ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕೆ. ಆಧುನಿಕ ಮಹಾ ರಾಷ್ಟ ಸಾಹಿತ, ಏಪ್ರಿಲ್ , ಜೂಲೈ ೧೯೧೮. ಮಹಾರಾಷ್ಟ ದೇಶವನ್ನೆಲ್ಲ ಬೆಳಕುಮಾಡಿದರು. ಮೆಕಾಲೆಸಾಹೇಬರಂತೆ ಏಕಪಕ್ಷ ವಿಚಾರಪದ್ದತಿಯನ್ನು ಇವರು ಅನುಸರಿಸಿದುದರಿಂದ ಕೆಲವರು ಇವರನ್ನು ದೂಷಿಸು ವರು. ಆದರೆ ಏಕಪಕ್ಷವಿಚಾರವು ಭಾಷೆಯ ಅಲಂಕಾರವೇ ಎಂದು ಹೇಳ ಬಹುದು. ಇವರ ' ಕೇಸರೀ ” ಪತ್ರವನ್ನೂ ಮರಾಠಿಗ್ರಂಥರಚನೆಯನ್ನೂ ಬಳವಂತ ರಾನ್ ಟಿಳಕರು ಮುಂದೆ ನಡೆಯಿಸಿದ್ದಾರೆ.' ಈ ಆಧುನಿಕಸಾಹಿತ್ಯದ ಸಾಧಾರಣ ಸ್ವರೂಪವನ್ನು ಹೇಳಬೇಕಾದರೆ ಗಂಭೀರವೂ, ವಿಲಾಸಶಾಲಿಯೂ ಆದ " ನಿಬಂಧಮಾಲೆಯ “ ಸ್ವರೂಪ: ಮೊದಲು ಕಣ್ಣಿಗೆ ಬೀಳುತ್ತದೆ. ಈಚಿನ ವಯಕ್ಕೆ " ನಿಬಂಧಮಾಲೆ " ಯಿಂದಲೇ ಆರಂಭ ವಾದುದು, ಇದು ವ್ಯಕ್ತವಾಗಬೇಕಾದರೆ ಬುದ್ಧಿವಂತರಾದ ವಿಷ್ಣು ಶಾಸ್ತ್ರಿಯವರ ೮-೧೦ ವರ್ಷಗಳ ಉದ್ಯೋಗವು ಬೇಕಾಯ, ಇಂತಹ ಉದ್ಯೋಗವು ಪಾಶ್ಚಾತ್ಯ ರಲ್ಲಿಯೂ ದುರ್ಲಭವಾಗಿದೆ. ಅಲ್ಲಿ ಅನೇಕರು ಕೂಡಿ ಒಂದು ಕೆಲಸವನ್ನು ಕೈಕೊಳ್ಳು ವರು, “ ನಿಬಂಧಮಾಲೆ " ಕೇವಲ ಒಬ್ಬರ ಕೆಲಸವೇ ಆಗಿದೆ. ಇದಕ್ಕಾಗಿ ಅವರು ಸುಖವಾದ ಸರಕಾರಿ ಕೆಲಸವನ್ನು ಬಿಟ್ಟು ಬಿಟ್ಟರು. ಮುಂದಿನ ಗ್ರಂಥಮಾಲೆಯೂ ಹೀಗೆಯೇ ಸಂಪಾದಕರಿಗೆ ಬಹಳವಾಗಿ ಹಾನಿಯನ್ನುಂಟುಮಾಡಿದೆ. ಚಿಪಳೂಣಕರ್, ಆಗರಕರ್ ಇವರ ಪ್ರತಿಭಾಶಾಲಿಗಳಾದ ಸರಣಿಗಳು ನಮ್ಮಲ್ಲಿ ಬರಬೇಕೆಂದು ನಾನು ಇಚ್ಚಿಸುತ್ತೇನೆ. ಮರಾಠಿಗರು ಈ ಸರಣಿಗಳನ್ನು ಈಗಲೂ ಆದರ ಪುರಸ್ಸರವಾಗಿ ಸ್ತುತಿಸುತ್ತಿರುವರು. - ಮಹಾರಾಷ್ಟ್ರ ಭಾಷೆಯಲ್ಲಿ ನವೀನಗ್ರಂಥಗಳ ದೃಷ್ಟಿಯಿಂದಲೂ ಅದ್ವಿತೀಯ ವಾದ ಪ್ರಗತಿಯಾಗಿದೆ. ಐತಿಹಾಸಿಕ ಸಂಶೋಧನನೇ ತನ್ನ ಸರ್ವಸ್ವವೆಂದು ತಿಳಿ ಯುವ ರಾಜವಾಡೆಯವರ ಪ್ರಯತ್ನಗಳಿಗೆ ಬೆಲೆಯೇ ಇಲ್ಲ. ಮುಂಬಯಿ ಸರಕಾರ ದವರು ಇವರಿಗೆ ವರ್ಷಕ್ಕೆ ಒ೦೦ ರೂಪಾಯಿಗಳನ್ನು ಕೊಡಬೇಕೆಂದು ಗೊತ್ತು ಮಾಡಿ ರುವರು. ಪೂಜ್ಯರೂ ವಿದ್ಯಾಪ್ರಿಯರೂ ಆದ ಬಡೋದೆಯ ಶ್ರೀಮಂತ ಸಯಾಜಿ ರಾವ್ ಗಾಯಕವಾಡರ ಸರಕಾರದ ಆಶ್ರಯದಲ್ಲಿ ಬಳೆದು, ಮಹಾರಾಜನೊಡನೆ ಪಶ್ಚಿಮದೇಶಸಂಚಾರಮಾಡಿ ಅನೇಕ ದಿನಗಳವರೆಗೆ ಗ್ರಂಥಾವಲೋಕನವನ್ನು ಮಾಡಿ « ಹಿಂದುಸ್ಥಾನದ ಅರ್ವಾಚೀನೇತಿಹಾಸ " ಗಳೆ೦ಬ ಪುಸ್ತಕಗಳನ್ನು ಶ್ರೀ ಸರದೇ ಸಾಯಿಯವರು ಬರೆಯಲಾರಂಭಿಸಿರುವರು. ಇಂತಹ ಇತಿಹಾಸಗಳೂ, ಶಿಲಾ ಲೇಖವೇ ಮೊದಲಾದುವುಗಳ ಮೇಲಿಂದ ವಿಜಯನಗರದ ಸಾಮ್ರಾಜ್ಯವೇ ಮೊದ ಲಾದ ಕರ್ಣಾಟಕದ ಪ್ರಾಚೀನೇತಿಹಾಸಗಳೂ ಕನ್ನಡದಲ್ಲಿ ಆಗಬೇಕಾಗಿವೆ. ರಾ|| ರಾ|| ಪಾಂಗಾರಕರೆಂಬವರು ೧೦ -೧೨ ವರ್ಷಗಳವರೆಗೆ ಅವಿಶ್ರಾಂತಶ್ರಮವನ್ನು ವಹಿಸಿ “ ಮೋರೋಪಂತಚರಿತೆ ಮತ್ತು ಕಾವ್ಯವಿವೇಚನೆ " ಎಂಬ ಕವಿತಾಸೃಷ್ಟಿಯಲ್ಲಿ ಅಪೂರ್ವವಾದ ಗ್ರಂಥವನ್ನು ಬರೆದಿರುವರು. ಒಬ್ಬ ಕವಿಯ ಇಷ್ಟು ವಿಸ್ತ್ರತ ವಾದ ಚರಿತೆ ಕನ್ನಡದಲ್ಲಿಲ್ಲ. ಆದರೆ, ನಮ್ಮಲ್ಲಿ ಮಹನೀಯರಾದ ನರಸಿಂಹಾ ಚಾರ್ಯಧ್ವಯರು ಬರೆದಿರುವ " ಕರ್ಣಾಟಕ ಕಪಿಚರಿತೆ ” ಯಂತಹ ನಾ ಸಕಗ್ರಂಥ تن