ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸCH ಚೈತ್ರಾಷಾಢ ವ್ಯಾಕರಣ ರಚನೆ. ಕರ್ಣಾಟಕ ಸಾಹಿತ್ಯ

  • --* --: -

, ". ------ - - - ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ತನ್ನ ಕವಿರಾಜಮಾರ್ಗ ಗ್ರಂಥದಲ್ಲಿ ತನ್ನ ಕಾಲದ ಹಿಂದಿನಭಾಷೆಗೆ ಹಳಗನ್ನಡವೆಂದು ಹೇಳಿ, ಅದನ್ನು ಜರ ಧುವಿಗೆ ಹೋಲಿಸಿ ಉಪೇಕ್ಷಿಸಿದ್ದಾನೆ. ಎಂದರೆ ಇವನು ತನ್ನ ಕಾಲಕ್ಕೆ ಕನ್ನಡ ಗ್ರಾಂಥಿಕ ಭಾಷೆಯಲ್ಲಿ ಹೊಸಏರ್ಪಾಡು ಮಾಡಿಕೊಂಡನೆಂಬುದು ಧ್ವನಿತವಾಗುತ್ತದೆ. ಆದರೆ ಇವನು ಅದರಲ್ಲಿ ವ್ಯಾನ ಹಾರಿಕ ಭಾಷೆಯನ್ನು ಮಾತ್ರ ಸ್ವೀಕರಿಸಲಿಲ್ಲ. ಮುಂದೆ ೧೨ನೆಯ ಶತಮಾನದ ಆದಿಭಾಗದಲ್ಲಿದ್ದ ಕನ್ನಡಭಾಷೆಯ ಆದ ವೈಯಾಕರಣನಾದ ನಯಸೇನನು ನ್ಯಾನ ಹಾರಿಕ ಭಾಷೆಯನ್ನು ಗ್ರಂಥದಲ್ಲಿ ಉಪಯೋಗಿಸಲಾರಂಭಿಸಿದನು. ಉದಾಹರಣ :- ಇವನು ತನ್ನ “ ಧರ್ಮಾಮೃತ ” ವೆಂಬ ಗ್ರಂಥದ ಪೊಸಗನ್ನಡದಿ೦ ನ್ಯಾನ | ರ್ಣಿಸುವೆ೦ ಸಮ್ಮತಿಯನೆ೦ದು ಕನ್ನಡನುಂ ಚಿ೦ || ತಿಸಿ ಕೂಡಲಾಜದಕ್ಕಟ | ಮಿಸುಕದ ಸ ಕದನುನಿಕ್ಕುವವನುಂ ಕವಿಯೇ " ಎಂಬ ಪದ್ಯದಲ್ಲಿ - ಇಕ್ಕುವವನು ” ಎಂಬ ವ್ಯಾವಹಾರಿಕ ಭಾಷೆಯ ಶಬ್ದ ವನ್ನು ಪ್ರಯೋಗಿಸಿದ್ದಾನೆ. ಮುಂದೆ ಬರುಬರುತ್ತ ಕನ್ನಡ ಕವಿಗಳು ವ್ಯಾವಹಾರಿಕ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಲಾರಂಭಿಸಿದರೆಂಬುದಕ್ಕೆ ೧೩ನೆಯ ಶತಮಾನದಲ್ಲಿ ಬರೆಯ ಲ್ಪಟ್ಟ ಶಬ್ದಮಣಿದರ್ಪಣದ-- ಯುರಣನಳಜಿಟನರ್ಣೋ | ತರವೆ ವಲಂ ಪದದ ಕತೆಯೊಳ ಸ್ವರ ವಿಧಿಯಂ !! ಸಿರಿದುಂ ತಾಳ್ಳು ಗುಖವನಜತಿ ! ವರೆ ಕನ್ನಡಗಬ್ಬದೊಳ್ ತೊಡ೦ಕದೆ ಸಲ್ಟರ್ 1 ೪೮ | ಎಂಬ ಸೂತ್ರವೇ ಸಾಕ್ಷಿಭೂತವಾಗಿದೆ. ಇದರಲ್ಲಿ “ ಯಕಾರ, ರಕಾರ, ಲಕಾರ, ಣಕಾರ, ನಕಾರ, ಆಕಾರ, ಆಕಾರ, ಅಕಾರಾಂತ ಶಬ್ದಗಳು ವಿಕಲ್ಪದಿಂದ ವ್ಯಂಜನಾಂತಗಳಾಗಿವೆ. ಇವುಗಳನ್ನು ತಿಳಿದುಕೊಂಡು ಪ್ರಯೋಗಿಸುವವರು ಶ್ರೇಷ್ಠ ಕವಿಗಳಾಗಿರುವರು. ” ಎಂದು ಹೇಳಿದೆ. ಈ ಸೂತ್ರದಲ್ಲಿ ಕೆಲವರು ಕವಿಗಳು ಸ್ವರಾಂತ ಶಬ್ದಗಳನ್ನು ಎಂದರೆ ವ್ಯಾವಹಾರಿಕ ಭಾಷೆಯ ಶಬ್ದಗಳನ್ನು ಗ್ರಂಥಗಳಲ್ಲಿ ಉಪಯೋಗಿಸುತ್ತಿದ್ದರೆಂದು ಸ್ಪಷ್ಟವಾಗಿ ಧ್ವನಿಹೊರಡುತ್ತದೆ. - ಈಚೀಚೆಗೆ ೧೬, ೧೭, ೧೮ನೆಯ ಶತಮಾನಗಳಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದ ಕವಿಗಳು ತಮ್ಮ ಗ್ರಂಥಗಳಲ್ಲಿ ನಾ ವಹಾರಿಕ ಭಾಷೆಯನ್ನು ಅತಿಶಯ ಜಿ.