ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸpli ಚೈತನ: ಈ ನ್ಯಾ ಕ ರಣ ರಚನೆ. | ಕರ್ಣಾಟಕ ಸಾಹಿತ, .. ' .. - .. . . . . . .

  • - - : : : : : ........

ಎಂಬ ಸೂತ್ರದಲ್ಲಿ , “ಸಷ್ಟಿಯ ಕಾರಕ್ಕೆ ಕೆಲವರು ದೀರ್ಘಾದೇಶವನ್ನು ಒಪ್ಪುವರು. ಬೇರೆ ಕೆಲವರು ದೇವದೊಳಗೆ ಸಂಭ್ರಮದೊಳಗೆಮಾತ್ರ ಪ್ರಯೋಗಿ ಸುವರು.” ಎಂದು ಹೇಗೆ ನಿಯಮವನ್ನು ರಚಿಸಿರುವನೋ, ಹಾಗೆಯೇ “ಮೈಸೂರಿ ನವರು ವರ್ತಮಾನ, ಭೂತ, ಕೃದಂತಗಳಿಗೆ “ಉದ:' ಪ್ರತ್ಯಯವನ್ನು ಹಚ್ಚಿ, ನರ್ತ ಮಾನ, ಭೂತ ಕ್ರಿಯಾನಾಮಗಳನ್ನು ಮಾಡುತ್ತಾರೆ; ಧಾರವಾಡದವರು 'ದು' ಪ್ರತ್ಯಯವನ್ನು ಹಚ್ಚಿ ಮಾಡುತ್ತಾರೆ.” ಎಂದು ನಿಯಮವನ್ನು ರಚಿಸಬೇಕು. ಇವುಗಳಲ್ಲಿ ಯಾವುದು ಯಾರಿಗೆ ಸಮಂಜಸವಾಗಿ ತೋರುವುದೋ ಅವರು ಅದನ್ನು ಸ್ವೀಕರಿಸುವರು. ಯಾವಪ್ರಾಂತದಲ್ಲಿಯೇ ಆಗಲಿ ಲೋಕಮಾನ್ಯ ಗ್ರಂಥಕಾರರು ಯಾವಪ್ರಯೋಗಗಳನ್ನು ತನ್ನ ಬರೆವಣಿಗೆಯಲ್ಲಿ ಉಪಯೋಗಿಸಿದ್ದಾರೋ, ಅವು ಇತರ ಪ್ರಾಂತದವರಿಗೆ ಸರಿದೋರದಿದ್ದರೂ ವೈಯಾಕರಣರು ಅವುಗಳನ್ನು ಸ್ವೀಕರಿಸ ಲಿಕೇಬೇಕು, ತಿರಸ್ಕರಿಸಕೂಡದು. ಯಾವನಾದರೂ ಕ್ಷುದ್ರಬುದ್ದಿಯ ವೈಯಾ ಕರಣನು ಅಂತಹ ಲೋಕಮಾನ್ಯಗ್ರಂಥಕಾರರ ಪ್ರಯೋಗಗಳನ್ನು ತಿರಸ್ಕರಿಸಿದರೆ, ಅವನ ವ್ಯಾಕರಣವು ಸರ್ವಮಾನ್ಯವಾಗಲಾರದು. ಆದುದರಿಂದ ಶಬ್ದಮಣಿದರ್ಪಣದ ೧೭-ನೆಯ ಸೂತ್ರದ ಪ್ರಕಾರ ಎಲ್ಲಾ ಪ್ರಯೋಗ ಭೇದಗಳನ್ನೂ * ವ್ಯಾಕರಣದಲ್ಲಿ ಉಲ್ಲೇಖಿಸಬೇಕು, ಬೇಕಾದವರು ಬೇಕಾದಪ್ರಯೋಗಗಳನ್ನು ಸ್ವೀಕರಿಸಲಿ, ಅದಕ್ಕೆ ಲೇಶವೂ ಪ್ರತಿಬಂಧವಿರಕೂಡದು, ಹೀಗಾದರೆ ಸಂತೋಷದಿಂದ ಪ್ರಾಯಶ; ಎಲ್ಲರೂ ಒಂದೇವಿಧವಾದ ಪ್ರಯೋಗಗಳನ್ನೇ ಮೆಲ್ಲಮೆಲ್ಲನೆ ಉಪಯೋಗಿಸಲಾರಂಭಿ ಸುವರು. ವ್ಯವಹಾರದಲ್ಲಿ ನಾವು ಯಾವಶೈಲಿಯಿಂದ ಮಾತನಾಡುತ್ತೇವೆಯೋ, ಅದೇ ಸರಣಿಯಿಂದ ಬರೆಯುವುದೇ ಗದ್ಯವು. ಗದ್ಯವನ್ನು ಬರೆಯುವುದೆಂದರೆ, ವಾಚ ಕರಸಂಗಡ ಮಾತನಾಡುವುದು. ಆದುದರಿಂದ ನಾವು ಶುದ್ಧವಾದ ವ್ಯಾವಹಾರಿಕ ಭಾಷೆಯಿಂದ ಎಂದರೆ, ಭಾಷಣ ಸಂಪ್ರದಾಯಾನುಸಾರ (idiomatically)ವಾಗಿ ಗ್ರಂಥಗಳನ್ನು ಬರೆಯತೊಗಿದರೆ, ಆ ಭಾಷಾಸರಣಿಯು ಎಲ್ಲರಿಗೂ ಮಾನ್ಯವಾಗು ವುದು. “ ವ್ಯಾವಹಾರಿಕ ಭಾಷೆಯನ್ನು ಗ್ರಂಥಗಳಲ್ಲಿ ಉಪಯೋಗಿಸುವುದು " ಎಂಬ ವಾಕ್ಯವನ್ನು ನೋಡಿದಾಕ್ಷಣವೇ ಪುರಾಣಮತಾಭಿಮಾನಿಗಳು • ಭ್ರಷ್ಟಾ ಕಾರ " * ಭ್ರಷ್ಟಾಕಾರ' ಎಂದು ಆಕ್ರೋಶ ಮಾಡತೊಡಗುವರು! ವ್ಯಾವಹಾರಿಕ ಭಾಷೆ ಯನ್ನು ಗ್ರಂಥಗಳಲ್ಲಿ ಉಪಯೋಗಿಸುವುದೆಂದರೆ, ನಾವು ಮಾತನಾಡುವ ಭರದಲ್ಲಿ ಹೇಗೆ : ಬಂದೋಗು ' “ ತಗೊಂಡು,' ಬಾರೋಇಲ್ಲೆ' ಮುಂತಾದ ಅರುವ ಪ್ರಯೋಗ ಗಳನ್ನು ಉಪಯೋಗಿಸುತ್ತೇವೆಯೋ, ಇಂತಹ ಅಶುವ ಪ್ರಯೋಗಗಳನ್ನೇ ಗ್ರಂಥ ಗಳಲ್ಲಿ ಬರೆಯುವುದು ಎಂದು ಅವರು ತಿಯುತ್ತಾರೆ. ಹೀಗೆ ತಪ್ಪು ತಿಳಿದು ಕೊಂಡಿರುವುದರಿಂದಲೇ ಅವರಿಗೆ ಅಷ್ಟು ಕೋಪವು ಬರುತ್ತದೆ. ಈ ಸ್ಥಳದಲ್ಲಿ ಇನ್ನೊಮ್ಮೆ ಸಾರಿ ಹೇಳುತ್ತೇನೆ. ಅಶುದ್ಧವಾದ ಪ್ರಯೋಗಗಳನ್ನು ಲವಮಾತ್ರ ನಾದರೂ ಪ್ರಯೋಗಿಸದೆ, ಕೇವಲ ಶುದ್ಧವಾದ ವ್ಯಾವಹಾರಿಕ ಭಾಷೆಯಿಂದ, ನಾಕ್ಷಚಾರಸಹವರ್ತಮಾನವಾಗಿ ಬರೆಯುವುದೇ ಗದ್ಯ ಭಾಷೆ. ೭೯