ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಷ ಕೃತ್ತಿಕೆ. ವ್ಯಾಕರಣ ರಚನೆ. ೩ ೮ ಜೂಲೈ, ೧೯೧೮, - . , ಪದ್ಯ ರಚನೆಯನ್ನು ಕಲಿಸುವುದಕ್ಕೆ ಕಬ ಮಣಿದರ್ಪಣ, ಶಬ್ದಾನುಶಾಸನ ಮುಂತಾದ ವ್ಯಾಕರಣಗಳಿರುವುದಲ್ಲದೆ ಕವಿರಾಜಮಾರ್ಗ, ಕಾವ್ಯಾವಲೋಕನ, ಶೃಂಗಾರರತ್ನಾಕರ, ರಸರಾ ಕರಗಳೆಂಬ ಅಲಂಕಾರಶಾಸ್ತ್ರಗಳೂ ಛಂದೋಂಬುಧಿ, ಕವಿಜಿಹ್ವಾಬಂಧ, ಛಂದಸ್ಟಾರಗಳೆ೦ಬ ಛಂದಶ್ಯಾಸ್ತ್ರಗಳೂ ಇವೆ. ಆದರೆ ಗದ್ಯ ರಚ ನೆಯನ್ನು ಕಲಿಸುವುದಕ್ಕೆ ವ್ಯಾಕರಣ, ಅಲಂಕಾರಶಾಸ್ತ್ರ, ಗದ್ಯರಚನಾಶಾಸ್ತ್ರ ಮುಂತಾದ ಯಾವಸಾಧನಗಳೂ ಇರುವುದಿಲ್ಲ. ಇದುವರೆಗೆ ಗದ್ಯರಚನೆಯ ವ್ಯಾಕರಣವನ್ನು ಮಾತ್ರ ಹೇಗೆ ರಚಿಸಬೇಕೆಂಬುದನ್ನು ಪ್ರತಿಪಾದಿಸಿದೆನು. ಇನ್ನು ಗದ್ಯ ರಚನೆಯ ಅಲಂಕಾರಶಾಸ್ತ್ರವನ್ನೂ ಗದ್ಯರಚನಾಶಾಸ್ತ್ರವನ್ನೂ ಉಪಸಂಹಾರಾ ತ್ಮಕಭಾಷೆಯಿಂದ ವಿವೇಚಿಸಿ, ಈ ನಿಬಂಧವನ್ನು ಮುಗಿಸುತ್ತೇನೆ. ಗದ್ಯರಚನಾಶಾಸ್ತ್ರ ವಿಶಾರದರು ಬರೆದ ಗ್ರಂಥಗಳಲ್ಲಿ, ವಿಚಾರಸರಣಿಯು ಸುಗಮವಾಗಿಯೂ ಅಪ್ರತಿಬದ್ಧವಾಗಿಯೂ, ವರ್ಣನೆಯ ಸರಸವಾಗಿಯೂ ಇದು ದಿದ್ದಂತೆಯೂ ಇರುವದು. ಇವರು ಯಾವುದೊಂದು ವಿಷಯವನ್ನು ಕುರಿತು ಸ್ತುತಿಸಿದರೆ, ವಾಚಕರ ಹೃದಯದಲ್ಲಿ ತತ್ ಕ್ಷಣವೇ ಆ ವಿಷಯದಲ್ಲಿ ಗೌರವ ವುಂಟಾಗುವುದು; ನಿಂದಿಸಿದರೆ ತಿರಸ್ಕಾರವುಂಟಾಗುವುದು. ಇಂತಹ ಗದ್ಯರಚನಾಚಾತುರವಂಟಾಗಬೇಕಾದರೆ, ಈ ಶಾಸ್ತ್ರದ ನಿಯಮ ಗಳನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಇದೇ ವಿಷಯವನ್ನು ಈ ಸ್ಥಳದಲ್ಲಿ ಪ್ರತಿಪಾದಿಸಲಾರಂಭಿಸಿದ್ದೇನೆ. ಮೊದಲು ರಸಗಳ ವಿಷಯವಾಗಿ ವಿಚಾರಮಾಡುವ ....