ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳಯುಕ್ತ ಸ°|| ಜೈ 3ಸಾಥ ಆಧುನಿಕ ಮಹಾರಾಷ್ಟ್ರ ಸಾಹಿತ್ಯ,

ಕರ್ಣಾಟಕ ಸಾಹಿತ್ಯ

೪ ಟ ವಾಗಲು ಮರಾಠಿಯಲ್ಲಿ ಪೂರ್ವಕವಿಗಳ ಸಂಖ್ಯೆ ಸ್ವಲ್ಪವಾಗಿದೆ. " ಮಹಾರಾಷ್ಟ್ರಕವಿ ಚರಿತ ” ಗಳೆ೦ಬ ಗ್ರಂಥಗಳು ಕೆಲವಿವೆ. ಪ್ರಾಚೀನಮರಾಠಿಯಲ್ಲಿ ನನಗಿಂತಲೂ ಕವಿತ್ವವು ಕಡಮೆಯಾದರೂ ಪ್ರಸಿದ್ದವಾದ ಎಲ್ಲ ಕಾವ್ಯಗಳೂ ಅಚ್ಚಾಗಿವೆ. ಮೋರೋಪಂತರ ಸ್ವಹಸ್ತಲಿಖಿತ ಗ್ರ೦ಥಗಳು ಮೊದಲುಗೊಂಡು ದಾಸಬೋಧಾದಿ ಹಳೆಯ ಗ್ರಂಥಗಳೆಲ್ಲವೂ ಮುದ್ರಿತ ವಾಗಿವೆ. ಮೋರೋಪಂತನ “ ಕೇ ಕಾನ " ಗಳ೦ತಹ ಕೆಲವು ಕಠಿನಕಾವ್ಯಗಳನ್ನು ಸಟೀಕನಾಗಿ ಮುದ್ರಿಸುವ ಉಪಕ್ರಮವು ಬಹಳ ಚೆನ್ನಾಗಿದೆ, ನಮ್ಮಲ್ಲಿ ಎಷ್ಟೋ ಗ್ರಂಥಗಳು ಇನ್ನೂ ಅಚ್ಚಾಗಿಲ್ಲ. ಆದರೂ ಅವುಗಳ ಸಾಧಾರಣಸ್ವರೂಪವನ್ನಾದರೂ ತಿಳಿಸುವ ಪ್ರೌಢಪದ್ಯಸಾರಗಳು ಕೆಲವು ಬೇಕಾಗಿವೆ. ಸಾವಿರಾರು ವರ್ಷಗಳ ಪೂರ್ವದ ಹಳಗನ್ನಡಶಬ್ದಗಳು ಎಲ್ಲರಿಗೂ ಹೇಗೆ ತಿಳಿಯಬೇಕು ? ಕೆಲವು ಉತ್ಕೃಷ್ಟ ಕಾವ್ಯಭಾಗಗಳು ಸಟೀಕನಾಗಿ ಬೇಕಾದಿವೆ. ಇದರಿಂದ ಸಂಪಾದಿಗಳಲ್ಲಿ ವಿಶೇಷ ಆಸಕ್ತಿ ಹುಟ್ಟಬಹುದು. ಮರಾಠಿಯಲ್ಲಿ ಪೂರ್ವದ ವ್ಯಾಕರಣವಿಲ್ಲದಿದ್ದರೂ “ದಾಮಲೆ" ಎಂಬವರು ಒಂದು ದೊಡ್ಡ ವ್ಯಾಕರಣವನ್ನು ಬರೆದಿದ್ದಾರೆ. ನಮ್ಮಂತೆಯೇ ಮರಾಟ ಯಲ್ಲಿಯೂ ಭಾರತರಾಮಾಯಣಗಳ ಸಮಗ್ರವಾದ ಭಾಷಾಂತರಗಳು ಸಾವಿರಾರು ರೂಪಾಯಿಗಳ ವೆಚ್ಚದಿಂದ ಆಗಿವೆ. ಸಕಲ್ಪಿತ ಕಥೆಗಳೂ, ನಾಟಕಗಳೋ, ಪೂರ್ವ ಕವಿಗಳ ಸರಣಿಯನ್ನು