ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯುಕ್ತ ಸಂ: ಚೈತಷ: ಘ: ನ್ಯಾ'ರಣ ರಚನೆ.

ಕರ್ಣಾಟಕ ಸಾಹಿತ್ಯ

--" - - - - - - - - - - - - .. .. . . ಡಕ್ಕೆ ಬರಲಾರಂಭಿಸಿದ ಬಳಿಕ * ಕನ್ನಡಭಾಷೆಯ ಏಕೀಕರಣದ ' ವಿಚಾರವು ಅಂಕುರವಾಯಿತು, ಮುಂದೆ ೧೭ ವರ್ಷಗಳ ಮೇಲೆ ಎಂದರೆ, ಕ್ರಿ.ಶ. ೧೯೦೭ರಲ್ಲಿ ಧಾರವಾಡದಲ್ಲಿ ನೆರೆದ ಕರ್ಣಾಟಕ ಗ್ರಂಥಕರ್ತರ ಸಮ್ಮೇಲನ ' ದಿಂದ ಈ ವಿಚಾ ರವು ಕರ್ಣಾಟಕದ ತುಂಬ ಹಬ್ಬಿತು. ಆದುದರಿಂದ ೧೯ನೆಯ ಶತಮಾನದಲ್ಲಿ ರಚಿಸಲ್ಪಟ್ಟ ಗದ್ಯಭಾಷೆಯ ವ್ಯಾಕರಣಗಳಲ್ಲಿ " ಕನ್ನಡ ಭಾಷೆಯ ಏಕೀಕರಣದ * ಪ್ರಯತ್ನವು ಕಾಣಬರದಿದ್ದರೆ, ಆ ದೋಷವು ಕ್ಷಮ್ಯವೇ ಸರಿ. - ಇನ್ನು, ಎರಡನೆಯ ದೋಷವನ್ನು ಕುರಿತು ವಿಚಾರಿಸುವ: ... ಬ್ರಿಟಿಷರ ಆಳಿಕೆಯು ಆರಂಭವಾದಂದಿನಿಂದ ಆಂಗ್ಲ ವಾಯದ ಸಹವಾಸವುಂಜಾಗಿ ಕನ್ನಡ ದಲ್ಲಿ ನಿಜವಾದ ಗದ್ಯವಾಣ್ಮಯವು ಹುಟ್ಟಿತೆಂದು ಹಿಂದೆಯೇ ಹೇಳಿದ್ದೇನೆ. ಈ ಉಗ ಮಸ್ಥಾನದಲ್ಲಿ ಎಂದರೆ ೧೯ನೆಯ ಶತಮಾನದಲ್ಲಿ ನಿಜವಾದ ಗದ್ಯಗ್ರಂಥಗಳು ಅತಿ ವಿರಳವಾಗಿದ್ದ ವೆಂಬುದು ಸ್ಪಷ್ಟವಾಗಿದೆ. ಆದುದರಿಂದ ಈ ೧೯ನೆಯ ಶತಮಾನ ದಲ್ಲಿಯೇ ಅವತರಿಸಿದ ಈ ಗದ್ಯಭಾಷೆಯ ವೈಯಾಕರಣರಿಗೆ ಗ್ರಾಂಥಿಕ ಪ್ರಯೋಗ ಗಳನ್ನು ಲಕ್ಷ್ಮವಾಗಿ ಇಟ್ಟು ಕೊಳ್ಳು ವುದಕ್ಕೆ ಗದ್ಯಗ್ರಂಥಗಳೇ ದೊರೆಯಲಿಲ್ಲ. ಅವರು ಕೇವಲ ವ್ಯಾವಹಾರಿಕ ಭಾಷೆಯನ್ನು ಸೂಕ್ಷ್ಮ ದೃಷ್ಟಿಯಿಂದ ನಿರೀಕ್ಷಿಸಿ, ತಮ್ಮ ವ್ಯಾಕ ರಣಗಳನ್ನು ರಚಿಸಬೇಕಾಯಿತು. ಆದಕಾರಣ ಇವರು ಗ್ರಾಂಥಿಕ ಪ್ರಯೋಗ ಗಳನ್ನು ಲಕ್ಷವಾಗಿಟ್ಟುಕೊಳ್ಳಲಿಲ್ಲ ಎಂಬ ದೋಷವೂ ಕ್ಷಮ್ಯವಾಗಿದೆ. ಇರಲಿ. ಇಷ್ಟೆಲ್ಲ ವಿವರಣೆಯ ಮತಾರ್ಥವೇನೆಂದರೆ, ಈ ಆಪ್ರಾಚೀನಕಾಲದ ಗದ್ಯ ಭಾಷೆಗೆ ಶಬ್ದಮಣಿದರ್ಪಣ, ಶಬ್ದಾನುಶಾಸನ ಮುಂತಾದ ಪ್ರಾಚೀನ ವ್ಯಾಕರಣ ಗಳೂ ಪ್ರಯೋಜನವಿಲ್ಲ : ನುಡಿಗಟ್ಟು, ವಾಗ್ವಿಧಾಯಿನಿ, ಶಬಾ ದರ್ಶ ಮುಂತಾದ ೧೯ನೆಯ ಶತಮಾನದ ವ್ಯಾಕರಣಗಳ ಪ್ರಯೋಜನವಿಲ್ಲ. ಆದುದರಿಂದ ನಾವು ಈಗ ಸರ್ವಾ೦ಗಸರಿಪೂರ್ಣವಾದ ಕನ್ನಡ ಗದ್ಯ ಭಾಷೆಯ ವ್ಯಾಕರಣವನ್ನು ಹೊಸ ವಾಗಿ ರಚಿಸಿಕೊಳ್ಳುವುದು ಆವಶ್ಯಕವಾಗಿದೆ. ನಾವು ಈಗ ಇಪ್ಪತ್ತನೆಯ ಶತಮಾನದಲ್ಲಿದ್ದೇವೆ. ಈ ಜ್ಞಾನಯುಗಕ್ಕನು ರೂಪವಾಗಿ ನಾವು ನಮ್ಮ ವಾಲ್ಮಯದ ಅಭ್ಯುದಯವನ್ನು ಮಾಡಿಕೊ ಕೈ ಬೇಕಾದರೆ, ನಮ್ಮ ಭಾಷೆಯ ನಿಯಮನಶಾಸ್ತ್ರನಾದ ವ್ಯಾಕರಣವು ವಾಯದ ಪುರೋವೃದ್ದಿಗೆ ಸಹಾಯಭೂತನಾಗುವಂತೆ ಪ್ರೌಢವಾಗಿರುವುದು ಅತ್ಯಾವಶ್ಯಕವಾಗಿದೆ. ಮನುಷ್ಯ ಪ್ರಾಣಿಗೆ ಯಾವಕಾಲದಲ್ಲಿಯಾದರೂ ನವನಾಗರಿಕತೆಯು ( 1-10-clita°11ss) ಅತ್ಯಂತ ಪ್ರಿಯಕರವಾದುದು, ಇದಕ್ಕೆ ನೃಪತುಂಗನೇ ಸಾಕ್ಷಿಭೂತನಾಗಿದ್ದಾನೆ. ಇವನು ತನ್ನ ಕವಿರಾಜಮಾರ್ಗ ಗ್ರಂಥದಲ್ಲಿ ಹೇಳುತ್ತಾನೆ : - ದೊರೆಕೊ೦ಡಿರೆ ಸೊಗಯಿಸುಗು೦! ಪುರಾಣ ಕಾವ್ಯ ಪ್ರಯೋಗದೊಳ್ ತತ್ಕಾಲ 0! ೭೫ (b