್ಥಿತಿ ಇವೇ ಮೊದಲಾದುದು ಈ ಕಾವ್ಯದಿಂದ ಎಷ್ಟರಮಟ್ಟಿಗೆ ತಿಳಿದು ಬರುವುದೋ ಅದನ್ನು ನಮೂದಿಸಬೇಕು: ಮತ್ತು ಈ ವಿಷಯಕ್ಕೆ ಸ೦ಬ೦ಧಿಸುವಹಾಗೆ ಗ್ರಂಥದಲ್ಲಿ ಬರಬಹುದಾದ ಪದ್ಯಗಳನ್ನು ಅಥವಾ ವಾಕ್ಯಗಳನ್ನು ಲೇಖಕರು ತಮ್ಮ ಅಭಿಪ್ರಾಯಕ್ಕೆ ಅನುಗುಣವಾಗಿ ಅಲ್ಲಲ್ಲಿ ಬರೆಯುತ್ತ ಬರಬೇಕು: ಮತ್ತು ಗ್ರಂಥಕರ್ತನ ಚರಿತ್ರೆಗೆ ಸಂಬಂಧಪಡಬಹುದಾದ ಸದ್ಯಗಳೇನಾದರೂ ಇದ್ದರೆ ಅದನ್ನು ತೋರಿಸಬೇಕು. ೨. ಈ ಗ್ರಂಥದ ಕಥೆಯನ್ನು ಬರೆಯುತ್ತ ಅಲ್ಲಲ್ಲಿ ಆಕ್ಷೇಪಣೆಗಾಗಲೀ ಶ್ಲಾಘನೆಗಾಗಲಿ ಏನಾದರೂ ಸಂಗತಿಗಳು ಅಥವಾ ವರ್ಣನೆಗಳು ಇದ್ದರೆ ಅದನ್ನು ಲಾಕ್ಷಣಿಕರನತCತಾ, ಚರ್ಚಾರೂಪವಾಗಿಯೋ ಅಥವಾ ಬ್ಲಾಘನೆಯಾಗಿಯೋ ಸಂದರ್ಭಾನುಸಾರ ಬರೆಯುತ್ತಾ ಬರಬೇಕು. 2. ಕಸಿದು ಅಲ್ಲಲ್ಲಿ ಕೊಡತಕ್ಕ ವರ್ಣನೆಗಳ ಗುಣದೋಷಗಳನ್ನು ಅಲ್ಲಲ್ಲಿ ತೋರಿಸುತ್ತ ಅಭಿಪ್ರಾಯಕ್ಕೆ ಅನುಗುಣವಾದ ಪದ್ಯಗಳನ್ನು ಈ ಗ್ರಂಥದಿಂದ ತೆಗೆದು ಉದಾಹರಣೆಯಾಗಿ ಬರೆಯುತ್ತಾ ಬರಬೇಕು. 2, ಈ ಕವಿಯು ಅಲ್ಲಲ್ಲಿ ಕೊಡತಕ್ಕ ಉಪನಾದ್ಯಲ೦ಕಾರಗಳನ್ನು ವಿವರಿ ಸುತ್ತ ಅನ್ನ ಸಾಧುವೇ? ಆ ಸಾಧುವೇ? ಎಂಬುದನ್ನು ಚರ್ಚಾರೂಪವಾಗಿ ಒರೆ ಯುತ್ತಾ ಬರಬೇಕು. _. ಈ ಕಸಿದು ಸದ್ಯಗಳು ಸುಶ್ರಾವ್ಯವಾಗಿಯರತಕ್ಕ ಕಡೆಯಲ್ಲಿಯೂ ಅಥವಾ ಕರ್ಣಕಠೋರವಾಗಿರುವ ಕಡೆಯಲ್ಲಿಯೂ ಪದ್ಯಗಳ ಗುಣದೋಷಗಳನ್ನು ಛಂದಸ್ಸಿನ ಗುಣದೋಷಗಳನ್ನು ತೋರಿಸುತ್ತಾ ಉದಾಹರಣೆಗಳನ್ನು ತೋರಿಸುತ್ತಾ ಬರಬೇಕು. ೬, ಈ ಕಸಿಯು ಯಾವ ಶೈಲಿಯಲ್ಲಿ ಬರೆದಿದಾನೆ? ಪದಪ್ರಯೋಗ, ಶೈಲಿ ಮೊದಲಾದುದು ಲಾಕ್ಷಣಿಕರ ಮತರೀತ್ಯಾ ಹೇಗಿದೆ? ಯಾವುದಾದರೂ ಕೆಲವು ಪ್ರಯೋಗಗಳನ್ನು ವಿಶೇಷಾರ್ಥದಲ್ಲಿ ಮಾಡಿದಾನೆಯೇ? ಯಾವ ಶಬ್ದಗಳನ್ನು ಯಾನ ೫ಳ |