ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಷಸ್ಪತ್ರಿಕೆ- ಕವಿಚರಿತೆ. ನಿಲ್ ..... ಜಲೈ ೧೯೧೮. ಚಂದ್ರಭಟ್ಟ (ಅಂಬುಜಾರಿ), ಮನಸಿಜ, ? ಗುಣವರ್ಮ (ಶೀಲಭದ), ಗಜಾಂಕುಶ, ರನ್ನ ಎಂಬ ಪೂರ್ವಕವಿಗಳ ಹೆಸರನ್ನು ಸೂಚಿಸಿದ್ದಾನೆ. ಇದರಿಂದ ಈ ಕವಿಗಳೆಲ್ಲರೂ ೧೦೪೯ - ಕೈ ಹಿಂದೆ ಇದ್ದವರೆಂಬುದು ವ್ಯಕ್ತವಾಗುತ್ತದೆ. “ ಧರಣೇಸ್ತು ತಾರ್ಯಭಟನಂ ! ನಿರತಿಶಯೋಜ್ವಳಯರ್ಶಪ್ರಕೋರಕನಂ ಶ್ರೀ | ಕರಣ ” ಎಂಬ ಅಸಮಗ್ರವಾದ ಪದ್ಯದಲ್ಲಿ ಆರ್ಯಭಟ್ಟನ ಹೆಸರು ಹೇಳಿದೆ. ಇವನ ಗ್ರಂಥ ಜಾತಕತಿಲಕ. - ಇದು ಜ್ಯೋತಿಷಗ್ರಂಥ ; ಕಂದವೃತ್ತಗಳಲ್ಲಿ ಬರೆದಿದೆ : ೨೪ ಅಧಿಕಾರ ಗಳಾಗಿ ಭಾಗಿಸಲ್ಪಟ್ಟಿದೆ. ಅಧಿಕಾರಗಳ ಹೆಸರು-- ಸಂಜ್ಞಾ, ಬಲಾಬಲ, ಗರ್ಭ, ಜನ್ಮ, ತಿರ್ಯಗೃನ್ಮ, ಅರಿಷ್ಟ, ಅರಿಷ್ಟ ಭಂಗ, ಆಯುರ್ದಾಯ, ದಶಾಂತರ್ದಶಾ, ಅಷ್ಟಕವರ್ಗ, ಜೀವ, ರಾಜಯೋಗ, ನಾಭಿಸಂಯೋಗ, ಚಂದ್ರಯೋಗ, ದ್ವಿತಿ ಯೋಗ, ದೀಕ್ಷಾಯೋಗ, ರಾಶಿ, ಲಗ್ನ ಭಾವ, ದೈಕ್ಕಾಣ, ದೃಷ್ಟ, ಅನಿಷ್ಟ, ಜಾತಕ, ನಿರ್ಯಾಣ, ನಷ್ಟ ಜಾತಕ, ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ :- ಪದ ಪೂರಣವನಣಂ ಪುಗಿ | ಸದೆ ಕುದಿದು ವೃಫಾಕ್ಷರ೦ಗಳ೦ ಪ್ರಾಸದೊಳಿ !! ಕದೆ ಶಾಸ್ತ್ರದರ್ಥನುಂ ಬಿಸು | ಡದೆ ಪೂಣೆ ಯಿ ನೋದುವೇಳ್ವೆಡಾರ್* ಮೆಚ್ಚರಿದಂ || ಅಮಿತಾರ್ಥ೦ ಸಕಲಾಚಾ ! ರ್ಯ ಮತಾ೦ತ ಸ್ವಾರವುತಿಗಭೀರಂ ಹೃದಯc | ಗನನನ್ಯ ಶಾಸ್ತ್ರನಿರಪೇ ! ಕ್ಷನ೦ಬಿನಂ ಖ್ಯಾತವಾಯ್ತು ಚಾತಕ ತಿಲಕc !! ಸುಕ ರನುಚಿತ ಕ್ರಿಯಾ ಕಾ । ರಕನುವ ಶಬ್ದ ಪ್ರದೂರನುಸನೇಯ೦ ಸಾ !! ರ್ಥಕಪದವಿನ್ಯಾ ಸಂ ಜಾ | ತಕತಿಲಕವಿದೆಂದು ಕೊಂಡುಕೊನೆಯದರೊಳರೇ || ಲಲಿತವಚೋಲಲನಾನನ | ತಿಲಕಂ ದೈವಜ್ಞ ವದನತಿಲಕಂ ವಿದ್ಧ || ತುಲಮುಖ ತಿಲಕಂ ಜಾತಕ | ತಿಲಕಂ ತ್ರೈಲೋಕ್ಯ ತಿಲಕವಿದು ಕೇವಲಮೇ ! ೪೯