ಕವಿಕಾರ್ಯ ಪ್ರಶಂಸೆ. MrMM ೧ • 7, - *~ * * * * * - - -*-* * ** *" # # A # /* * ಗ್ರಂಥ ಲೇಖನವನ್ನೂ ರಚಿಸುತ್ತಿರುವಾಗ ನಮ್ಮ ಕಣ್ಣಿನ ನೋಟವು ಎದರು ಗೋಡೆಯ ಮೇಲೆ ಬಿದ್ದಿದ್ದರೂ ಆ ಗೋಡೆಯ ಮೇಲೆ ಅಡ್ಡಾಡುವ ಹುಳುಗ ಭೂ, ಅವುಗಳ ವ್ಯಾಪಾರವೂ ಗೊತ್ತಾಗುವುದಿಲ್ಲ, ಸ್ನೇಹಿತರೊಡನೆ ವಿನೋದವಾಗಿ ಮಾತನಾಡುತ್ತ ವಾಯುವನ್ನು ಸೇವಿಸುವ ಉದ್ದೇಶದಿಂದ ಹೊರಗಡೆ ಸಂಚರಿಸು ತಿರುವಾಗ ನಡೆದ ದಾರಿಯೂ, ಆ ದಾರಿಯಲ್ಲಿ ಕಂಡ ವಸ್ತುಗಳೂ, ನಡೆದ ಸಂಗ ತಿಯ ಗೊತ್ತು ಹತ್ತುವುದಿಲ್ಲ, ಹೀಗಾಗುವದಕ್ಕೆ ಕಾರಣವೇನು ? ವಸ್ತುಗತವಾ ದ ತೇಜ:ಪರಂಪರೆಯ ಕಾರ್ಯಗಳು ಬಹಿರಿಂದ್ರಿಯಗಳ ಮೇಲೆ ನಡೆಯುತ್ತಲೇ ಇದ್ದ ರೂ ವಸ್ತು ಜ್ಞಾನವು ಯಥಾವತ್ತಾಗಿ ಉಂಟಾಗುವುದಿಲ್ಲ, ಆದ್ದರಿಂದ ಇಂದ್ರಿ ಯಗಳಲ್ಲಿ ಉಂಟಾದ ಸಂಸ್ಕಾರಗಳು ಪ್ರಯೋಜನಕಾರಿಗಳಾಗಲಿಲ್ಲ, ಹೀಗಾಗಲು ಕಾರಣವೇನು ? ಎಂದು ಕೇಳಿದರೆ ಆಗ ನಮ್ಮ ಮನಸ್ಸು ಬೇರೆ ಕಡೆಗೆ ಇದ್ದಿತು, ಈ ಸಂಸ್ಕಾರಗಳ ಕಡೆ ಇರಲಿಲ್ಲ ಎಂದೇ ಹೇಳಬೇಕು, ಆದ್ದರಿಂದ ಆತ್ಮನು ಮನ ಸೃನ್ನು ಪ್ರೇರಿಸಿ ಎಂದರೆ-ಆ ಇಂದ್ರಿಯಗಳನ್ನು ವಸ್ತುಗಳ ಮೇಲೆ ಮುಟ್ಟುವಂತೆ ಮಾಡಿ ವಸ್ತುಗಳ ರೂಪಾದಿಗಳ ಪರಿಚಯವನ್ನು ಒಳಕ್ಕೆ ತೆಗೆದುಕೊಂಡ ಮೇಲೆ ವಸ್ತು ಸಾಕ್ಷಾತ್ಕಾರವು ಉಂಟಾಯಿತು ಎಂದು ಹೇಳಿದಂತಾಯಿತು, ಪಾಶ್ಚಾತ್ಯರು ಹೇಳುವ ವಸ್ತು ಸಾಕ್ಷಾತ್ಕಾರಕ್ಕೆ ಕಾರಣವು ವಸ್ತು ಜ್ಞಾನವು ಬಹಿರಿಂದ್ರಿಯದ ಮೂಲಕ ಉಂಟಾಗುವ ಕ್ರಮವನ್ನು ತಿಳಿಸುವ ಪ್ರಕಾರವಾಯಿತು, ಆದ್ದರಿಂದ ಈ ಎರಡು ಪ್ರಕಾರವೂ ಒಂದೇ ವಿಷಯವನ್ನು ಎರಡು ಪ್ರಕಾರದಲ್ಲಿ ತಿಳಿಸಿತು. ಪರಸ್ಪರ ವಿರೋಧವಿಲ್ಲ ಎಂಬುದು ನಮ್ಮ ಅಭಿಪ್ರಾಯವು. - ಲೋಕ ಪರಿಚಯವನ್ನು ಮಾಡುವ ಕಾಲದಲ್ಲಿ ಮನಸ್ಸಿನಲ್ಲಿ ಉಂಟಾಗುವ ಒಂದುವಿಧವಾದ ಅನುಕೂಲ ಪ್ರತಿಕೂಲರೂಪವಾದ ಸಂಸ್ಕಾರ ವಿಶೇಷಗಳೇ ಸುಖದು:ಖವೆನಿಸಿಕೊಳ್ಳುವುವು. ನಾನು ಸುಖಪಡುತ್ತೇನೆ, ನಾನು ದುಃಖಪಡುತ್ತೇನೆ. ಎಂದಲ್ಲವೆ ವಾಡಿಕೆಯಲ್ಲಿರುವುದು? ಕಣ್ಣು ಸುಖಪಟ್ಟಿತು; ಮೂಗು ಸುಖಪಟ್ಟಿತು; ಮೈ ದು:ಖಹೊಂದಿತು ಎಂದು ಹೇಳುವುದಿಲ್ಲ, ಇಂದ್ರಿಯ ದ್ವಾರಾ ಮನಸ್ಸಿನಲ್ಲಿ ಅನುಕೂಲ ಪ್ರತಿಕೂಲ ಸಂಸ್ಕಾರದಿಂದ ಉಂಟಾದ ಸುಖದು:ಖಜ್ಞಾನವನ್ನು ನಾವು ಅನುಭವಿಸುವೆವು. ಅಥವಾ ಮನಸ್ಸಿನಲ್ಲಿ ಸುಖದು:ಖಜ್ಞಾನವು ಉಂಟಾಗುವುದು. ಏವಂಚ ಲೋಕಪರಿಚಯವನ್ನು ಇಂದ್ರಿಯಗಳ ಸಹಾಯದಿಂದ ಮಾಡುವ ಕಾಲ ದಲ್ಲಿ ಇಂದ್ರಿಯಗಳಿಗೂ ವಸ್ತುಗಳಿಗೂ ಅನುಕೂಲ ವೃತ್ತಿಯಿಂದ ಹುಟ್ಟುವಜ್ಞಾನವೇ
ಪುಟ:ಕವಿಕಾರ್ಯಪ್ರಶಂಸೆ.djvu/೧೩
ಗೋಚರ