ಅಲಂಕಾರಶಾಸ್ತ್ರ ಜ್ಞರು ರಸಗಳಲ್ಲಿ ಶೃಂಗಾರರಸಕ್ಕೆ ಶ್ರೇಷ್ಟತ್ವವನ್ನು ಕೊಟ್ಟಿದ್ದಾರೆ. ಆದರೆ ಈ ನಿಯ ಮವ್ರ ಗದ್ಯಕ್ಕೆ ಸ್ವಲ್ಪವೂ ಅನ್ವಯಿಸಲಾರದು, ಸದ್ಯದ ಮುಖ್ಯಲಕ್ಷ ಮನೋ ರಂಜನವಾದುದರಿಂದ ಒಂದುವೇಳೆ ಶೃಂಗಾರಕ್ಕೆ ಪದ್ಯದಲ್ಲಿ ಪ್ರಾಧಾನ್ಯವು ದೊರೆಯಬಹುದು. ಆದರೆ ಗದ್ಯದಲ್ಲಿ ಶೃಂಗಾರರಸಪ್ರಾಧಾನ:ವು ಎಷ್ಟು ಮಾ ತ್ರಕ್ಕೂ ಸಲ್ಲುವುದಿಲ್ಲ. ಶಕ್ಯವೂ ಇಲ್ಲ. ಗದ್ಯದಲ್ಲಿ ಯಾವರಸವನ್ನಾದರೂ ಉತ್ತಟ ಶಬ್ದಗಳಿಂದ ಅಥವಾ ಸರಳರೀತಿಯಿಂದ ವರ್ಣಿಸಕೂಡದು, ಅದರೊಳಗೆ ಶೃಂಗಾರರಸದ ವರ್ಣನೆಯಂತೂ ತೀರ ಮುಗ ವಾಗಿರಬೇಕು, ಏಕೆಂದರೆ ಗದ್ಯದ ಮುಖ್ಯವಾದ ಉದ್ದೇಶವು ವಾಚಕರ ಮನಸ್ಸನ್ನು ತಮ್ಮ ಮತದ ಕಡೆಗೆ ಎಳೆದು ಕೊಳ್ಳುವುದಾಗಿದೆಯೇ ಹೊರತು ಪದ್ಯದಂತೆ ಚಿತ್ತವೃತ್ತಿಯನ್ನು ಸಂತೋಷಪಡಿಸುವು ದಲ್ಲ. ಇನ್ನು, ವೀರರಸದ ಮಾತಾದರೂ ಹೀಗೆಯೇಸರಿ, ಉತ್ಕಟವಾದ ವಾಕ್ಯ ಗಳಿಂದ ನೀರಸವನ್ನು ಆವಿಷ್ಯತನಾಡುವುದು ಗದ್ಯದಲ್ಲಿ ಶೋಭಿಸುವುದಿಲ್ಲ. ಇದೇ ಮೇರೆಗೆ, ಯಾರನ್ನಾದರೂ ಸರಳವಾದ ಅಥವಾ ಉತ್ಕಟವಾದ ಶಬ್ದಗಳಿಂದ ನಿಂದೆ ಯನ್ನು ಮಾಡುವುದು ಯೋಗ್ಯವಲ್ಲ. ಗ್ರಾಮಸಬ್ಬಗಳನ್ನಂತೂ ನಿಂದೆಯಲ್ಲಿ ಉಪ ಯೋಗಿಸಲೇ ಕೂಡದು. ಇದಿರಿಗೆ ನಿಂತು 'ಹಲ್ಲಿ' ಯನ್ನು ಹಾಕುವುದಕ್ಕಿಂತಲೂ ಮಗ್ಗುಲಿನಿಂದ ಹಲ್ಲೆಯನ್ನು ಹಾಕುವುದು ಬಹುಕಾರ್ಯಕಾರಿಯೆಂದು ಯುದ್ಧಶಾಸ್ತ್ರ ೮೦