ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನತ್ರಕೆ. ಆಧುನಿಕ ಮಹಾ ರಾಷ್ಟ್ರ ಸಾಹಿತ್ಯ, ಸಿ೮-ರ್ಜಲೈ ೧೯೧೮. -೯೧೮ , -ರುವುದಲ್ಲ. ನೂರು ನೂರೈವತ್ತು ವರ್ಷಗಳಲ್ಲಿ ಮಹತ: ಕಪಿಗಳ ವಾಲ್ಮಯ ನಂತೂ ಒತ್ತಟ್ಟಿಗಿರಲಿ ಎರಡನೆಯ ಪ್ರತಿಯ ಕಪಿಗಳಾದರೂ ಆಗುವುದು ಯಾವ ನಾಡಿನಲ್ಲಿಯೂ ಅರಕನೆಂದು ಪೂರ್ವದ ಇತಿಹಾಸಗಳಿ೦ದ ಕಂಡುಬಂದಿದೆ. ಜ್ಞಾನೇಶ್ವರ, ಮುಕೇಶ್ವರ, ರಾಮವಾಸ ಇಂತಹ ಮಹಾ ಕವಿಗಳಾಗಲು ಮರಾಠಿಯ ನಾಡಿಗೆ ೫೦೦-೬೦೦ ವರ್ಷಗಳು ಹಿಡಿದು ವು, “ ಪಸರಿಪ ಕನ್ನಡಕೊಡೆಯನೊರ್ವನೆ ಸತ್ಕವಿ " ಯಾದ ಸಂಪನು ಹುಟ್ಟಲಿಕ್ಕೆ ಕನ್ನಡ ವಾಲ್ಮಯಕ್ಕೆ ಸಾವಿರ ವರ್ಷಗಳು ಹಿಡಿದುವು. ಸ೦ಸನ ಅನಂತರ ಸಾವಿರ ವರ್ಷಗಳ ಕಾಲದಲ್ಲಿ ಅವನಂತಹವನು ಆವನೂ ಆಗಲಿಲ್ಲವೆಂದು ಅವನ ಅನಂತರದ ಎಲ್ಲ ಕನ್ನಡ ಮಹಾಕವಿಗಳೂ, " ಕರ್ಣಾಟಕ ಕವಿಚರಿತೆ " ಯ ಕರ್ತರೂ ಹೇಳುವರು. ಸಂಸ್ಕೃತದಲ್ಲಿ ಮತ್ತೊಬ್ಬ ಕಾಳಿದಾಸನೂ, ಇಂಗ್ಲಿಷಿನಲ್ಲಿ ಮತ್ತೊಮ್ಮೆ ಜೇಕ್ಸ್ ಪಿಯರೆ ಈವರೆಗೂ ಆಗಲಿಲ್ಲ. ಎಂದಮೇಲೆ ಜಗನ್ನಿಯಾಮಕನ ಇಚಾ ನುಸಾರವಾಗಿ ಕಾವ್ಯವು ಬೇಕಾದಾಗ ಬೇಕಾದಲ್ಲಿ ಮಿಂಚಿನಂತೆ ಹೊಳೆಯುವುದೇ ಸತ್ಯವಾಗಿದೆ. ಮನುಷ್ಯ ಪ್ರಯತ ಗಳಿ೦ದ ಅದೆಂತು ಸಾಧನೆ ? ಗದ್ಯ- ದಲ್ಲಿ ಬರೆಯುವ ಸಂಪ್ರದಾಯವು ಇತ್ತಣದು. ಪೂರ್ವದಲ್ಲಿ ಕವಿಗಳೇ ವಿಶೇಷವಾಗಿ ವಿಶ್ವಜ್ಞನ ಪ್ರಾಂಗಣದಲ್ಲಿ ಬರುತ್ತಿದ್ದರು. ಈಗ ಆ ಯುಗವೆಲ್ಲ ಹೋಗಿ ಸಾಧಾರಣವಾಗಿ ಮಾತಾಡುವಂತೆ ಬರೆಯುತ್ತ ಹೋಗುವ ಪದ ತಿ ವಾಡಿಕೆಯಾಗಿರುವುದರಿಂದ ಬಹಳ ಅನುಕೂಲವಾಗಿದೆ. ಅತ್ಯ೦ತ ಅನು ಕೂಲವೂ, ಅಭಿನವವೂ ಆದ ಈ ಗಪ್ಪ ವಾ ಯದೊಳಗಿನ ಮರಾಠಿಯ ಭಾಗದ ನಿಷಯವಾಗಿ ಇಲ್ಲಿ ವಿಚಾರಮಾಡಿದೆ. ಮಹಾರಾಷ್ಟ್ರನಾಯವು ಮೂರುಲೋಕಕ್ಕೂ ಆಶಿಂಕಾರನೆನಿಸಿಕೊಂಡಿದೆ. ಹಿಂದುಸ್ತಾನದಲ್ಲಿ ಗದ್ರಕ್ಕೆ ಅಗ್ರಸ್ಥಾನಹೊಂದಿದ ಭಾಷೆಯು ಬಂಗಾಲಿಯಾಗಿದ್ದು ಅದರ ತರುವಾಯ ಮರಾಠಿಯೇ ಎಂದು ಬಹುಜನರು ಒಸ್ವತ್ತಿರುವರು. ಶ್ರೀ ಸಮರ್ಥ ರಾಮದಾಸರ " ದಾಸಬೋಧ "ದ ಕಾಲದಲ್ಲಿ ಮರಾಠಿಯು ಬಂಗಾಳಿಗೂ ಮೇಲಾಗಿತ್ತು. ಕನ್ನಡವು ಸಂಪನ ಆದಿಪುರಾಣದ ಕಾಲದಲ್ಲಿ ಸಮಸ್ಯಕೃತಿಗೆ ಒಂದೇ ಅಲ೦ಕಾರವಾಗಿ ಆ ಸಮುದ್ರಂಬರೆಗಂ ಪ್ರಸಿದ್ಧಿ ಹೊಂದಿತ್ತು, ಈಗ ಶ್ರೀರವೀಂದ್ರ ನಾಥ ಟಾಗೋರನರು “ ಗೀತಾಂಜಲಿ " ಎ೦ಬ ಸ್ವತಂತ್ರ ಕಾವ್ಯವನ್ನು ದೇಶಭಾಷೆ ಯಲ್ಲಿ ಬರೆದು ಪಾಶ್ಚಾತ್ಯರಿಂದ ದೊಡ್ಡ ಸಂಭಾವನೆ (Noblk: }riz.) ಯನ್ನು ಪಡೆದುದರಿಂದಲೂ, ಎಷ್ಟೋ ಬಂಗಾಳಿಯ ಕಥೆಗಳು ಇಂಗ್ಲೀಷಿನಲ್ಲಿ ಸಹ ಭಾಷಾಂ ತರವಾದುದರಿಂದಲೂ, ಬಂಗಾಳಿಯ ಸಾರಸ್ವತ, ಮರಾಠಿಗಿ೦ತ ಮೇಲಾಯ್ತು. ಆದರೆ ಮರಾಠಿಗರ ಸಾಸನೇನೂ ಕಡಮೆಯಲ್ಲ. ಇದಕ್ಕೂ ಮೊದಲೇ “ ಅಣ್ಣಾ ಮೋರೇಶ್ವರಕುoಟೇ" ಎಂಬವರು “Sicissitutdics 1) tha: Srya (ivilizations” ಎಂಬ ಪ್ರಬಂಧವನ್ನು ಬರೆದು ಸಾಶಾ ತರಿಂದ `ಬಹುಮಾನವನ್ನು ಪಡೆದಿರುವರು. ಪೂಜ್ಯರಾದ ರಾನಡೆಯವರು * JRist of tlic: Maratha Power " ಎಂಬ ಗ್ರಂಥ ವನ್ನು ಬರೆದು ಇಂಗ್ಲಿಷರಿಗೆ ಮಾರ್ಗ ಪ್ರದರ್ಶಕರಾದರು. “ ನಿಬಂಧಮಾಲಾ” ಕರ್ತರಾದ ವಿಷ್ಣು ಶಾಸ್ತ್ರಿ ಚಿಪಳೂಣಕರವರು ಎಲ್ಲರ ಮೇಲೆ ಕೈಮಾಡಿ ತಮ್ಮ ಅತ್ಯು ೮೬