ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಯುಕ್ತ ಸಂH ಚೈತ್ರಾಣಿ ದ್ದ, ವ್ಯಾಕರಣ ರಚನೆ. ಹ: 50 ಕರ್ಣಾ:ಕ ಸಾಹಿತ. ಜ್ಞರ ಅಭಿಪ್ರಾಯವೂ ಇದೆ. ತಾತ್ಪರ್ಯವೇನೆಂದರೆ, ಸರಳವೂ ಉತ್ಕಟವೂ ಆದ ವರ್ಣನೆಯನ್ನು ಮಾಡುವುದಕ್ಕಿಂತಲೂ ಅಲಂಕಾರಶಾಸ್ತ್ರಜ್ಞರು ಹೇಳುವ 'ಧ್ವನಿ' ಯನ್ನು ಉಪಯೋಗಿಸಿಬಿಟ್ಟರೆ, ಶೃಂಗಾರಾದಿ ಸರ್ವರಸಗಳಿಗೂ ಹೆಚ್ಚು ಬಿಗಿ ಬರುತ್ತದೆ. - ಇದುವರೆಗೆ ರಸಗಳ ವಿಚಾರವಾಯಿತು; ಇನ್ನು ಗುಣಗಳನ್ನು ಕುರಿತು ನಿರೂ ಪಿಸುವ:-ಮಮ್ಮಟನು ತನ್ನ ಕಾವ್ಯ ಪ್ರಕಾಶ" ದಲ್ಲಿ ಪ್ರಸಾದ, ಓಜ, ಮಾಧುರ್ಯ ಎಂಬ ಮೂರು ಗುಣಗಳನ್ನು ಹೇಳಿದ್ದಾನೆ. ಇವುಗಳಲ್ಲಿಯೂ ಗದ್ಯ ಪದ್ಯಗಳೆಂಬ ಸೂಕ್ಷ್ಯಭೇದದೆ, ಗದ್ಯದ ನಿಯಮಗಳನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ. ಗದ ಕೈ ಪ್ರಸಾದಯುಕ್ತವಾದ ಭಾಷೆಯು ಆವಶ್ಯ- ಕವಾಗಿದೆ. ವಾಚಕರ ಮನ ಸಿನಲ್ಲಿ ಒಮ್ಮಿಂದೊಮ್ಮೆ ಹೊಳೆಯುವಂತೆ, ವಾಕ್ಯರಚನೆಯು ಸುಗಮವಾಗಿರಬೇಕು : ಕ್ಲಿಷ್ಟವಾಗಿರಕೂಡದು, ಶಬ್ದಗಳು ಸುಲಭವಾದುವುಗಳೂ ಪ್ರತಿನಿತ್ಯದ ಪ್ರಚಾರ ದೊಳಗಿನವೂ ಆಗಿರಲಿಕ್ಕೆ ಬೇಕು. ಹೀಗಾದರೆ ಅಲ್ಲಿ ಪ್ರಸಾದಗುಣವು ವ್ಯಕ್ತವಾಗು ವುದು. ಈಗುಣವನ್ನು ಸಾಧಿಸುವುದಕ್ಕೆ ಇನ್ನೊಂದೆರಡು ನಿಯಮಗಳುಂಟು. ಅವು ಯಾವುವೆಂದರೆ, ಒಂದನೆಯದು ಪುನರುಕ್ತಿ, ಯಾವುದೊಂದು ವಿಷಯವೇ ಆಗಲಿ ವಾಚಕರ ಮನಸ್ಸಿನಲ್ಲಿ ಬಿಂಬಿಸುವುದಕ್ಕಾಗಿ ಆ ವಿಷಯದ ಪುನರುಕ್ತಿಯನ್ನು