ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

I y ಪ್ರಚಲಿತವಾದ ಕನ್ನಡಭಾಷೆಗೆ ತಕ್ಕ ವ್ಯಾಕರಣ ರಚನೆ. ಪಂಡಿತ ರಾಜಪುರೋಹಿತ ನಾರಾಯಣಾಚಾರ್ಯರಿಂದ.

  • ವ್ಯಾಕರಣ " ಶಬ್ಬದ ಯೌಗಿಕಾರ್ಥವು “ ಏನೇಚನ " ಎಂದು ಇದೆ. ಆದರೆ ರೂಢಿಯಲ್ಲಿ ಭಾಷೆಯ ವಿವೇಚನಕ್ಕೆ ಮಾತ್ರ ವ್ಯಾಕರಣವೆಂಬ ಹೆಸರುಂಬಾ ಗಿದೆ. ನಾಗವರ್ಮ, ಕೇಶವ, ಭಟ್ಟಾಕಳ೦ಕ ಪ್ರಕೃತಿಗಳು, ಭಾಷಾಭೂಷಣ, ಶಬ್ದಮಣಿದರ್ಪಣ, ಶಬ್ದಾನುಶಾಸನ ಮುಂತಾದ ಗ್ರಂಥಗಳಲ್ಲಿ ಕನ್ನಡಭಾಷೆಯ ವಿವೇಚನವನ್ನು ಮಾಡಿದ್ದಾರೆ. ಭಾಷೆಯಲ್ಲಿ ಸದ್ಯವೆಂದೂ, ಗದ್ದನೆಂದೊ ಎರಡು ಮುಖ್ಯವಾದ ಭೇದಗಳುಂಟು. ಈ ಪ್ರಾಚೀನ ವೈಯಾಕರಣರು ತಮ್ಮ ವ್ಯಾಕರಣ ಗಳಲ್ಲಿ ಕೇವಲ ಪದ್ಯ ಭಾಷೆಯ ಏವೇಚನವನ್ನು ಮಾಡಿದ್ದಾರೆಯೇ ಹೊರತು ಗದ್ಯ ಭಾಷೆಯ ವಿವೇಚನವನ್ನು ಮಾಡಿರುವುದಿಲ್ಲ, ಏಕೆಂದರೆ, ಪ್ರಾಚೀನಕಾಲದ ಭಾಷಾ ವೈಭವವೆಂದರೆ ಸದ್ಯವೇ ಸರಿ. ಕಾವ್ಯನಾಟಕಗಳೇ ?ಗಲಿ, ಛಂದಶ್ಯಾಸ್ತ್ರ, ಅಲಂಕಾರಶಾಸ್ತ್ರ, ವ್ಯಾಕರಣ, ನಿಘಂಟುಗಳೇ ಆಗಲಿ, ವೈದ್ಯಶಾಸ್ತ್ರ, ಪಾಕಶಾಸ್ತ್ರ, ಜ್ಯೋತಿಶ್ಯಾಸ್ತ್ರ ಮುಂತಾದ ಭೌತಿಕಶಾಸ್ತ್ರಗಳೇ ಆಗಲಿ, ತಿಲಾಲೇಖನಗಳೇ ಆಗಲಿ ಎಲ್ಲವೂ ಸದ್ಯ ಭಾಷೆಯಲ್ಲಿಯೇ ಬರೆಯಲ್ಪಟ್ಟಿವೆ. ಸಂಸ್ಕೃತವ ಸ್ಥಿತಿಯೂ ಹೀಗೆಯೇ. ಭಾಸ್ಕರಾಚಾರ್ಯನ ಜ್ಯೋತಿಶ್ಯಾ ಸ್ತ್ರವೂ, ನಾಗ್ಯ ಟನ ವೈದ್ಯಗ್ರಂಥವೊ, ಅಮರಸಿಂಹನ ಕೋಶವೂ, ಮಮ್ಮಟನ ಕಾವ್ಯ ಪ್ರಕಾಶವೂ, ಕಾಳಿದಾಸನ ರಘುನಂ ಮಹಾಕಾವ್ಯವೂ, ಹೆಚ್ಚೇಕೆ, ಸಮಸ್ತ ಸಂಸ್ಕೃತವಾಯವೂ ಪರಮಯವಾಗಿದೆ. ಹೀಗಾಗುವುದಕ್ಕೆ ಒಂದು ಬಲವಾದ ಕಾರಣವಿದೆ. ಏನೆಂದರೆ, ಪ್ರಾಚೀನಕಾಲದಲ್ಲಿ ಈಗಿನಂತೆ ಕಾಗದ ಮುದ್ರಣಕಲೆ ಮುಂತಾದ ಬರೆವಣಿಗೆಯ ಉತ್ಕೃಷ್ಟವಾದ ಸಾಧನಗಳು ಇರಲಿಲ್ಲವಾದುದರಿಂದ ಎಲ್ಲ ವಿಷಯಗಳೂ ಬಾಯಲ್ಲಿ ಸ್ಥಿರವಾಗಿ ನಿಲ್ಲುವಂತೆ ಅವು ಗಳನ್ನು ಬಾಯಿಪಾಠಮಾಡಿಕೊಳ್ಳು ವುದು ಆ ಕಾಲದ ಜನರಿಗೆ ಆವಶ್ಯಕವಾಯಿತು. ಬಾಯಿಪಾಠಮಾಡುವುದಕ್ಕೆ ಗದ್ಯಕ್ಕಿಂತ ಸದ್ಯವೇ ಏಶೇಷ ಅನುಕೂಲವಾದುದರಿಂದ ಎಲ್ಲ ಗ್ರಂಥಗಳೂ ಪದ್ಯ ಭಾಷೆಯಲ್ಲಿಯೇ ಬರೆಯಲ್ಪಟ್ಟುವು.

ಕನ್ನಡದಲ್ಲಿ ಚಾವುಂಡರಾಯಪುರಾಣವೂ, ಸಂಸ್ಕೃತದಲ್ಲ ಬಾಣಭಟ್ಟನ ಕಾದಂಬರಿಯ ಗದ್ಯಗ್ರಂಥಗಳಿರುತ್ತವೆಂದು ಯಾರಾದರೂ ಹೇಳಬಹುದು, ಇಲ್ಲ ದುಃಖದ ಸಂಗತಿಯೇನೆಂದರೆ, ಈ ಗ್ರಂಥಗಳು ಛಂದೋಬದ ಸದರಚನೆಯಿಂದ ರಚಿಸಲ್ಪಟ್ಟಿಲ್ಲವಾದುದರಿಂದ ಇವು ಗದಗಳಾಗಿ ತೋರುವುದೇನೋ ನಿಜ : ಆದರೆ ವಸ್ತುತಃ ಇವು ಪದ್ಯಗ್ರಂಥಗಳೇ ಆಗಿವೆ. ಏಕೆಂದರೆ, ಇವುಗಳಲ್ಲಿ ಸದ್ಯಕ್ಕೆ ಯೋಗ್ಯ ಧಾರವಾಡದಲ್ಲಿ ನಡೆದ ನಾಲ್ಕನೆಯ ಕm ೯ಟಕ ಸಾಹಿತ್ಯ ಸಮ್ಮೇಳನದಲ್ಲಿ ಓಟದ ಪ್ರಬ೦ಧದ ಸಾರಾ೦ಶ. ೬೯ ವೆ 13