ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸು! ಟೈತಾ ಷಾಢ ಕವಿಚರಿತೆ. fಕರ್ಣಾಟಕ ಸಾಹಿತ್ಯ ಎಂಬ ಪದ್ಯಗಳಿಂದ ತಿಳಿಯುತ್ತದೆ. ಆದರೆ ಈ ಗ್ರಂಥವು ನಮಗೆ ದೊರೆತಿಲ್ಲ. ಇವನು ಜೈನಕವಿ. ಇವನ ಸ್ಪಳ ಬೆಳುವಳ ನಾಡಿನಲ್ಲಿರುವ ನರಿಗುಂದ. « ವಿಪ್ರಕುಲೋತ್ತಮಂ " ಎಂದು ಹೇಳಿಕೊಂಡಿದ್ದಾನೆ. “ ಇದುವರೆಗೂ ಆರೂ ಕನ್ನಡದಲ್ಲಿ ಜ್ಯೋತಿಷವನ್ನು ಬರೆದಿಲ್ಲ ; ನೀನು ಜಾತಕತಿಲಕವನ್ನು ಬರೆಯ ಬೇಕು” ಎಂದು ವಿದ್ವಾಂಸರು ಹೇಳಲು ಈ ಗ್ರಂಥವನ್ನು ಬರೆದಂತೆ ಕವಿ ಹೇಳು ತಾನೆ. ಇದರಿಂದ ಕನ್ನಡದಲ್ಲಿ ಜ್ಯೋತಿಷವನ್ನು ಬರೆದವರೊಳಗೆ ಇವನೇ ಪ್ರಥಮ ಕವಿಯೆಂದು ತಿಳಿಯುತ್ತದೆ. ಈ ಅಂಶವನ್ನು ಬಾಹುಬಲಿ (ಸು. ೧೫೬೦) ತನ್ನ ನಾಗಕುಮಾರ ಕಥೆಯ ಆದಿಭಾಗದಲ್ಲಿಯ ಈ ಪದ್ಯದಲ್ಲಿ ದೃಢೀಕರಿಸುತ್ತಾನೆ:- ಜ್ಯೋತಿಷ ವಿದ್ಯೆಗೆ ಮೊದಲಿಗೆ ಸಿವಾದಿ 1 ಟ್ರಾತ ಭಯ೦ಕರ ನೆನಿಹ | ಖ್ಯಾತಿಗೆ ನೆಲೆಯಾದ ಶ್ರೀಧರಾಚಾರ್ಯರ 1 ಪ್ರೀತಿ ಕೈಮಿಗೆ ಬಲಗೊಂಬೆ | ಈ ಗ್ರಂಥವನ್ನು ಕಸಿ “ ಧರಣಿಗಿರಿನಿಧಿ ಶಕಾಂಕಂ ವಿರೋಧಿ ಸಂವತ್ಸರದಲ್ಲಿ ” ಎಂದರೆ ಶಕ ೯೬೧ (ಕ್ರಿಸ್ತ ೧೦೪೯) - ರಲ್ಲಿ ಬರೆದಂತೆ ಹೇಳುತ್ತಾನೆ. ಗ್ರಂಥಾಂತ್ಯ ದಲ್ಲಿ “ ಧಾತ್ರಿಯನಾಹವನಲ್ಲ ಭೂಮಿಪಾಳಕನೆಸೆದಾಜ್ಞೆ ” ಎಂಬುದರಿಂದ ಕವಿ ಚಾಳುಕ್ಯರಾಜನಾದ ಆಹವಮಲ್ಲನ (೧೦೪೨ - ೧೦೬೮) ಆಳಿಕೆಯಲ್ಲಿದ್ದನೆಂದು ತಿಳಿಯುತ್ತದೆ. ಈ ಕವಿಗೆ ಗದ್ಯ ಪದ್ಯ ವಿದ್ಯಾಧರ, ಬುಧಮಿತ್ರ ಎಂಬ ಬಿರುದುಗಳುಂಟು. ತನ್ನ ಗುಣಾದಿಗಳನ್ನೂ ಕವಿತಾಪ್ರೌಢಿಯನ್ನೂ ಈ ಪದಗಳಲ್ಲಿ ಹೇಳಿದ್ದಾನೆ .. ವಿಧುವಿಶದಯ ಶೋಸಿಧಿ ಕಾ ! ವ್ಯ ಧರ್ಮ ಜಿನ ಧರ್ಮ ಗಣಿತ ಧರ್ಮ ಮಹಾ೦ಬ್ರೆ ! ನಿಧಿಯೆನೆ ನೆಗಟ್ಟಂ ಜಗದೊಳ್ | ಬುಧವಿತ್ರ೦ ನಿಜಕುಲಾಂಬುಜಾಕರಪುತ್ರ೦ || ರಸಭಾವಸುತನೆ೦ | ದು ಸುಭಗ ನೆ೦ದಖಿಳ ವೇದಿಯೆ೦ದ ಗ್ವಿತ ನೆ೦ || ದು ಸಮಗ್ರನೆಂದು ಸಲೆ ಬ | ಕೈ ಸುವುದು ಧರೆ ಗದ್ಯ ಪದ್ಯ ವಿದ್ಯಾಧರನ೦ ! ಅನವದ್ಯಂ ಕವಿತಾಗುಣಾರ್ಣವನಿಳಾದೇವಾ ನ್ವಯಾಬ್ಬ ೦ಬುಜಾ | ರಿ ನಿಭ೦ ಪ್ರೌಢವಿಳಾಸಿನೀ ಮನಸಿಜ೦ ಶ್ರೀ ಶೀಲಭದ್ರ೦ ದ್ವಿಪ | ಜ್ಞ ನ ದುರ್ವಾರಗಜಾಂಕುಶ೦ ಸುಜನರತ್ನಂ ತಾನನಂ ಕೃತಾ | ರ್ಥನೆ ಕರ್ಣಾಟ ಕವೀಂದ್ರ ಸದ್ಗುಣ ? ಗುಣಾ ಸಂಜ್ಞಾ ಧರ೦ ಶ್ರೀಧರಂ ! ಕೊನೆಯ ಸದ್ಯದಲ್ಲಿ ಆದಿಪಂಪ (ಕವಿತಾ ಗುಣಾರ್ಣವ), ಚಂದ್ರ ಅಥವಾ ೪೮