ಮಾಡು ತಿರಬೇಕು: ಎಂದರೆ ಆ ಒ೦ದು ವಿಷಯವನ್ನೇ ವಿಸ್ಕೃತರೀತಿಯಿಂದ ಎರಡು ಮೂರು ಸಲ ಹೇಳಬೇಕು, ಆದರೆ ಶಬ್ದ ಗಳ ಅಥವಾ ವಾಕ್ಯಗಳ ಪುನರುಕ್ತಿಯನ್ನು ಮಾತ್ರ ಮಾಡಕೂಡದು, ಏಕೆಂದರೆ, , ಇಂತಹ ಪುನರುಕ್ತಿಯು ದೋಷಾರ್ಹ ನಾದುದು. ಒ೦ದೇವಿಷಯವನ್ನೆ ಬೇರೆಬೇರೆ ರೀತಿಯಿಂದ ಹೇಳುವ ಶೈಲಿಯನ್ನು ಗ್ರಂಥಕಾರನು ಕಲಿಯುವುದು ಆವಶ್ಯಕವಾಗಿದೆ, ಮೊದಲು ಒಂದು ಚಿಕ್ಕ ವಿಧಾನ ವನ್ನು ಮಾಡಿ, ಮುಂದೆ ಅದನ್ನು ಮೆಲ್ಲಮೆಲ್ಲನೆ ವಿಸ್ತಾರವಾಡುತ್ತ ಸಾಗುವುದೂ ಒಂದುತರದ ಪುನರುಕ್ತಿಯೇಸರಿ, ವಿಷಯವನ್ನು ವಿಶದಮಾಡುವ ಇನ್ನೊಂದು ಮಾರ್ಗವು ಯಾವುದೆಂದರೆ, ದೃಷ್ಟಾಂತಗಳನ್ನು ಕೊಡುವುದು, ಐತಿಹಾಸಿಕ ಇಲ್ಲವೆ ಕಲ್ಪಿತ ಉದಾಹರಣೆಗಳನ್ನು ಕೊಡುವುದರಿಂದ ಸಿಷಯವು ವಾಚಕರ ಮನಸ್ಸಿನಲ್ಲಿ ಚೆನ್ನಾಗಿ ಬಿಂಬಿಸುವುದು. ಉದಾಹರಣ, ದೃಷ್ಟಾಂತ, ನಿದರ್ಶನ ಮುಂತಾದ ಬೇರೆ ಬೇರೆ ಛಾಯೆಗಳು ಇವೇಮಾರ್ಗದಪ್ರ, ಸಮಯೋಚಿತವಾದ ದೃಷ್ಟಾಂತವನ್ನು ಕೊಟ್ಟು, ನಿಷಯವನ್ನು ಸುಗಮವಾಗಿ ಮಾಡುವುದು ಪ್ರತಿಭೆಯ ಕೆಲಸವೇ ಸರಿ ; ಏಕೆಂದರೆ, ಯೋಗ್ಯವೂ ಹೃದಯಂಗಮವೂ ಆದ ದೃಷ್ಟಾಂತಗಳು ಪ್ರತಿಭೆಯಿದ್ದ ಹೊರತು ನೆನಪಾಗುವುದಿಲ್ಲ. ಗದ ಭಾಷೆಯು ಪ್ರಸಾದಯುಕ್ತವficಬೇಕಲ್ಲದೆ ಓಜೋಗುಣಯುಕ್ತವೂ ಆಗಿರಬೇಕು, ಓಜೋಗುಣಯುಕ್ತ ಭಾಷೆಯೆಂದರೆ, ಬಿಗಿಯಾದ ಸಮಾಸಗಳೊಡನೆ ಕೂಡಿದ ಭಾಷೆ, ಭಾಷೆಯಲ್ಲಿ ಈ ಓಜೋಗುಣವುಂಟಾಗುವಂತೆ ಮಾಡುವುದಕ್ಕೆ ಕೆಲವು ಉಪಾಯಗಳಿವೆ, ಅವುಗಳನ್ನು ಇಲ್ಲ ಸಿನೇದಿಸುತ್ತೆ.