ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿ ಚರಿತೆ . ಪ್ರಾಕ್ತನ ವಿಮರ್ಶ ವಿಚಕ್ಷಣ, ರಾವ್ ಬಹದೂರ್ ಶ್ರೀಮಾನ್ ರಾ, ನರಸಿಂಹಾಚಾರ್ಯ, ಎಂ.ಎ., ಎಂ. ಆರ್. ಎ. ಎಸ್-ಅವರಿಂದ. ಈ ಪತ್ರಿಕೆಯ ಒಂದೊಂದು ಸಂಚಿಕೆಯಲ್ಲಿ, ಪ್ರಸಿದ್ಧನಾದ ಒಬ್ಬೊಬ್ಬ ಕರ್ಣಾಟಕ ಕವಿಯ ಚರಿತವನ್ನು ನಿರೂಪಿಸಬೇಕೆಂದು ಉದ್ದೇಶಿಸಿದೆ. ತದನು ಸಾರವಾಗಿ ಈ ಸಂಚಿಕೆಯಲ್ಲಿ, ಕನ್ನಡದೊಳಗೆ ಜ್ಯೋತಿಷವನ್ನು ಬರೆದವರಲ್ಲಿ ಪ್ರಥಮಕವಿಯಾಗಿ ಸುಮಾರು ೧೧ - ನೆಯ ಶತಮಾನದ ಮಧ್ಯ ಭಾಗದಲ್ಲಿ ಚಾಲುಕ್ಯರಾಜನಾದ ಆಹವಮಲ್ಲನ ಆಶ್ರಿತನಾಗಿ ಬಾಳಿದ “ ಶ್ರೀಧರಾಚಾರ್ಯ? ನೆಂಬ ಜೈನಕವಿಯ ಚರಿತವನ್ನು ಸಂಗ್ರಹವಾಗಿ ನಿರೂಪಿಸಿದೆ. ಈತನ ಗ್ರಂಥ ದಲ್ಲಿ ಪ್ರತಿಪಾದಿತವಾದ ವಿಷಯವು ಜ್ಯೋತಿಶ್ಯಾಸ್ತ್ರವಾದರೂ, ಅನಾವಶ್ಯಕವಾದ ಅಥವಾ ವ್ಯಾಕರಣದುಷ್ಟವಾದ ಪದಗಳನ್ನು ಉಪಯೋಗಿಸದೆ ಬರೆದಿರುವುದನ್ನು ನೋಡಿದರೆ, ಗ್ರಂಥಕರ್ತನ ಅನ್ಯಾದೃಶವಾದ ಕವಿತಾಶಕ್ತಿ ವ್ಯಕ್ತವಾಗುತ್ತದೆ. ಶ್ರೀಧರಾಚಾರ್ಯ (೧೦೪೯). ..----- .. ಈತನು ' ಜಾತಕತಿಲಕ' ವನ್ನು ಬರೆದಿದ್ದಾನೆ. ಚಂದ್ರಪ್ರಭಚರಿತೆಯನ್ನೂ ಬರೆದಿರುವಂತೆ ಜಾತಕತಿಲಕವ ಸುಭಗವಚ೦ ಕಾವ್ಯ ಕವಿ | ತೃಭೂಷಣ೦ ಶ್ರೀಧರಾಚಾರ್ಯರ ಚಿ ತ೦ ಚ೦ದ್ರ | ಪ್ರಭಚರಿತ೦ ಶಾಸ್ತ್ರಕವಿ | ತೃಭೂಷಣ೦ ಧರೆಗೆ ನೆಗಟ್ಟಿ ಜಾತಕ ತಿಲಕಂ ! ಅದಿದೆನ್ನ ದೆ ಜಾತಕತಿಲ ಕದೊಳಜಿವುದು ಗಣಿತ ಧರ್ಮಮಂ ಸಕಳ ಜಗ ದ್ವಿದಿ ತ೦ ಚ೦ದ್ರಪ್ರಭಚರಿ | ತದೊಳುವುದು ಕಾವ್ಯ ಧರ್ಮಮಂ ಬುಧ ನಿವಹಂ !! ೩೬