ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಾರ್ವಗಳು. ಕನ್ನಡ ಭಾಷೆಯಲ್ಲಿ ಲಾವಣಿಗಳು ಹೇರಳವಾಗಿ ದೊರೆಯುವುವು. ಹೀಗೆ ಲಾವಣಿಗಳನ್ನು ರಚಿಸಲು ಕಾರಣವೇನಿರಬಹುದೆಂದು ಪಾಲೋಚಿಸಿದರೆ ಭಾಷಾ ಪರಿಚಯವಿಲ್ಲದಿರುವ ಕೇವಲ ಗ್ರಾನ್ನು ಜನರಿಗೂ ಕೂಡ, ನೀತಿ, ಚರಿತ್ರೆ ಮುಂತಾದ ವಿಷಯಗಳು ತಿಳಿಯಲಿ ಎಂದು ಹಾಡಿನ ಫಕ್ಕಿಯಲ್ಲಿ ಬರೆದು ಲೋಕೋಪಕಾ ರಮಾಡಿರುವಂತೆ ತೋರಿಬರುವುದು, ಇಂತಹ ಲಾವಣಿಗಳು ಹಳ್ಳಿಹಳ್ಳಿ ಗಳಲ್ಲಿ ಅಕ್ಷರಜ್ಞಾನ ಶೂನ್ಯರಾಗಿರುವ ಹೆಂಗಸರು ಮಕ್ಕಳಿ೦ದಲೂ ಇಷ್ಟೇ ಅಲ್ಲದೆ ಕಾಡು ಜನರಿಂದಲೂ ಕೂಡ ಕೇಳಬಹುದು. ಆದರೆ ಇಂತಹ ಲಾವಣಿಗಳಲ್ಲಿ ಭಾಷಾಸೌಷ್ಟ ವೆಂಬುದು ಗಗನಕುಸುಮಪ್ರಾಯವಾಗಿಯೇ ಇರುವುದು, ಅದು ಹೇಗಾದರು ಇರಲಿ, ಏತಕ್ಕೆಂದರೆ ಇವ್ರ ಭಾಷಾ ಭಿಜ್ಞರಿಗಾಗಿ ಮಾಡಿದುಲ್ಲವಾದುದರಿಂದ ನಮಗೆ ಅವುಗಳ ಮೇಲೆ ದೋಷದೃಷ್ಟಿಯಲ್ಲ. ಆದರೆ ಶುದ್ಧವಾದ ಭಾಷೆಯಲ್ಲಿ ಇಲ್ಲ ವೆಂದೂ ಅಥವಾ ಇರಕೂಡದೆಂದೂ ನವ ತಾತ್ಸರವಲ್ಲ. ಸಿದ್ದವಾದ ಭಾಷೆ ಯಿಂದ ರಚಿತವಾದ ಲಾವಣಿಗಳು ಇದ್ದರೂ ಇರಬಹುದು. ಅ೦ತಹವುಗಳನ್ನು ಯಾರಾದರೂ ಮಹನೀಯರು ನಮ್ಮಲ್ಲಿಗೆ ಕಳುಹಿಸಿಕೊಟ್ಟರೆ ಕೃತಜ್ಞತೆಯಿಂದ ಸ್ವೀಕರಿಸಿ ಮುದ್ರಿಸಲು ಪ್ರಯತ್ನಿಸಲಾಗುವುದು. ಪ್ರಕ್ಷತ ನಮ್ಮಲ್ಲಿಗೆ ಕೆಲವು ಲಾವಣಿಗಳು ಬಂದವು, ಅವುಗಳಲ್ಲಿ, " ನಂಜ ನಗೂಡು ಲಾವಣಿ ” ಎ೦ಬುದನ್ನು ನಮ್ಮ ವಾಚಕ ದೃಷ್ಟಿಗೆ ಗೋಚರವಾಗ ಲೆಂದು ವಿನೋದಾರ್ಥವಾಗಿ ಪ್ರಕಟಿಸಿರುವೆವು. ಇದಕ್ಕಾಗಿ ವಾಚಕರ ದೃಷ್ಟಿಯು ದೋಷವಕಡೆಗೆ ಹೋಗಲಾರದೆಂದು ಭಾವಿಸಿದೆ.. ನಂಜನಗೂಡು ಲಾವಣಿ. ೧. ಮೂರುಲೋಕಕೆ ಶಿವ ಕಳುಹಿದನು ಮೂರು ಕಣ್ಣಿನ ತೆಂಗಿನಕಾಯಿ ಭಕ್ತ ಜನಗಳು ಬೇಡಿಕೊಂಬುತಾರೆ : ಕೃಷ್ಣನೆಂಬ ಕುಂಬಳಕಾಯಿ ಸುತ್ತದೇಶದೊಳು ಎತ್ತಿ ಆಳುತಾರೆ ಒತ್ತಲಾಗೆ ಪರಂಗಿಕಾಯಿ | ಸುಳ್ಳು ಮಾತುಗಳನಾಡಲಿಬೇಡ / ಬುದ್ದಿ ನೋಡು ಬದನೇಕಾಯಿ | %, ಸರ್ವ ಜನಗಳಿಗೆ ಬೇಕಾಗುವುದು 1 ಅನ್ನ ಮಾಡದುಸೋರೇಕಾಯಿ | ಇಬ್ಬರ, ಹೆ೦ರ ಕೂಡಬಾರದು : ಜಗಳ ನೋಡು ಸವತೆಕಾಯಿ ೬c