ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ೦|| ಚೈತಾಷಾಢ ಆಧುನಿಕಮಹಾರಾಷ್ಟ್ರ ಸಾಹಿತ್ಯ, –....... ..... | ಕರ್ಣಾಟಕ ಸಾಹಿತ್ಯ - * * ** - -... -.-... - - - ಜೂಲಪ್ರತಿಭಾಶಾಲಿಯಾದ ಬರೆವಣಿಗೆಯಿಂದ ಮರಾಠಿಗೆ ಹೊಸಸ್ವರೂಪವನ್ನು ಕೊಟ್ಟು ಜನರಲ್ಲಿ ಆತ್ಮವಿಶ್ವಾಸವನ್ನೂ ಸ್ವಾಭಿಮಾನವನ್ನೂ ನೆಲೆಗೊಳಿಸಿದರು, ಆದರೆ ವಿದ್ಯಚ್ಛಿರೋಮಣಿಗಳೂ ನರಕೇಸರಿಗಳೂ ಆದ ಶ್ರೀ ಬಾಳಗಂಗಾಧರ ತಿಲಕರ ತೇಜವೇನೋ ಅಪೂರ್ವವಾಗಿತ್ತು. ಅದು ಮೊಟ್ಟ ಮೊದಲು ವಿಷ್ಣು ಶಾಸ್ತ್ರಿಯವರಂತೆ ಪೂರ್ವವಯಸ್ಸಿನಲ್ಲಿ ವ್ಯಕ್ತವಾಗಲಿಲ್ಲ. “ Orion " “ Arctic Honc in the Vedas ” ಮೊದಲಾದ ಇಂಗ್ಲಿಷ್ ಗ್ರಂಥಗಳನ್ನು ಪಾಶ್ಚಾತ್ಯರೆಲ್ಲರೂ ಕೊಂಡಾಡಿದರು. ಇನ್ನೂ ತಿಳಕರವರ ಬುದ್ಧಿಯ ಕಳಸವಾಗುವುದುಳಿದಿತ್ತೋ ಏನೋ ಎನ್ನುವಂತೆ ಅವರು ಲೋಕವಿಖ್ಯಾತವಾದ “ ಗೀತಾರಹಸ್ಯ ' ಎಂಬ ಗ್ರಂಥವನ್ನು ತಮ್ಮ ದೇಶ ಭಾಷೆಯಲ್ಲಿ ಬರೆದು ಮರಾಠಿಗರೆಲ್ಲರನ್ನೂ ಋಣಿಗಳಾಗಿ ಮಾಡಿದ್ದಾರೆ. ಮರಾಠಿಯು ಇಷ್ಟು ಮುಂದುವರಿಯಲು ಕಾರಣವಾವುದೆಂಬುದನ್ನು ಕೇಳಿ ಆಶ್ಚರ್ಯವಾಗಬಹುದು, ಹಿಂದಿನಿಂದ ಈವರೆಗೂ ಮರಾಠಿಗರಿಗೆ ರಾಜಾಶ್ರಯ ವೆಂದರೇನೋ ಗೊತ್ತೇ ಇಲ್ಲ. ಮರಾಠಿಗಿಂತ ಕನ್ನಡವು ಸಾವಿರವರ್ಷ ಹಿರಿಯದು. ಕನ್ನಡನಾಡುಗಳಲ್ಲಿ ಪಂಡಿತರಿಗೆ ಆಶ್ರಯವು ವಿಶೇಷ. ಸ್ಥಿತಿಯು ಕಠಿನವಾದರೂ ಮರಾಠಿಗರು ಕಾರ್ಯದ ಮಹತ್ವವನ್ನು ಮರೆಯದೆ ರಾಮದಾಸರೇ ಮೊದಲಾದವರ ದಿವೋಪದೇಶವನ್ನು ನೆನಪಿನಲ್ಲಿ ಇಡುತ್ತಲೇ ಬಂದಿರುವರು. ಇತಿಹಾಸಸಂಶೋಧಕ ರಾದ ರಾಜವಾಡೆ, ಬಿ. ಎ. ಎಂಬವರು ಒಮ್ಮೆ " ಭಿಕ್ಷಾವೃತ್ತಿಯನ್ನು ಅನುಸರಿಸಿ ಯಾದರೂ ನಾನು ನನ್ನ ಕೆಲಸವನ್ನು ನಡೆಯಿಸಲು ಸಿದ್ಧನಾಗಿದ್ದೇನೆ” ಎಂದರು. ಪುಣ್ಯ ಪತನದ ಫರ್ಗ್ಯೂಸ್ರ ಕಾಲೇಜ್‌ ರ್ಪ್ರಿಸಿಪಲರಾದ ಸೀನಿಯರ್ ರಾಂಗ್ಲರ್‌ ಪರಂಜಪೆಯವರು ದುಡ್ಡಿನ ಆಸೆಯನ್ನು ಬಿಟ್ಟು ದೇಶೀಯ ಸಂಸ್ಥೆಯನ್ನು ಅಲ್ಪ ವೇತನ ದಲ್ಲಿ ನಡೆಯಿಸುತ್ತಲಿದ್ದಾರೆ. ಅವರ ಸೋದರಮಾವಂದಿರಾದ ಕರ್ವೆಯವರು ಸ್ತ್ರೀಶಿಕ್ಷಣ ಕಾರ್ಯಕ್ಕೆ ಸರ್ವಸ್ವವನ್ನೂ ಅರ್ಪಿಸಿದ್ದಾರೆ. ಕಾರ್ಯವು ಅರ್ಧ ಉಳಿದರೆ ಮತ್ತೆ ಹುಟ್ಟಿ ಅದೇ ಕೆಲಸವನ್ನು ಕೈಕೊಳ್ಳು ವೆವೆಂದು ಅವರು ಸಾರಿ ಹೇಳುವುದನ್ನು ನೋಡಿದರೆ ಕೆಲಸದ ಮಹತ್ವವು ಮರಾಠಿಗರಿಗೆ ಎಷ್ಟಿದೆ ಎಂಬುದು ತಿಳಿಯ ಬರುತ್ತದೆ. ಸ್ವರ್ಗಸ್ಥರಾದ ಆಗರಕರ್ ಎಂಬವರು ತೀರಬಡತನದ ಸ್ಥಿತಿಯಲ್ಲಿ ಅಭ್ಯಾಸಮಾಡಿ ಎಮ್. ಏ. ಪದವಿಯನ್ನು ಗಳಿಸಿದಮೇಲೆ ತಿಂಗಳೊಂದಕ್ಕೆ ಐನೂರು ರೂಪಾಯಿಗಳ ಕೆಲಸ ಬಂದರೂ ತೊರೆದು ಸಮಾಜದ ಸುಧಾರಣಕಾರ್ಯ ದಲ್ಲಿ ಮನಸ್ಸು ಕೊಟ್ಟು ಹೇರಳವಾದ ಹಾನಿಯನ್ನೂ ಅಸಹ್ಯವಾದ ಅಪಮಾನವನ್ನೂ ಸಹಿಸಿದರು. ಈ ಉದಾಹರಣಗಳನ್ನು ನೋಡಲಾಗಿ ಮಹಾರಾಷ್ಟ್ರೀಯರು ತಮ್ಮ ಪೂಜ್ಯಪೂರ್ವಜರಾದ ಸಾಧುಸಂತರ ಪರೋಪಕಾರ, ದೇಶಾಭಿಮಾನ, ಸ್ವಾರ್ಥ ತ್ಯಾಗ, ಮುಂತಾದಗುಣಗಳನ್ನು ಮರೆತಿಲ್ಲವೆಂದು ತಿಳಿಯಬರುತ್ತದೆ. - ಅಖಿಲಮಹಾರಾಷ್ಟ್ರೀಯರಿಗೆ ಸದ್ದು ರುನಾದ ವಿಷ್ಣು ಶಾಸ್ತ್ರಿಯವರ ವಿಷಯ ನಾಗಿ ಕೆಲವುಮಾತುಗಳನ್ನು ಹೇಳಬೇಕು, ಇವರ ಚರಿತೆಯನ್ನು ಇವರ ತಮ್ಮ ದಿರೇ, ಬಾಸವೆಲನು ರ್ಜಾರ್ಪಸಾಹೇಬರ ಚರಿತೆಯನ್ನು ಬರೆದರೀತಿಯಲ್ಲಿ ಬರೆ ದಿದ್ದಾರೆ. ಈ ಮಹನೀಯರು ಮಹಾರಾಷ್ಟ್ರ ಭಾಷೆಯನ್ನು ವಿಶೇಷವಾಗಿ ಕೈಕೊಂಡು ೮೭ 2