ಹೋಲುವ ಕಾವ್ಯ ಭಾಗಗಳೂ ಹೇರಳವಾಗಿವೆ. ರಾ|| ರಾ|| ಹರಿಭಾ ಪ್ರಆಪಸೀ ಎಂಬವರೊಬ್ಬರೇ ಉತ್ಕೃಷ್ಟವಾದ ಕಥೆಗಳನ್ನು ಸ್ವತಂತ್ರವಾದ ಸಂವಿಧಾನದಿಂದ ರಚಿಸುವವರಿದ್ದು, ಇಂಗ್ಲಿಷ್ ಫ್ರೆಂಚ್‌ ತರದ ಕಥೆಗಳಾಗಬೇಕಾದರೆ ಮರಾಠಿಗೆ ಇನ್ನೂ ಐನೂರುವರ್ಷ ಗಳುಬೇಕೆಂದು ಪೂರ್ವೋಕ್ತ ರಾಜವಾಡೆಯವರು ಒಂದೆಡೆ ಬರೆದಿದ್ದಾರೆ: ಸ್ವತಂತ್ರ ವಾದ ಕಥೆಗಳು ಕನ್ನಡದಲ್ಲಿ ತೀರ ಕಡಮೆಯಾಗಿರುತ್ತವೆ. ಸಯಮಕ ನಿರ್ಯಮಕ ಕವಿತೆಯ ವಿಷಯವಾಗಿ ಎರಡು ಸಂಗಡಗಳಾಗಿ ಮರಾಠಿ ಗರಲ್ಲಿ “ ನ ಭೂ ತೋ ನ ಭವಿಷ್ಯ ತಿ” ಯಾವ ಜಗಳಗಳು ಕೇಳಿ ಬಂದು ಮಧ್ಯಸ್ಥರಾಗಿ ದೂರನಿಂತು ಕೇಳುವವರಿಗೂ ಅದರಿಂದ ಉತ್ಸಾಹವುಂಟಾಗುವುದು, ಕನ್ನಡಕವಿತೆಯ ಪಾದಗಳ ಆದ್ಯಕ್ಷರ ದ್ವಿತೀಯಾಕ್ಷರದ ಯಮಕವನ್ನು ಕಿತ್ತು ಹಾಕುವ ಸುದ್ದಿಯು ಬಹಳಸೌಮ್ಯವಾಗಿ ಕೇಳಿ ಬರುತ್ತದೆ. ಸಾದಾ೦ತದಲ್ಲಿ ಯಮಕವು ಕವಿತೆಯ ಸೌಭಾಗ್ಯ ತಿಲಕವೆಂದು ಒಬ್ಬರೆನ್ನುವರು. ಸಂಸ್ಕೃತದಲ್ಲಿಲ್ಲದುದು ಏತಕ್ಕೆಂದು ಇನ್ನೂ ಜ್ವರು ವಾದಿಸುವರು. ಆವೇಶವೂ ಅಭಿನಿವೇಶವೂ ಉಳ್ಳ ಈವಾದಾರ೦ಭವಿಜೃಂ ಭಣೆಯು ನಮ್ಮಲ್ಲಿಯೂ ಬರಬೇಕೆಂದು ಬಹಳವಾಗಿ ಇಚ್ಚಿಸುತ್ತೇನೆ, “ ಅರುಹನ ಮೂರ್ತಿಯಂತಿರೆ ನಿರಾಭರಣಂ ಮೆರೆವಂತೆ ಪೇಟ್ಟ ಪೆಂ ಚರಿತಪುರಾಣವಂ” ಎಂಬಲ್ಲಿ ಜನಾರ್ದನಕವಿಯ ಅಲೌಕಿಕವಾದ ದೇವಭಕ್ತಿ ವ್ಯಕ್ತವಾಗುವುದು, ಅವನು ನಿರಾ ಭರಣವಾಗಿ ಕವಿತೆಯನ್ನು ಮಾಡಿದಂತೆ, ನಿಯಮಕ ನಿಷ್ಠಾ ಸಕವಿತೆಯನ್ನು ಇಂಗ್ಲಿಷ್ ಸಂಸ್ಕೃತದಂತೆ ನಾವೂ ಇನ್ನೇಕೆ ಮಾಡಬಾರದು ? ರ್೮